ಲೇಖಕಿ ಡಾ. ಸೌಮ್ಯ ಹೇರಿಕುದ್ರು ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆರಿಕುದ್ರು ಗ್ರಾಮದವರು. ಕನ್ನಡ ಸ್ನಾತಕೋತ್ತರ ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಆಧುನಿಕ ಕಾವ್ಯ ಸಣ್ಣಕತೆ, ರಂಗಭೂಮಿ ಮತ್ತು ಸಂಶೋಧನೆ ಅವರ ಆಸಕ್ತಿ ಕ್ಷೇತ್ರಗಳು. ತೇಜಸ್ವಿ ಕಥನಗಳ ತಾತ್ವಿಕ ವೈಚಾರಿಕ ವಿಮರ್ಶೆ ಹಾಗೂ ಮರು ಓದು ಅವರ ವಿಶೇಷ ಆಸಕ್ತಿ. ಮೂರು ಚಿನ್ನದ ಪದಕಗಳನ್ನು ಪಡೆದಿರುವ ಲೇಖಕರು ‘ಜ್ಞಾನಮೀಮಾಂಸೆಯ ಆಧುನಿಕ ಜಿಜ್ಞಾಸೆ: ತೇಜಸ್ವಿ ಕಥನ’ ವಿಷಯವಾಗಿ ಪಿ.ಎಚ್.ಡಿ ಪಡೆದಿದ್ದಾರೆ. ಅನೇಕ ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಜರ್ನಲ್ ಗಳಲ್ಲಿ ಪ್ರಕಟಗೊಂಡಿವೆ. 2018 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ ಗಾಗಿ ಆಯ್ಕೆಗೊಂಡಿದ್ದರು.
ಕೃತಿಗಳು; ಕರಾವಳಿ ರಂಗಭೂಮಿ: ಜನಸಂಸ್ಕೃತಿಯ ನೆಲೆಗಳು, ಪರಿಮಿತದ ಬೆಳಗು, ಮತ್ತೆಮತ್ತೆ ತೇಜಸ್ವಿ