ಲೇಖಕಿ ಆಶಾಕುಮಾರಿ ಅವರು ಮೂಲತಃ ಕೊಡಗಿನವರು. ತಂದೆ ಬಡುವಂಡ ಬಿ. ಪೂವಯ್ಯ, ತಾಯಿ ಬಿ.ಪಿ. ಸೀತಮ್ಮ. ’ಬಿ.ಎಂ. ಶ್ರೀಕಂಠಯ್ಯ, ಜಿ. ಎಸ್. ಶಿವರುದ್ರಪ್ಪ, ಜಿ. ಎಸ್. ಭಟ್ಟ, ಕೊಡಗಿನ ಗೌರಮ್ಮ’ ಅವರ ಜೀವನ ಚರಿತ್ರೆಗಳನ್ನು ರಚಿಸಿದ. ’ಮಹಿಳಾ ಕಾವ್ಯದಲ್ಲಿ ಹೆಣ್ಣಿನ ಪರಿಕಲ್ಪನೆ, ಕಾಸ್ತಾಳಿ’ ಅವರ ಸಂಶೋಧನಾ ಕೃತಿಗಳು. ’ಸ್ಪಂದನ, ಯಾರು ಹೆಚ್ಚು? ಹೊನ್ನಹೊಂಗೆ, ಉಳ್ಳವರು ಶಿವಾಲಯ ಮಾಡುವರು, ಸ್ವಾವಲಂಬನೆ ಬದುಕು ಅಥವಾ ಉದ್ಯೋಗ, ನಂಬಿಕೆಗಳು’ ಅವರ ಮತ್ತಿತರ ಕೃತಿಗಳು.