ಡಾ. ಮುಜಾಫರ್ ಅಸ್ಸಾದಿ ಅವರು ಮಂಗಳೂರು ವಿ.ವಿ.ಯಿಂದ ಸ್ನಾತಕೋತ್ತರ ಪದವಿ, ನವದೆಹಲಿಯ ಜೆಎನ್ ಯು ನಿಂದ ಎಂ.ಫಿಲ್ ಹಾಗೂ ಪಿಎಚ್ ಡಿ ನಂತರ ಶಿಕಾಗೋ ವಿ.ವಿ.ಯಿಂದ ರಾಕ್ ಫೆಲ್ಲರ್ ಫೆಲೋ, ಪೋಸ್ಟ್ ಡಾಕ್ಟೊರಲ್ ಪದವೀಧರರು. ಈವರೆಗೆ 11 ಕೃತಿಗಳನ್ನು ರಚಿಸಿದ್ದಾರೆ. ಬುಡಕಟ್ಟು ಸಮುದಾಯಗಳ ಸ್ಥಳಾಂತರ ಕುರಿತ ಹೈಕೋರ್ಟ್ ಸಮಿತಿ ಅಧ್ಯಕ್ಷರಾಗಿ, ವರದಿ ನೀಡಿದ್ದಾರೆ. ಸದ್ಯ, ಮೈಸೂರು ವಿ.ವಿ.ಯ ರಾಜ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕರು.
ಕೃತಿಗಳು: ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ.
ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ಬಹುಮಾನ