ಷಷ್ಟಿನಮನ

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 204

₹ 105.00




Published by: ಉದಯರವಿ ಪ್ರಕಾಶನ
Address: 1354/1 ಕೃಷ್ಣಮೂರ್ತಿಪುರಂ, ಮೈಸೂರು 570004
Phone: 0821 2332971

Synopsys

’ಷಷ್ಠಿನಮನ’ವು ಭಾಷಣ, ಲೇಖನ, ಮುನ್ನುಡಿಗಳ ಸಂಗ್ರಹ. ಈ ಸಂಕಲನದಲ್ಲಿ 30 ಬರೆಹಗಳಿವೆ. ಸಂಸ್ಕೃತಿ ಕರ್ನಾಟಕ, ವಿಶ್ವಮಾನವ, ಮಾನಸಗಂಗೋತ್ರಿ, ನಮಗೆ ಬೇಕಾಗಿರುವ ಇಂಗ್ಲಿಷ್, ತೀರ್ಥಯಾತ್ರೆ, ಶ್ರೀರಾಮಕೃಷ್ಣ ವಚನವೇದ, ಭಾರತದಲ್ಲಿ ಇಂಗ್ಲಿಷಿನ ಸ್ಥಾನ, ಭಾರತ ವಿಶ್ವವಿದ್ಯಾನಿಲಯಗಳಲ್ಲಿ ಆಧುನಿಕ ಮನಃಶಾಸ್ತ್ರ, ಶ್ರೀ ವಿನೋಬಾಜಿ, ವಿಶ್ವವಿದ್ಯಾ ಮತ್ತು ಪ್ರಸಾರಾಂಗ, ಸಮನ್ವಯ ರಾಷ್ಟ್ರದಲ್ಲಿ ವಿಶ್ವವಿದ್ಯೆ, ಶ್ರೀ ಅರವಿಂದರ ಕಾವ್ಯದರ್ಶನ, ವಿದ್ಯಾರ್ಥಿ ಜೀವನವೂ ಒಂದು ತಪಸ್ಯೆ, ಡಾಕ್ಟರೇಟ್ ಪ್ರಶಸ್ತಿ, ಕೊಲಂಬೊ ಇಂದ ಆಲೋರಕೆ, ಪಂಪನ ಕರ್ಣ, ಮಹಾಪುರುಷ ಸ್ವಾಮಿ ಶಿವಾನಂದರು, ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ, ಶ್ರೀ ರಾಮಕೃಷ್ಣ ಲೀಲಾ ಪ್ರಸಂಗ, ಶ್ರೀ ನೆಹರೂ : ವೈಜ್ಞಾನಿಕ ದೃಷ್ಟಿ ಮತ್ತು ವಿಚಾರ ಬುದ್ದಿ ಎಂಬ ಬರೆಹಗಳಿವೆ. ಈ ಗ್ರಂಥವು 1964ರಲ್ಲಿ ಪ್ರಥಮ ಮುದ್ರಣವಾಗಿತ್ತು.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books