ಸಂಗಾತಿ ರೂವ್ವ ಬರಸೇನಾ

Author : ಆರ್. ಸುನಂದಮ್ಮ

Pages 300

₹ 180.00




Published by: ಕವಿ ಪ್ರಕಾಶನ
Address: ಕವಲಕ್ಕಿ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
Phone: 94802 11320

Synopsys

ರಾಜ್ಯ ಮಹಿಳಾ ವಿವಿ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿರುವ ಡಾ. ಆರ್. ಸುನಂದಮ್ಮ ಅವರ ಹೆಣ್ಣು ಕಣ್ಣೋಟದ ವಿಮರ್ಶಾ ಲೇಖನಗಳನ್ನು ಈ ಕೃತಿಯೂ ಒಳಗೊಂಡಿದ್ದು, ಇದು ಇವರ ದ್ವಿತೀಯ ವಿಮರ್ಶಾ ಕೃತಿಯಾಗಿದೆ. ಇಲ್ಲಿರುವ 18 ಪ್ರಬಂಧಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಗುಂಪು ಮಹಿಳೆಯ ಬದುಕಿನ ಬಹುಮುಖಿ ನಲೆಗಳನ್ನು ರೂಪಿಸಿದ, ಪ್ರಭಾವಿಸಿದ, ನಿಯಂತ್ರಿಸಿದ ಹಾಗೂ ನಿರ್ದೇಶಿಸಿದ ಸಮಾಜದ ವಿವಿಧ ಶಕ್ತಿಕೇಂದ್ರಗಳ ಉದ್ದೇಶ ಮತ್ತು ತಾತ್ವಿಕತೆಯ ಚರ್ಚೆಗೆ ಮೀಸಲಾದ ಲೇಖನಗಳಾಗಿವೆ. ಎರಡನೆಯದು ಜನಪದ ಕಾವ್ಯ, ನಡುಗನ್ನಡದ ಸಾಹಿತ್ಯವನ್ನು ಸ್ತ್ರೀವಾದಿ ನೆಲೆಯಿಂದ ವಿಶ್ಲೇಷಿಸುವ ಲೇಖನಗಳಾಗಿದೆ. ಉತ್ತರಾದೇವಿ ಯನ್ನು ಸ್ವಾಗತಿಸುತ್ತಾ ಸಂಗಾತಿ ಬಾರೇ ಸಾಧು ಮಣಿಯೇ ಬಾರೆ, ಸಂಗಾತಿ ಸೋತರ ಅಂಗೈಯಲ್ಲಿ ಮಡಿಗೇನು ಜಂಬು ನೇರಳ ತಿನಿಸೇನು ಸಂಗಾತಿ ನಿನ್ನ ರೂವ್ವ ಬರಸೇನು ಎಂದು ಭರವಸೆ ನೀಡುತ್ತಾಳೆ. ಆ ಭರವಸೆ ಹೆಣ್ಣು ಸಕಲ ಕುಲಕ್ಕೆ ನೀಡುವ ಭರವಸೆಯಾಗಿ, ಪದವನ್ನು ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ. ಮಹಿಳೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿ ಕೊಂಡಿದ್ದಾಳೆ. ಮತ್ತು ಅವಳು ನೋಡುವ ಸಮಾಜ ಮತ್ತು ಅವಳನ್ನು ನೋಡುವ ಸಮಾಜ ಎರಡನ್ನೂ ಈ ಕೃತಿಯಲ್ಲಿ ಮುಖಾಮುಖಿ ಗೊಳಿಸಲಾಗಿದೆ. ಹೇಗೆ ನಂಬಿಕೆಗಳು ನಿಧಾನಕ್ಕೆ ಮಹಿಳೆಯ ಶೋಷಣೆಗಳಿಗೆ ಬಳಕೆಯಾಗತೊಡಗಿತು ಎನ್ನುವುದನ್ನು ಜಾಗತಿಕ ಆಚಾರ, ವಿಚಾರಗಳನ್ನಿಟ್ಟುಕೊಂಡು ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ.

About the Author

ಆರ್. ಸುನಂದಮ್ಮ
(22 August 1960)

ಸಂವೇದನಾಶೀಲ ಸ್ತ್ರೀವಾದಿ ಲೇಖಕಿ ಪ್ರೊ.ಆರ್.ಸುನಂದಮ್ಮ ಅವರು ಮೂಲತಃ ಕೋಲಾರ ಜಿಲ್ಲೆಯ ವೆಂಕಟಾಪುರದವರು. ಕತೆ, ಕಾವ್ಯ, ಕಾದಂಬರಿ, ಸಂಶೋಧನಾ ಮತ್ತು ವೈಚಾರಿಕ ಲೇಖನಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ 2003ರಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಸೇರ್ಪಡೆಯಾದ ಅವರು, ಉಪನ್ಯಾಸಕಿಯಾಗಿ, ರೀಡರ್‌ ಆಗಿ, ಸಹ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕನಕದಾಸ ಅಧ್ಯಯನ ಪೀಠದ ಸಂಯೋಜಕರಾಗಿ, ಎರಡು ಅವಧಿಗೆ ಆರ್ಥಿಕ ಅಧಿಕಾರಿಗಳಾಗಿ, ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆಯಾಗಿರುವ ದೇಶದ ಮೊಟ್ಟಮೊದಲ ಮಹಿಳಾ ವಸ್ತು ...

READ MORE

Related Books