ಚನ್ನಪ್ಪ ಕಟ್ಟಿಯವರ ವಿಮರ್ಶಾ ಲೇಖನಗಳ ಸಂಕಲನ ಸಾರಣೆ. ಈ ಕೃತಿಯಲ್ಲಿ ಚನ್ನಪ್ಪ ಕಟ್ಟಿಯವರು ಸಾಂದರ್ಭಿಕವಾಗಿ ಬರೆದ ವಿಮರ್ಶಾ ಲೇಖನಗಳಿವೆ. ಮಿತಭಾಷಿಯಾದ ಕಟ್ಟಿಯವರು ಗಂಭೀರ ಓದುಗರು ಕೂಡಾ ಎಂಬುದಕ್ಕೆ ಸಾಕ್ಷಿ ಈ ಸಾರಣೆಯಲ್ಲಿನ ಲೇಖನಗಳು. ಕಟ್ಟಿಯವರು ಗಂಭೀರ ಓದುಗರಾಗಿದ್ದರಿಂದ ಆಯಾ ಕೃತಿಗಳಲ್ಲಿ ಚರ್ಚಿತವಾಗುವ ಮತ್ತು ಎದ್ದು ಕಾಣುವ ಗುಣಗಳೊಂದಿಗೆ ಆ ಕೃತಿ ಹೇಳಲು ಉಪಕ್ರಮಿಸುವ ಕೆಳದನಿಯ ಸಂಗತಿಗಳಿಗೆ ಕೂಡಾ ಕಿವಿ ಆಲಿಸಿ ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ. ಹಾಗೆ ಕೇಳಿಸಿಕೊಳ್ಳವ ಗುಣ ಮತ್ತು ಕೇಳಿಸುವ ಶಕ್ತಿ ಇವರ ಬರಹಗಳಲ್ಲಿ ಇದೆ. ಇಲ್ಲಿಯ ಲೇಖನಗಳು ಓದಿಸಿಕೊಳ್ಳುವ ಗುಣ ಪಡೆದಿವೆ.
ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ...
READ MORE