ಇದೊಂದು ಆಕರ ಸೂಚಿ, ಬೇಂದ್ರೆಯವರ ೩೦ ಕವನಗಳಲ್ಲಿನ ಕವನದ ಮೊದಲ ಚರಣ, ಕವನ ಶೀರ್ಷಿಕೆ, ಕವನ ಸಂಖ್ಯೆ ಹಾಗೂ ಸಂಕಲನಗಳ ಮಾದರಿಗಳನ್ನು ಅಕಾರಾದಿಯಲ್ಲಿ ಕೊಡುವ ಕೈಪಿಡಿಯಾಗಿದ್ದು ಇದು ಬೇಂದ್ರೆಯವರ ಒಟ್ಟು ಕವನಸಂಕಲನಗಳು, ಪ್ರತೀ ಸಂಕಲನದಲ್ಲಿನ ಕವನಗಳ ಸಂಖ್ಯೆ, ಬದುಕಿನ ಮಹತ್ವದ ಘಟನೆಗಳು ಹಾಗೂ ಒಟ್ಟು ಅಕರ ಕೃತಿಗಳ ವಿವರಗಳನ್ನು ನೋಡಬಯಸುವವರಿಗೆ ಸಹಕಾರಿಯಾಗಿದೆ. ಈ ಸಂಕಲನವು ಒಳಗೊಂಡಿರುವ ಅಧ್ಯಾಯಗಳೆಂದರೆ: ಅಂಬಿಕಾತನಯದತ್ತರ ಕವನ ಸಂಕಲನಗಳ ಅಕಾರಾದಿ ,ಕವನ ಸಂಕಲನಗಳ ಪ್ರಥಮ ಆವೃತ್ತಿ ಮುಖಪುಟಗಳು , ಮೊದಲ ಚರಣಗಳ ಅಕಾರಾದಿ , ಕವನ ಶೀರ್ಷಿಕೆಗಳ ಅಕಾರಾದಿ
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...
READ MORE