ಶ್ರಾವಣ- ಪ್ರತಿಭಾ ತ್ರೈ ಮಾಸಿಕ ಪುಸ್ತಕ ಯೋಜನೆಯ ನಾಲ್ಕನೇ ಕಾಣಿಕೆ. ಸಂಚಯ ಕಲಾಸಕ್ತರ ಬಳಗ ದಿನಾಂಕ 3-2-1991 ರಂದು ಏರ್ಪಡಿಸಿದ್ದ ಕಾರ್ಯಕ್ರಮವೊಂದರ ಪ್ರಬಂಧಗಳ ಸಂಕಲನ. ಈ ಸಂಕಲನದಲ್ಲಿ ಪ್ರಬಂಧ ಲೇಖನಗಳು ಸೇರಿದಂತೆ ಬೇಂದ್ರೆಯವರ ಆಯ್ದ ಬಿಡಿ ಕವಿತೆಗಳ ವಿಶ್ಲೇಷಣೆಗಳಿವೆ.ಇವುಗಳು ಬೇಂದ್ರೆ ಕಾವ್ಯವನ್ನು ಹೊಸದೃಷ್ಟಿಯಲ್ಲಿ ಕಾಣುವ, ಹಳೆಯ ಜಾಡನ್ನು ಪ್ರವೇಶಿಸಿಸುವ ಯತ್ನಗಳಾಗಿಯೂ ಕಂಡು ಬರುತ್ತವೆ. ಕವಿಯೊಬ್ಬನ ಕಾವ್ಯ ನೆಲೆಗಳ ಸಮಗ್ರ ಅಧ್ಯಯನಕ್ಕೆ ಪೂರಕವಾಗಿ ಅವರ ಬಿಡಿ ಕವಿತೆಗಳನ್ನು ವಿಭಿನ್ನ ದೃಷ್ಟಿಗಳಿಂದ ಒಡೆದು ನೋಡುವ ಪ್ರಯತ್ನಗಳೂ ಅಗತ್ಯ. ಆ ರೀತಿ ಬೇಂದ್ರೆ ಕಾವ್ಯದ ಪ್ರಾರಂಭಿಕ ಅಧ್ಯಯನಕ್ಕೆ ಈ ಲೇಖನಗಳು ಸಹಾಯಕವಾಗಿವೆ.