ಲೇಖಕ ವೆಂಕಟೇಶ ಇಂದ್ವಾಡಿ ಅವರು ಮೂಲತಃ ಮೈಸೂರಿನವರು. ಸದ್ಯ, ಹಂಪಿಯ ಕನ್ನಡ ವಿ.ವಿ. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರು.
ಕೃತಿಗಳು: ಧರೆಗೆ ದೊಡ್ಡವರ ಕತೆ : (ಸಂಪಾದನೆ), ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಮಂಟೇಸ್ವಾಮಿ ಪರಂಪರೆ, ನೀಲಗಾರರು: ಸಾಂಸ್ಕೃತಿಕ ಪದಕೋಶ, ದೇವಚಂದ್ರನ ರಾಜಾವಳಿ ಕಥೆ (ಸಂಪಾದನೆ), ದೇವದೇವಿ, ಬಾಲಬಸವ ತುಮುನೆಪ್ಪ ಹಾಡಿದ ಗೋಣಿಬಸಪ್ಪನ ಕಾವ್ಯ, ಮಂಟೇಸ್ವಾಮಿ ಮಹಾಕಾವ್ಯ: ಸಾಂಸ್ಕೃತಿಕ ಮುಖಾಮುಖಿ (ಸಂ), ಮಲೆ ಮಾದಪ್ಪನ ಮಹಾಕಾವ್ಯ: ಸಾಂಸ್ಕೃತಿಕ ಮುಖಾಮುಖಿ , (ಸಂಪಾದನೆ), ಸೂತಕವೆಂಬ ರೂಪಕ : (ಸಂಶೋಧನಾ ಲೇಖನಗಳು), ಸಿರಿ ಜನಪದ ಕಾವ್ಯ: ಸಾಂಸ್ಕೃತಿಕ ಮುಖಾಮುಖಿ , (ಸಂಪಾದನೆ), ಮಂಟೇಸ್ವಾಮಿ ಓದುವ ಪಠ್ಯ, ಏಪ್ಪತ್ತೇಳು ಲೀಲೆಗಳು (ಕವನ ಸಂಕಲನ), ಅಧುನಿಕ ಜನಪದ ರಂಗಭೂಮಿ ಸ್ವರೂಪ ಸಂರಚನೆ. ಪರಮಗುರು ಪರಂಜ್ಯೋತಿ, ಊರೆಂಬುದು ಊರಾಗುವ ಪರಿ,
ಸಂಪಾದಿತ ಪತ್ರಿಕೆಗಳು: ಅಭಿವ್ಯಕ್ತಿ (ಭಿತ್ತಿ ಪತ್ರಿಕೆ), ಕಂಸಾಳೆ (ಸಾಹಿತ್ಯ ಪತ್ರಿಕೆ), ಚೆಲುವ ಕನ್ನಡ (ವಾರ್ತಾಪತ್ರಿಕೆ) ಶೈಕ್ಷಣಿಕ ಸಂಘ/ಸಂಸ್ಥೆಗಳ ಸದಸ್ಯತ್ವ: ಕನ್ನಡ ವಿ.ವಿ. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಅಧ್ಯಯನ ಮಂಡಳಿ ಸದಸ್ಯರು ಹಾಗೂ ಪರೀಕ್ಷಾ ಮಂಡಳಿ ಸದಸ್ಯರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಮಲೆಮಾದೇಶ್ವರ ಬೆಟ್ಟ ವಿಸ್ತಾರಣಾ ಕೇಂದ್ರದ ಶೈಕ್ಷಣಿಕ ಸಲಹಾ ಮಂಡಳಿ ಸದಸ್ಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಮಗ್ರ ಜಾನಪದ ಮತ್ತು ಯಕ್ಷಗಾನ ಸಾಹಿತ್ಯ ಸಂಪುಟಗಳ ಸಂಪಾದಕ ಮಂಡಳಿಯ ಸದಸ್ಯರು, ಮಂಟೇಸ್ವಾಮಿ ಪ್ರತಿಷ್ಠಾನ ಮೈಸೂರು ಸದಸ್ಯರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಶೈಕ್ಷಣಿಕ ಸಲಹಾ ಮಂಡಳಿ ಸದಸ್ಯರು.
ಪ್ರಶಸ್ತಿ-ಬಹುಮಾನ: ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ – ಪುಸ್ತಕ ಬಹುಮಾನ (1996), ಮಂಟೇಸ್ವಾಮಿ ಪ್ರತಿಷ್ಠಾನ ಪ್ರಶಸ್ತಿ (2003), ಉರಿಲಿಂಗಪೆದ್ದಿ ಸಾಹಿತ್ಯ ಪ್ರಶಸ್ತಿ (2012). ಧರೆಗೆ ದೊಡ್ಡವರ ಕಥೆ ಸಂಪಾದಿತ ಕೃತಿ ಮೈಸೂರು ವಿ.ವಿ. ಎಂ,ಎ ಸ್ನಾತಕೋತ್ತರ ಪದವಿಗೆ ಪಠ್ಯ ಪುಸ್ತಕವಾಗಿತ್ತು. ಭಾರತೀಯ ಭಾಷಾ ಸಂಸ್ಥಾನ ಸಂಸ್ಥೆಗೆ ಬರೆದು ಕೊಟ್ಟ ಮಂಟೇಸ್ವಾಮಿ ಪರಂಪರೆ ಚಿತ್ರಕಥೆ ಡಾಕ್ಯುಮೆಂಟರಿ ಆಗಿದೆ. 4ನೇ ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ (2017) ಸರ್ವಾಧ್ಯಕ್ಷರಾಗಿದ್ದರು.