ಪಾರಂಪರಿಕ ಹಾಗೂ ಸಾಂಪ್ರದಾಯಿಕ ವಿಮರ್ಶೆ ಮಾರ್ಗಗಳು ಒಳಗೊಂಡಂತೆ ಆಧುನಿಕ ಮಾರ್ಗಗಳು ಹಾಗೂ ರೂಪು ಪಡೆದ ನೂತನ ತತ್ವಗಳು ಮತ್ತು ವಿಮರ್ಶೆ ಪರಿಕಲ್ಪನೆಯು ಪಡೆದುಕೊಂಡ ನೂತನ ಪ್ರಯೋಗಗಳು ಇತ್ಯಾದಿ ಕುರಿತು ಚಿಂತನೆಯುಳ್ಳ ಚರ್ಚೆ ಈ ಕೃತಿಯ ಜೀವಾಳವಾಗಿದೆ. ಲೇಖಕ ಡಾ. ಕೆ.ಕೇಶವ ಶರ್ಮ ಅವರು ಈ ಕುರಿತು ತೌಲನಿಕವಾಗಿ ಅಧ್ಯಯನ ಮಾಡಿದ ಕೃತಿ ಇದು.
ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ...
READ MORE