ಲೇಖಕ ಬಿ.ವಿ. ವಸಂತ ಕುಮಾರ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಿಪ್ಪಗೊಂಡನ ಹಳ್ಳಿಯವರು. ಏಳನೇ ಕ್ಲಾಸಿನವರೆಗೂ ತಿಪ್ಪಗೊಂಡನಹಳ್ಳಿಯಲ್ಲಿ ಓದಿ, ನಂತರದ ಓದನ್ನು ಚಿತ್ರದುರ್ಗದಲ್ಲಿ ಮುಂದುವರಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪಿಎಚ್.ಡಿ ಪದವಿ ಪಡೆದರು. ‘ಕೈಲಾಸಂ ಕನ್ನಡ ಒಂದು ಅಧ್ಯಯನ" ಎಂಬುದು ಅವರ ಪಿಎಚ್ ಡಿ ಪ್ರಬಂಧ. ಪ್ರಸ್ತುತ ಮೈಸೂರಿನ ಮಹಾರಾಣಿ ಕಾಲೇಜು ಕಲಾ ವಿಭಾಗದಲ್ಲಿ ಸಹ ಪ್ರಾಧ್ಯಾಪಕರು.
ಕೃತಿಗಳು: ಚೇತನ ಚಿತ್ತಾರ, ಬೆಟ್ಟದ ಮುಡಿಗೆ ಹೂ, ದೇವರ ದಾಸಿಮಯ್ಯ ಮತ್ತು ಅನಂತತೆ, ಒಲುಮೆಯ ಕುಲುಮೆಯಲ್ಲಿ, ಪಿ.ಲಂಕೇಶ್, ಡೆಪ್ಯುಟಿ ಚೆನ್ನಬಸಪ್ಪ, ಕಾಯಕ ಮೀಮಾಂಸೆ, ಕಾವ್ಯ ಪ್ರಪಂಚ, ಕಾದಂಬರಿ: ಜೋಗೇರ ಹುಡುಗಿ, ಸಂಶೋಧನೆ : ಶಿಕಾರಿಪುರ ತಾಲ್ಲೂಕಿನ ಸಾಂಸ್ಕೃತಿಕ ಸಂಕಥನ, ಪಂಪ ಪದ ಪ್ರಪಂಚ ಭಾಗ-1, ಭಾಗ-2, ನಾಟಕ : ಗುಪ್ತಗಾಮಿನಿ, ಶರಣು ಶರಣಾರ್ಥಿ, ದುರ್ಯೋಧನನ್, ಇತರ, ಸಂಪಾದನೆ: ಪ್ರಾಚೀನ ಕನ್ನಡ ಕಾವ್ಯಭಾಗ-3,