ಲೇಖಕ ಅವನೀಂದ್ರನಾಥ್ ರಾವ್ ಅವರ ವಿಮರ್ಶಾ ಲೇಖನಗಳ ಸಂಕಲನ. ಈ ಕೃತಿಯ ಬಗ್ಗೆ ಮುನ್ನುಡಿಯಲ್ಲಿ ಡಾ.ಸಾ.ಶಿ. ಮರುಳಯ್ಯ ಅವರು ’'ಸಂಸ್ಕೃತಿ ಸಂವೇದ' ಸಂಶೋಧಕ, ಸಾಹಿತಿ, ಕವಿ -ಕಲಾವಿದ ಅವನೀಂದ್ರನಾಥ ರಾಯರ ತೆರೆದ ಹೃದಯಕ್ಕೆ ಹಿಡಿದ ಕನ್ನಡಿ.ಇದರಲ್ಲಿ ಹದಿನಾಲ್ಕು ಸಂಶೋಧನಾತ್ಮಕ ಬರಹಗಳಿವೆ. ಅವುಗಳಲ್ಲಿ ಸಾಹಿತ್ಯದ್ದೇ ಸಿಂಹಪಾಲು. ಉಳಿದವುಗಳಲ್ಲಿ 'ಗಣೇಶ ಮುಖೇನ ಭಾರತೀಯತೆ' ಹಾಗೂ 'ಕನಕನಿಗೊಲಿದ ಕೃಷ್ಣನ ಉಡುಪಿ' ಭಕ್ತಿಪ್ರತಿಪಾದಕ ಅಧ್ಯಾತ್ಮ ಕ್ಷೇತ್ರ ಕುರಿತವುಗಳು. 'ವಾರ್ಧಾ ಯಾತ್ರೆ' ಗಾಂಧೀಜಿಯವರ ಕಾರ್ಯಕ್ಷೇತ್ರ ದರ್ಶನದ ತೀರ್ಥಯಾತ್ರೆ. ಡಾ.ಡಿ.ಎಸ್.ಕರ್ಕಿಯವರ ಕುರಿತ ಲೇಖನ ಜನತೆಯಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗ್ರತಗೊಳಿಸುವ ದೇಶಭಕ್ತಿಯ ಆದರ್ಶಪಾಲನೆ. 'ಕರ್ನಾಟಕದ ಇತಿಹಾಸದ ಹೆಜ್ಜೆ ಗುರುತುಗಳು' ಕಾಲಕಾಲಕ್ಕೂ ಬೆಳೆದು ಬಂಡ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಪ್ರಗತಿಯ ಸಂಶೋಧನಾತ್ಮಕ ಸಮೀಕ್ಷೆ’ ಎಂದು ವಿವರಿಸಿದ್ದಾರೆ.
ವೈ. ಅವನೀಂದ್ರನಾಥ್ ರಾವ್ (1971) ದೆಹಲಿಯ ಸಂಸ್ಕೃತಿ ಮಂತ್ರಾಲಯದ ಕೇಂದ್ರ ಸಚಿವಾಲಯ ಗ್ರಂಥಾಲಯದ ಅಧಿಕಾರಿ. ಉಡುಪಿ ಜಿಲ್ಲೆಯ ಎಲ್ಲೂರಿನವರು. ಉಚ್ಚಿಲದ ಸರಸ್ವತಿ ಮಂದಿರ, ಕುಂದಾಪುರದ ಬೋರ್ಡ್ ಹೈಸ್ಕೂಲ್ ಅಲ್ಲದೆ ಅದಮಾರು, ಪೊಲಿಪು, ಸುಳ್ಯದ ಸಬ್ಬಡ್ಕದಲ್ಲಿ ಆರಂಭಿಕ ಶಿಕ್ಷಣ ಪಡೆದರು. ಬ್ರಹ್ಮಾವರದ ಎಸ್.ಎಂ.ಎಸ್ ಮತ್ತು ಮುಲ್ಕಿಯ ವಿಜಯ ಕಾಲೇಜು ಮೂಲಕ ವಾಣಿಜ್ಯ ಪದವಿ ಪಡೆದರು. ಕ್ರಿಕೆಟಿಗನಾಗಿದ್ದ ಇವರು ವಿಶ್ವವಿದ್ಯಾಲಯದ 'ಬಿ.ಸಿ.ಆಳ್ವ ಟ್ರೋಫಿ' ಪಂದ್ಯಾವಳಿಯಲ್ಲಿ ಆಡಿದ್ದರು. ಕೆಲಸಮಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದೋಗಿಯಾಗಿದ್ದರು. ಉನ್ನತ ಶಿಕ್ಷಣದ ಬಳಿಕ ಮೂಡಬಿದರೆ, ಮುಲ್ಕಿ,ಮಂಗಳೂರಿನಲ್ಲಿ ಗ್ರಂಥಪಾಲಕರಾಗಿ ಮತ್ತು ಕೆಲಕಾಲ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದರು. ಮಂಗಳೂರು ...
READ MORE