ಸಾಂಸ್ಕೃತಿಕ ಜಗತ್ತು; ಕೆಲ ವಿಮರ್ಶಾತ್ಮಕ ಪ್ರತಿಸ್ಪಂದನೆಗಳು- ಸಂಪ್ರದಾಯ ಮತ್ತು ಆಧುನಿಕತೆಗಳನ್ನು ಗ್ರಹಿಸುವ ಉಪಕ್ರಮಗಳು ಕಾಲ ಕಾಲಕ್ಕೆ ಬದಲಾಗುತ್ತಲೇ ಬಂದಿವೆ. ಅದು ಭಾಷೆ, ಮೀಮಾಂಸೆ, ಬದುಕು , ಸಂಸ್ಕೃತಿ ಮುಂತಾದ ಪರಿಭಾಷೆಗಳ ಹಿನ್ನೆಲೆಯಲ್ಲಿ ಕೂಡಾ ಎಲ್ಲಾ ಕಾಲಕ್ಕಿಂತ ಇವತ್ತು ಹೆಚ್ಚು ವ್ಯಾಪಕವಾದ ಚರ್ಚೆಗಳು ನಡೆಯುತ್ತಿವೆ. ಸಾಹಿತ್ಯ ಎಂದರೆ ಏನು ಅದಕ್ಕೂ ಇತರ ಜ್ಞಾನ ಶಿಸ್ತುಗಳಿಗೂ ಇರುವ ಅಂತರ ಸಂಬಂಧದ ನೆಲೆಗಳಾವುವು, ಸಂಸ್ಕೃತಿ ಅಧ್ಯಯನ ಯಾಕೆ ಮತ್ತು ಹೇಗೆ ವಿಮರ್ಶೆ ಮಾನದಂಡಗಳು ಯಾವುವು ಮತ್ತು ಯಾಕೆ ಕಾಲದಿಂದ ಕಾಲಕ್ಕೆ ಹೇಗೆ ಭಿನ್ನವಾಗುತ್ತವೆ ಮುಂತಾದ ಪ್ರಶ್ನೆಗಳನ್ನು ವಿವರಿಸಿಕೊಳ್ಳಲಾಗುತ್ತಿದೆ.
ಇಂತಹ ಸೂಕ್ಷ್ಮ ಸಂಗತಿಗಳನ್ನು ಹಿನ್ನೆಲೆಯಾಗಿಟ್ಟುಕೊಂಡ ’ಅನುಕ್ರಮ’ ಕೃತಿಯಲ್ಲಿನ ಲೇಖನಗಳಲ್ಲಿ ಅನ್ವಯಿಕ ನೆಲೆಗಳಲ್ಲಿ ಚರ್ಚಿಸಲಾಗಿದೆ ಎಂಬುದು ಗಮನಾರ್ಹ.
ಲೇಖಕ ಶ್ರೀಧರ್ ಹೆಗಡೆ ಭದ್ರನ್ ವಿದ್ವಾಂಸರಷ್ಟೇ ಅಲ್ಲ, ಸಂಸ್ಕೃತಿ ಚಿಂತಕರೂ ಹೌದು. ತಮ್ಮ ಅಪಾರ ಪರಿಶ್ರಮ, ವ್ಯಾಪಕ ಓದು, ಅನನ್ಯ ಒಳನೋಟ, ವಿನಯವಂತಿಕೆ ಹಿನ್ನೆಲೆಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ನಡೆಸುವ ಅನುಸಂಧಾನ ಕನ್ನಡ ಸಂವೇದನೆಯ ಬೇರುಗಳನ್ನು ಶೋಧಿಸುವ, ಕಾರಣಕ್ಕೆ ಗಮನಾರ್ಹವಾದದ್ದು.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನಲ್ಲಿ ಜನನ. ಮೂರೂರು. ಕುಮಟಾ, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್‌ನಲ್ಲಿ ಬಂಗಾರದ ಪದಕಗಳೊಂದಿಗೆ ಕನ್ನಡ ಎಂ.ಎ., ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ಪ್ರಾಚ್ಯಲೇಖನ ಅಧ್ಯಯನ, ಬಸವ ಅಧ್ಯಯನ, ಟ್ರಾನ್ಸ್‌ಲೇಷನ್, ಜೈನಶಾಸ್ತ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಆಧುನಿಕ ಕನ್ನಡ ಮಾಹಾಕಾವ್ಯಗಳು-ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜು, ಧಾರವಾಡದ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಕನಕ ಅಧ್ಯಯನ ಪೀಠಗಳಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಹಂಗಾಮಿ ವಾರ್ತಾವಾಚಕ, ಪ್ರಸ್ತುತ ಧಾರವಾಡ ತಾಲೂಕಿನ ನಿಗದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ...
READ MORE