ಲೇಖಕರಾದ ಗಣಪತಿ ಕೆ. ಹೆಗಡೆ ಅವರು ಸ್ವತಃ ಕವಿತೆಗಳನ್ನು ಬರೆದು ಕವಿಯಾಗಲು ಹೊರಟು ತಮ್ಮಲ್ಲಿರುವ ಸಹೃದಯತೆಯಿಂದ ಸಾಹಿತ್ಯ ರಚನೆಯ ಕಡೆಗೆ ಹೊರಳಿ ’ವಿಜಯ್ ಕೃತಿ ಸ್ಪಂದನ’ ಕೃತಿ ರಚಿಸಿದ್ದಾರೆ.
’ವಿಜಯ್ ಕೃತಿಸ್ಪಂದನ ’ ಕೃತಿಯಲ್ಲಿ ಯುವ ಸಾಹಿತಿಯಾದ ಶ್ರೀ ಮುದಲ್ ವಿಜಯ್ ಅವರ ಕಾದಂಬರಿ ಮತ್ತು ಕಾವ್ಯಗಳನ್ನು ಕುರಿತು ವಿಹಾರಯಾತ್ರೆಯಂತೆ ಸಂತೋಷ ಸಂಭ್ರಮಗಳಿಂದ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿದ್ದಾರೆ.
ಜಗತ್ತಿನಲ್ಲಿ ಯಾವ ಯಾವ ಅತ್ಯುತ್ತಮ ಆಲೋಚನೆ ಮತ್ತು ಅನುಭವಗಳಿವೆಯೋ ಅವುಗಳನ್ನು ಅರ್ಥಮಾಡಿಕೊಂಡು ಪ್ರಸಾರ ಮಾಡುವ ಒಂದು ನಿಷ್ಪಕ್ಷಪಾತವಾದ ಪ್ರಯತ್ನವೇ ವಿಮರ್ಶೆ ಎಂಬ ಮಾತನ್ನು ವಿಜಯ್ ಅವರ ಕೃತಿಗಳ ಬಗ್ಗೆ ಗಣಪತಿ ಹೆಗಡೆ ಅವರು ಬರೆದಿರುವ ’ ವಿಜಯ್ ಕೃತಿಸ್ಪಂದನ’ ಕೃತಿಯಲ್ಲಿ ಕಾಣಬಹುದು.