ಲಲಿತ ಕೆ.ಪಿ ಅವರ ಶೋಧನೆಯ ಹಾದಿಯಲ್ಲಿ ಕೃತಿಯು ಲೇಖನ ಕೃಷಿಯಲ್ಲಿ ವಿಮರ್ಶೆಯೂ ಡಾಳಾಗಿಯೇ ಎದ್ದು ಕಾಣುತ್ತದೆ: 100, ಲಲಿತ ಸರಿಗೆ ಮತ್ತು ಸಂಶೋಧನೆಯಲ್ಲಿ ಸಮಾನ ಆಸಕ್ತಿಯಿದೆ, ಹಾಗಾಗಿ ಅವರು ಈ ಜೋಡಿಗಾಲಿಯ ಬೌದ್ದಿಕರಥವನ್ನು ಸಮಾನ ಚೈತನ್ಯದಿಂದ ಮುಂದೆಯು ಮುನ್ನಡೆಸುವ ಎಲ್ಲಾ ಲಕ್ಷಣಗಳೂ ಇವೆ. ಭೋಧನೆ ಅಧ್ಯಯನ ಮತ್ತು ಇತರ ಜವಾಬ್ದಾರಿಗಳ ನಡುವೆ ಅವರು ಒಬ್ಬ ಸಾಹಿತಿಯ ಬಿಡುಗಡೆಯ ಏಕೈಕ ಮಾರ್ಗವಾದ ಬರಹದ ಕಾಯಕವನ್ನು ಬಿಡದೆ ನಡೆಸುವ ಸಂಕಲ್ಪವನ್ನು ಹೊಂದಿದ್ದಾರೆ. ಎಂದು ಸಿ. ನಾಗಣ್ಣ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಲಲಿತ ಕೆ.ಪಿ ಮೂಲತಃ ಕೊಡಗಿನವರು. ಪ್ರಸ್ತುತ್ತ ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಕೃತಿಗಳು: ವಿರಾಜಪೇಟೆ ತಾಲೂಕಿನ ಸ್ಥಳನಾಮಗಳು, ವಿವಕ್ಷಾ,ಜೀವಂತ ಪಳೆಯುಳಿಕೆಗಳ ಕುರಿತು, ವಿವೇಚನೆ,ಶೋಧನೆಯ ಹಾದಿಯಲ್ಲಿ, ಪೊಮ್ಮೋದಿರ ಪೊನ್ನಪ್ಪ, ಕೊಡಗಿನ ಜನಪದ ಕಥೆಗಳು, ಕೊಡಗಿನ ಭಾಷೆ ಮತ್ತು ಸಂಸ್ಕೃತಿ ...
READ MORE