ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ವಿಮರ್ಶೆ-1 ಕೃತಿಯು 1926 ಹಾಗೂ 1933 ರಲ್ಲಿ ಪ್ರಕಟವಾಗಿದ್ದು, ಇದೀಗ ಮೂರನೇ ಮುದ್ರಣ . ಸಾಹಿತ್ಯದಲ್ಲಿಯ ವಿಮರ್ಶೆಯ ಕಾರ್ಯ, ವೈಷ್ಣವದಾಸರ ಕೀರ್ತನೆಗಳು, ಸತೀಹಿತೈಷಿಣೀ ಗ್ರಂಥಮಾಲೆ ಹಾಗೂ ಕನ್ನಡ ನಾಡಿನ ಲಾವಣಿ ಸಾಂಗತ್ಯ-ಈ ನಾಲ್ಕು ವಿಷಯಗಳ ಶೀರ್ಷಿಕೆಯಡಿ ಬರೆದ ಸುದೀರ್ಘ ವಿಮರ್ಶಾತ್ಮಕ ಲೇಖನಗಳಿವೆ. ಇವು ಪ್ರಬುದ್ಧ ಕರ್ಣಾಟಕ, ಜಯಕರ್ಣಾಟಕ, ಕೃಷ್ಣಸೂಕ್ತಿ ಒಳಗೊಂಡು ಇತರೆ ಪತ್ರಿಕೆಗಳಲ್ಲೂ ಪ್ರಕಟವಾಗಿದ್ದವು. ವಿಮರ್ಶೆಯ ಮೂಲ ಯಾವುದು, ಅದರ ಕಾರ್ಯವೇನು, ಸ್ವರೂಪವೇನು ಇತ್ಯಾದಿ ಅಂಶಗಳು ಕೃತಿಯ ವಿಸ್ತಾರ-ಆಳಕ್ಕೆ ಪುಷ್ಠಿ ನೀಡಿವೆ.
‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...
READ MORE