ವಿಸ್ತರಿಸುವ ವರ್ತುಲ

Author : ಬಿದರಹಳ್ಳಿ ನರಸಿಂಹಮೂರ್ತಿ

Pages 484

₹ 380.00




Year of Publication: 2015
Published by: ಪುಣ್ಯ ಪ್ರಕಾಶನ
Address: ನಂ-2, ಮಂಚೋಹಳ್ಳಿ ಕಾಲೋನಿ, ಬೆಂಗಳೂರು- 560091

Synopsys

‘ವಿಸ್ತರಿಸುವ ವರ್ತುಲ’ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರ ವಿಮರ್ಶಾ ಲೇಖನಗಳ ಸಂಕಲನ. ಸತ್ವನಿಷ್ಠೆ ಮತ್ತು ಸತ್ಯನಿಷ್ಠುರತೆಗೆ ಹೆಸರಾದ ಕನ್ನಡ ವಿಮರ್ಶಾ ಪ್ರಜ್ಞೆಯ ಪರಂಪರೆಗೆ ಅನುಗುಣವಾಗಿದೆ ಈ ಲೇಖನಗಳು. ಮೂರುದಶಕಗಳಿಂದ ರಚಿತವಾಗುತ್ತ ಬಂದಿರುವ ವಿಮರ್ಶಾ ಲೇಖನಗಳನ್ನು ವಿಸ್ತರಿಸುವ ವರ್ತುಲಗಳಲ್ಲಿ ಜೋಡಿಸಲಾಗಿದೆ. ಮೊದಲ ವರ್ತುಲದಲ್ಲಿ ಹೊಸಗನ್ನಡ ಕಾವ್ಯಾಧ್ಯಯನದ ಲೇಖನಗಳಿದ್ದರೆ ಎರಡನೇ ವರ್ತುಲದಲ್ಲಿ ಹೊಸಗನ್ನಡ ಗದ್ಯಾಧ್ಯಯನದ ಲೇಖನಗಳಿವೆ. ಮೂರನೇ ವರ್ತುಲ ನಾಟಕ ನಿಘಂಟು ಪ್ರವಾಸಕಥನ ಆತ್ಮಕಥನ ಸಂಸ್ಕೃತಿ ಸಾಮಾಜಿಕ ಹೋರಾಟದಂಥ ಸಂಕೀರ್ಣ ವಿಷಯಗಳನ್ನು ಚರ್ಚಿಸಿದರೆ ನಾಲ್ಕನೇ ವರ್ತುಲ ಕನ್ನಡೇತರ ಭಾರತೀಯ ಭಾಷೆಗಳ ಹಾಗೂ ಜಾಗತಿಕ ಭಾಷೆಗಳ ಸಾಹಿತ್ಯಿಕ ಕರ್ತೃಗಳ ಅನುಸಂಧಾನಕ್ಕೆ ಮೀಸಲಾಗಿದೆ. ಹೆಚ್ಚೆಚ್ಚು ಓದುಗರನ್ನು ಮುಟ್ಟಿತಟ್ಟುತ್ತ ವಿಸ್ತಾರಗೊಳ್ಳುವ ಸಾಹಿತ್ಯಕ ವರ್ತುಲಗಳಂತೆ ಇವನ್ನು ಪರಿಭಾವಿಸಬಹುದಾಗಿದೆ.

About the Author

ಬಿದರಹಳ್ಳಿ ನರಸಿಂಹಮೂರ್ತಿ
(05 February 1950)

ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು:  ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001),  ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...

READ MORE

Related Books