ಆಯ್ದ ಕುವೆಂಪು ಕವಿತೆಗಳು

Author : ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)

Pages 216

₹ 40.00




Published by: ಚೇತನ ಬುಕ್ ಹೌಸ್
Address: ಅಂತನಾದ್ರಿ, ರೇಣುಕಾಚಾರ್ಯ ದೇವಸ್ಥಾನ ರಸ್ತೆ, ಲಕ್ಷಣ ಟಾಕೀಸ್ ಹಿಂಬಾಗ, ಮೈಸೂರು - 570013
Phone: 8152099996

Synopsys

ಕುವೆಂಪು ಅವರ ಶಿಷ್ಯರಾದ ಸಿ.ಪಿ.ಕೆ ಅವರು ತಮ್ಮ  ಗುರುಗಳ ಕವಿತೆಗಳನ್ನು ಆಯ್ದು ಈ ಸಂಕಲನದಲ್ಲಿ ಸೇರಿಸಿದ್ದಾರೆ. ಕುವೆಂಪು ಅವರ ಸಾವಿರಕ್ಕೂ ಹೆಚ್ಚು ಕವಿತೆಗಳ ಪೈಕಿ ಸೊಗಸಾದ-ಉತ್ತಮ ಪದ್ಯಗಳನ್ನು ಸಿ.ಪಿ.ಕೆ ಅವರು ಆಯ್ಕೆ ಮಾಡಿದ್ದಾರೆ. ಕುವೆಂಪು ಅವರ ಕವಿತೆಗಳ ಸೊಗಸುಗಾರಿಕೆ ಮತ್ತು ಅವರ ಸೌಂದರ್ಯವನ್ನು ಈ ಸಂಕಲನದ ಕವಿತೆಗಳು ಬಿಂಬಿಸುತ್ತವೆ. ಸಿ,ಪಿ. ಕೃಷ್ಣಕುಮಾರ್ ಆಯ್ಕೆಯ ಮಹತ್ವವೂ ಅರಿವಿಗೆ ಬರದೇ ಇರದು.

About the Author

ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)
(08 April 1939)

ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು.  ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು.  1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...

READ MORE

Related Books