ಅಮೆರಿಕದ ಹೂಸ್ಟನ್ ನಲ್ಲಿ ನೆಲೆಸಿರುವ ವಿಶ್ವನಾಥ ಶರ್ಮ ಅವರ ಕೃತಿ ’ ಶ್ರೀ ಬೇಂದ್ರೆ ಕಾವ್ಯ ಯೌಗಿಕ ದೃಷ್ಟಿ’. ಇದೊಂದು ವಿಮರ್ಶಾತ್ಮಕ ಪ್ರಬಂಧಗಳ ಸಂಕಲನ. ಶ್ರೀ ಬೇಂದ್ರೆ ಕಾವ್ಯಾಭ್ಯಾಸಕ್ಕೆ ಪ್ರೇರಣೆಗಳು, ಕಣ್ಣ ಕಾಣಿಕೆ, ಭಾವಗೀತ, ನಾಕುತಂತಿ, ಜೋಗಿ, ಗಂಗಾವತರಣ ಹೀಗೆ ಆರು ಅಧ್ಯಾಯಗಳಿವೆ. ಲೇಖಕರು ಯೋಗಪಟುವೂ ಆಗಿರುವುದರಿಂದ ಬೇಂದ್ರೆ ಕವನಗಳಲ್ಲಿ ಯೋಗದ ಪ್ರಭಾವದಿಂದ ಭಾವಗಳ ಸೃಷ್ಟಿ, ಬೆಳವಣಿಗೆ ಹಾಗೂ ಪರಿವರ್ತನೆ ಇತ್ಯಾದಿಗಳಿಗೆ ಹೇಗೆ ಮೂಲ ಪ್ರೇರಣೆಯಾಗಿದೆ ಎಂಬುದನ್ನೂ ವಿಶ್ಲೇಷಿಸಿದ್ದಾರೆ. ಕವಿ ಬೇಂದ್ರೆ ಅವರಿಗೆ ಯೋಗದ ಮಹತ್ವ ತಿಳಿದಿದ್ದು, ಅದರ ಪರಿಣಾಮವಾಗಿಯೇ ಭಾವಗಳ ಜೊತೆ ಅವರು ಲೀಲಾಜಾಲವಾಗಿ ಆಟವಾಡಲು ಸಾಧ್ಯವಾಗಿದೆ ಎಂದು ತಮ್ಮದೇ ವೈಚಾರಿಕ ಹಾಗೂ ಭಾವನಾತ್ಮಕ ನೆಲೆಯಲ್ಲಿ ಚಿಂತನೆ ನಡೆಸಿದ್ದು ವಿನೂತನ ಪ್ರಯೋಗ.
ವಿಶ್ವನಾಥ ಶರ್ಮ ಅವರ ಪೂರ್ಣ ಹೆಸರು-ಅಕ್ಕಿಹೆಬ್ಬಾಳು ನಾರಾಯಣಸ್ವಾಮಿ ವಿಶ್ವನಾಥ ಶರ್ಮ. ಚಿಕ್ಕಮಗಳೂರು ಜಿಲ್ಲೆಯ ಬಾಳೇಹೊನ್ನೂರಿನಲ್ಲಿ 1947ರ ಏಪ್ರಿಲ್ ರಂದು ಜನನ. ತಾಯಿ ನರಸಿಪುರದ ಸಾವಿತ್ರಮ್ಮ. ಮೈಸೂರಿನಲ್ಲಿ ಆರಂಭಿಕ ಶಿಕ್ಷಣದ ನಂತರ ಎನ್.ಐ.ಇ. ನಲ್ಲಿ (1969) ಎಂಜಿನಿಯರಿಂಗ್ ಓದಿದರು. ನಂತರ, ಎಂ.ಎಸ್. ಪದವಿಗಾಗಿ ಅಮೆರಿಕದ ಇಲಿನಾಯ್ ಸೇರಿ ಕಂಪ್ಯೂಟರ್ ಡಿಸೈನರ್ ವೃತ್ತಿ(1972) ಆರಂಭಿಸಿದರು. ಕಂಪ್ಯೂಟರ್-ಕಮ್ಯುನಿಕೇಷನ್ ಕ್ಷೇತ್ರದಲ್ಲಿ ದುಡಿಯುತ್ತಾ ಸುಮಾರು 25 ವಿವಿಧ ಪೆಟೆಂಟ್ ಗಳನ್ನು ಪಡೆದಿದ್ದಾರೆ. 1987ರಲ್ಲಿ, ಕ್ರಿಯಾಯೋಗ ದೀಕ್ಷೆ ಪಡೆದು, ಈಗ ಅಮೆರಿಕೆಯಲ್ಲಿ ಪುರೋಹಿತರು. ಜೊತೆಗೆ, ಅಮೆರಿಕನ್ನರಿಗೆ ಸನಾತನ ಧರ್ಮ ಹಾಗೂ ಯೋಗಾಸನ ಶಾಸ್ತ್ರದಲ್ಲಿ ಆಸಕ್ತಿ ಮೂಡಿಸುತ್ತಿದ್ದಾರೆ. ವರಕವಿ ...
READ MORE