ಮೊದಲಿಗೇ ಹೇಳಬೇಕಾದರೆ, ಕೃತಿಯೊಡನೆ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ಎಲ್ಲ ಮುಖ್ಯಪಾತ್ರ ಘಟನೆಗಳನ್ನು ಕುರಿತು ಮಾಡಿರುವ ತಲಸ್ಪರ್ಶಿ ವಿಶ್ಲೇಷಣೆ, ಕೃತಿಯ ಪ್ರಮುಖ ಭಾಗಗಳ ವಾಕ್ಯಗಳ ಭಾಷಿಕ ಆಯಾಮವನ್ನು ಅದ್ಭುತವಾಗಿ ಗುರುತಿಸಿರುವ ರೀತಿ ಇವೆಲ್ಲವೂ ಓದುಗರಿಗೆ ಶೇಕ್ಸ್‌ಪಿಯರನ ಅಗಾಧ ಕಾವ್ಯಪ್ರತಿಭೆಯನ್ನು ಪರಿಚಯಿಸುವುದಷ್ಟೇ ಅಲ್ಲದೆ ಒಂದು ಪಠ್ಯಕ್ಕೆ ಎಷ್ಟು ಸೂಕ್ಷ್ಮವಾಗಿ ಸ್ಪಂದಿಸಬಹುದು ಎಂಬುದಕ್ಕೆ ಮಾದರಿ ಎನಿಸುತ್ತವೆ. - ಡಾ. ಸಿ.ಎನ್. ರಾಮಚಂದ್ರನ್ ಓದಿನ ವ್ಯವಧಾನ, ಸುರಕ್ಷತೆ ಹಾಗೂ ಸಂವೇದಾಶೀಲತೆಯ ದೃಷ್ಟಿಯಿಂದ ನೋಡಿದರೆ ಗೋವಿಂದರಾಯರ ಬರಹ ಅತ್ಯುತ್ತಮವಾಗಿದೆ. ತಮ್ಮನ್ನು ತಾವೇ ಸಮಗ್ರವಾಗಿ ನಾಟಕದಲ್ಲಿ ತೊಡಗಿಸಿಕೊಂಡು ಭಾಷೆಯೊಂದಿಗೆ ಹೃದಯ ಸಂವಾದದಲ್ಲಿ ತೊಡಗುತ್ತಾರೆ.
ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ರಂಗಭೂಮಿ, ಸಿನಿಮಾರಂಗದ ಒಡನಾಟ ಇವರಿಗಿದೆ. ಸಮಕಾಲೀನ ಪ್ರಜಾಸತ್ತಾತ್ಮಕ ಆಂದೋಲನಗಳಲ್ಲಿ ಭಾಗವಹಿಸಿ ತಮ್ಮ ಜನಪರ ನಿಲುವನ್ನು ಪ್ರಕಟಿಸುವುದು ಅವರಿಗೆ ಸದಾ ಆದ್ಯತೆಯ ವಿಷಯ. ಪ್ರಕಟಿತ ಕೃತಿಗಳು- ಈಶ್ವರ ಅಲ್ಲಾ (ಕಿರುಕಾದಂಬರಿ), ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‌ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು). ...
READ MORE