ಸಂಸ್ಕೃತಿ ಕವಿಕೃತಿ

Author : ಪಿ. ವಿ. ನಾರಾಯಣ

Pages 392

₹ 400.00




Year of Publication: 2021
Published by: ಅನುಗ್ರಹ ಪ್ರಕಾಶನ,
Address: ಕನಕದಾಸನಗರ, ದತ್ತಗಲ್ಲಿ, ಮೈಸೂರು--570022
Phone: 09980808031

Synopsys

ಸಾಹಿತಿ ಡಾ. ಪಿ.ವಿ. ನಾರಾಯಣ ಅವರ ಕೃತಿ-ಸಂಸ್ಕೃತಿ ಕವಿಕೃತಿ. ಪ್ರಕೃತಿಯು ನೈಜವಾಗಿದ್ದು, ಅದಕ್ಕೆ ತನ್ನದೇ ಆದ ನಿಯಮಗಳಿವೆ. ಅವುಗಳನ್ನು ಬದಲಿಸಲಾಗದು. ಆದರೆ, ಮನುಷ್ಯನಿಗೆ ಸಂಸ್ಕೃತಿ ಎಂಬುದು ಇದೆ. ಇದು ಆತನ ನಾಗರಿಕತೆಯ ಫಲ. ಅದಕ್ಕೆಂದೇ ಲೇಖಕರು ಇಲ್ಲಿ ಸಂಸ್ಕೃತಿಯನ್ನು ಕವಿಕೃತಿ ಎಂದೇ ಶೀರ್ಷಿಕೆ ನೀಡಿದ್ದು ಅರ್ಥಪೂರ್ಣವಾಗಿದೆ. ಮನುಷ್ಯನಿಗೆ ಸಾಂಸ್ಕೃತಿಕ ನಿಯಮಗಳು ಹಾಗೂ ಪ್ರಾಣಿಗಳಿಗೆ ಪ್ರಾಕೃತಿಕ ನಿಯಮಗಳು ಅನ್ವಯವಾಗುತ್ತವೆ.  ತಪ್ಪಿದರೆ ಮನುಷ್ಯನು ಪ್ರಾಣಿಗಳಿಗಿಂತ ಭಿನ್ನವಾಗಿರಲಾರ. ಈ ಸಂಸ್ಕೃತಿಯು ಸಾಹಿತ್ಯದ ಫಲ ಎಂಬಂತೆ ಇಲ್ಲಿಯ ವಿಚಾರಗಳು ಹರಡಿಕೊಂಡಿದ್ದು ಈ ಕೃತಿಯ ವಿಶೇಷತೆ.  

About the Author

ಪಿ. ವಿ. ನಾರಾಯಣ
(18 December 1942)

ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...

READ MORE

Related Books