ಕುವೆಂಪು ಒಬ್ಬ ರಸಋಷಿ. ವಿರಳಾತೀತ ವಿರಳ ಕವಿ. ಅವರು ಕಾವ್ಯವನ್ನೇ ಬದುಕಿದರು. ಇಂತಹ ವಿಚಾರ ಕ್ರಾಂತಿಯ ಸಿಡಿಮದ್ದಾಗಿ ಸಾಹಿತ್ಯ ರಚಿಸಿದ ಕುವೆಂಪುವಿನ ಸಮಗ್ರ ಆಯಾಮಗಳನ್ನು ವಿಮರ್ಶೆಗೆ ಒಳಪಡಿಸಿದರೂ ಅದರಾಚೆಗೆ ಇರುವ ಮಾನವೀಯತೆಗೆ ಮಾತ್ರ ತಟ್ಟುತ್ತಾರೆ. ಕುವೆಂಪು ಸಾಹಿತ್ಯದ ಕೆಲ ಭಾಗಗಳನ್ನು ತಮ್ಮ ವಿಮರ್ಶೆಗೆ ಆಯ್ದುಕೊಂಡಿರುವ ಹಿರಿಯ ಸಾಹಿತಿ ಸಿ.ಪಿ. ಕೃಷ್ಣಕುಮಾರ (ಸಿಪಿಕೆ) ಅವರು ಕುವೆಂಪು ಅವರ ಮನದ ಆಶಯಗಳಿಗೆ ಸಮೀಪಿಸಿದ್ದಾರೆ. ಮಹಾಲೇಖಕ, ಚಿತ್ರಾಂಗದಾ, ಶ್ರೀ ರಾಮಾಯಣ ದರ್ಶನದಲ್ಲಿ ಸಂಸಾರ ಚಿತ್ರಗಳು, ಶ್ಮಶಾನ ಕುರುಕ್ಷೇತ್ರಂ, ಮಲೆನಾಡಿನ ಚಿತ್ರಗಳು, ಕಾದಂಬರಿಗಳಲ್ಲಿ ಜೀವನದೃಷ್ಟಿ, ಭಾವಗೀತ ಕಾವ್ಯ, ಮನೆಮನೆಯ ತಪಸ್ವಿನಿಗೆ, ನಾಡು-ನುಡಿಗಳನ್ನು ಕುರಿತು, ದೇವರನ್ನು ಕುರಿತ ಧೋರಣೆ, ಶೈಕ್ಷಣಿಕ ವಿಚಾರಗಳು ಹಾಗೂ ಕಾವ್ಯ ಮೀಮಾಂಸೆಯ ಕಸಿ ಹೀಗೆ ಒಟ್ಟು 12 ಅಧ್ಯಾಯಗಳಡಿ ವಿಮರ್ಶಿಸಲಾಗಿದೆ.
ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು. ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು. 1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...
READ MORE