ಪತ್ರಕರ್ತ, ಲೇಖಕ ಡಾ.ಟಿ.ರಾಜೇಂದ್ರ ತಗಡ್ಲಿ ಅವರ ವಿಮರ್ಶಾತ್ಮಕ ಲೇಖನಗಳ ಸಂಕಲನ. ತಮಗಾದ ಅನುಭವಗಳು, ಮತ್ತು ಗ್ರಹಿಕೆಗಳ ಮೂಲಕ ಅವರು ನಡೆಸಿದ ಅಧ್ಯಯನದ ರೂಪವೇ ಈ ಕೃತಿ. ಪ್ರತಿಯೊಬ್ಬರನ್ನು ಚಿಂತನೆಗೆ ಹಚ್ಚುವ ಶಕ್ತಿ ಈ ಕೃತಿಗೆ ಇದೆ ಎನ್ನಬಹುದು. ಪ್ರತೀ ಬರಹವೂ ಓದುಗರೊಳಗೆ ಜೀವ ಚೈತನ್ಯವನ್ನು ತುಂಬುವುದರಿಂದ ಬದುಕಿಗೂ ಸಾಹಿತ್ಯಕ್ಕೂ ಸಂಬಂಧವಿದ್ದೇ ಇದೆ. ಇದರ ಜೊತೆಗೆ ಲೇಖಕನಾದವನಿಗೆ ಸಾಮಾಜಿಕ ಜವಾಬ್ದಾರಿ ಕೂಡಾ ಮುಖ್ಯವಾದುದು. ಬರಹ ಎನ್ನುವುದು ಬೆಳಕನ್ನು ಕಾಣುವ ದಾಹ. ಅದಕ್ಕೆ ಮಾನವೀಯತೆಯ ಹಂಗಿಲ್ಲದಿದ್ದಲ್ಲಿ ಆ ಬೆಳಕಿಂದ ಸಮುದಾಯಗಳ ಅಂತರಂಗವನ್ನು ಕಾಣಲು ಸಾಧ್ಯವಿಲ್ಲ. ತಾನು ಬಾಳಿಬಂದ ಸಮುದಾಯಗಳು ಅನುಭವಿಸಿದ ತಲ್ಲಣಗಳು ಮತ್ತು ತಾಕಲಾಟಗಳು ಲೇಖಕನಿಗೆ ಅರ್ಥವಾಗಬೇಕು ಮತ್ತು ಅದರಿಂದ ಬಿಡಿಸಿಕೊಳ್ಳುವ ಸಾಧ್ಯತೆಗಳನ್ನು ಬರಹ ಕಂಡುಕೊಳ್ಳಬೇಕು. ಅಂತಹದೇ ಪ್ರಯತ್ನವನ್ನು ರಾಜೇಂದ್ರ ತಗಡ್ಲಿ ಅವರ ಈ ಕೃತಿಯಲ್ಲಿ ಕಾಣಬಹುದಾಗಿದೆ.
ಲೇಖಕ ಟಿ. ರಾಜೇಂದ್ರ ತಗಡ್ಲಿ ಅವರು 1973 ಸೆಪ್ಟಂಬರ್ 19ರಂದು ಜನಿಸಿದರು. ಅವರ ‘ವಿಚಾರ ವಿನ್ಯಾಸ’ ಕೃತಿ 2016ರಲ್ಲಿ ಪ್ರಕಟವಾಗಿದೆ. ...
READ MORE