ಸೃಷ್ಟಿ-ಸೌರಭ

Author : ಸುರೇಂದ್ರಕುಮಾರ ಕೆರಮಗಿ

Pages 209

₹ 100.00




Year of Publication: 2015
Published by: ಸುಕೃತಿ ಪ್ರಕಾಶನ
Address: ಕಲಬುರಗಿ

Synopsys

ಲೇಖಕ ಡಾ. ಸುರೇಂದ್ರಕುಮಾರ ಕೆರಮಗಿ ಅವರ ಕೃತಿ ‘ಸೃಷ್ಟಿ -ಸೌರಭ’ . ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ 45 ಪುಸ್ತಕಗಳ ತತ್ವಗಳನ್ನು ವಿಮರ್ಶಾತ್ಮಕವಾಗಿ ಕಟ್ಟಿಕೊಡುವ ಕೃತಿ ಇದು. ನವೀನ ಕಾವ್ಯ ಪ್ರಾಚೀನ ಕತೆ,ಕಾದಂಬರಿ, ನಾಟಕ, ಚಿಂತನ, ವ್ಯಕ್ತಿಚಿತ್ರಣ, ಆರೋಗ್ಯ,ಆತ್ಮಚರಿತ್ರೆ, ಆಧ್ಯಾತ್ಮವನ್ನು ಹೈದರಾಬಾದ್-ಕರ್ನಾಟಕ ಹಾಗೂ ಕರ್ನಾಟಕದ ಪ್ರಮುಖ ಸಾಹಿತಿಗಳ ಕೃತಿಗಳ ವಿಮರ್ಶೆಯನ್ನು ಒಳಗೊಂಡಿದೆ. ಮಹಾಂತೇಶ್ವರ ಪುರಾಣಗಳಂತೆ ಪ್ರಾಚೀನ ಕೃತಿಗಳ ವಿಮರ್ಶೆ,ಕಾಮಧೇನುವಿನ ದಾರಿಗಳು,ಬದುಕಿನ ಪ್ರಜ್ಞೆ,ನನ್ನ ಸುತ್ತಲಿನ ಜನರು ಮೊದಲಾದ ನವೀನ ಕಾವ್ಯಕೃತಿಗಳ ಚಿಂತನೆ ಮೊದಲು ಮಾಡಿ ಹೈದರಾಬಾದ ಕರ್ನಾಟಕ ಭಾಗದ ಪ್ರಮುಖ ಪ್ರಕಾರಗಳಲ್ಲಿ ಕೆಲಸ ಮಾಡಿದ ಸಾಹಿತಿಗಳ ಕೃತಿಗಳನ್ನು ಇಲ್ಲಿ ವಿಮರ್ಶಿಸಿದ್ದಾರೆ.

About the Author

ಸುರೇಂದ್ರಕುಮಾರ ಕೆರಮಗಿ

ಡಾ. ಸುರೇಂದ್ರಕುಮಾರ್ ಕೆರಮಗಿ ಅವರು ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನವರು. ಸ್ವಾಯತ್ತ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರು. "ಡಾ.ಹಾ.ಮಾ ನಾಯಕ ಅವರ ಅಂಕಣ ಸಾಹಿತ್ಯ ಒಂದು ಅಧ್ಯಯನ" ವಿಷಯವಾಗಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯವು ಇವರಿಗೆ ಪಿಎಚ್ ಡಿ ಪ್ರದಾನ ಮಾಡಿದೆ. ಹಳೆಗನ್ನಡ ಸಾಹಿತ್ಯದಲ್ಲೂ ಇವರಿಗೆ ಆಸಕ್ತಿ. ರಾಷ್ಟ್ರೀಯ,ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕೃತಿಗಳು: ಆಯ್ದ ವೈಚಾರಿಕ ಪ್ರಬಂಧಗಳ ಸಂಗ್ರಹ, ಹಾ.ಮಾ ನಾಯಕ,ಕನ್ನಡದಲ್ಲಿ ಅಂಕಣ ಸಾಹಿತ್ಯ, ಸೃಷ್ಟಿ ಸೌರಭ, ಮಾತು ಮಥಿ ಸಿದಾಗ, ಸಾಹಿತ್ಯ ಸುಧೆ, ಸಾಹಿತ್ಯ ಸಂಜೀವಿನಿ, ಹೈದರಾಬಾದ ಕರ್ನಾಟಕದ ಪ್ರಮುಖ ಕಾದಂಬರಿಕಾರರು, ಮಡಿವಾಳ ...

READ MORE

Related Books