ಸಾಹಿತ್ಯ ವಿಮರ್ಶೆ ಭಾಗ-1 ಹಾಗೂ 2

Author : ಕಾ.ವೆಂ. ಶ್ರೀನಿವಾಸಮೂರ್ತಿ

₹ 950.00




Year of Publication: 2021
Published by: ಪ್ರಿಯದರ್ಶಿನಿ ಪ್ರಕಾಶನ
Address: # 138, 7ನೇ ಸಿ. ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು

Synopsys

ಹಿರಿಯ ಲೇಖಕ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಅವರ ಕೃತಿ-ಸಾಹಿತ್ಯ ವಿಮರ್ಶೆ ಭಾಗ-1 ಹಾಗೂ 2. ಕೃತಿಯ ವಿಮರ್ಶೆಗೆ ಹಲವಾರು ಪರ್ಯಾಯ ಪದಗಳಿವೆ. ವಿಶ್ಲೇಷಣೆ, ವಿವೇಕಿಸು ಇತ್ಯಾದಿ ಕೃತಿಯ ಸಾಹಿತ್ಯಕ ಮೌಲ್ಯವನ್ನು ನಿರ್ಧರಿಸುವ ಮಾನದಂಡ ವಿಮರ್ಶೆ. ಇಂಗ್ಲಿಷಿನ ಕ್ರಿಟಿಸಿಜಂ ಪದಕ್ಕೆ ಪರ್ಯಾಯ ಪದ ಅಥವಾ ಸಂವಾದಿ ಪದವೆಂದರೆ ವಿಮರ್ಶೆ. ಸಾಹಿತ್ಯ ಇಲ್ಲವೇ ಕಲಾ ಜಗತ್ತಿನ ಅಭಿಪ್ರಾಯವೂ ವಿಮರ್ಶೆಯಾಗಬಹುದು. ಕೃತಿಗೆ ಬರೆದ ಅಭಿಪ್ರಾಯ ಇಲ್ಲವೇ ಮುನ್ನುಡಿಯೂ ವಿಮರ್ಶೆಯಾಗಬಹುದು. ಒಂದು ಕೃತಿಯನ್ನು ಅರ್ಥೈಸುವುದು, ಟೀಕಿಸುವುದು, ಖಂಡಿಸುವುದೂ ವಿಮರ್ಶೆಯಾಗುತ್ತದೆ. ಆದರೆ, ಓದುಗರ-ಲೇಖಕರ ಸಾಹಿತ್ಯ ಅಭಿರುಚಿಯನ್ನು ಹದಗೆಡಸಬಾರದು. ಈ ಎಚ್ಚರವನ್ನು ವಿಮರ್ಶೆ ಹೊಂದಿರಬೇಕು. ವಿಮರ್ಶೆ ಎಂದರೆನು? ಸಾಹಿತ್ಯಕ ವಿಮರ್ಶೆ ಎಂದರೇನು? ವಿಮರ್ಶೆಗಳ ಪ್ರಕಾರಗಳು ಇತ್ಯಾದಿ ಪರಿಕಲ್ಪನೆಗಳಲ್ಲಿ ಚರ್ಚಿಸುವ ಕೃತಿ ಇದು.

About the Author

ಕಾ.ವೆಂ. ಶ್ರೀನಿವಾಸಮೂರ್ತಿ
(06 September 1969)

ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಅವರು ಬೆಂಗಳೂರು ಉತ್ತರಕಾವಲು ಭೈರಸಂದ್ರದವರು. ಉಪನ್ಯಾಸಕರಾಗಿದ್ದಾರೆ. ಚಂದ್ರತಾರೆ ಊರಿನಲ್ಲಿ, ಹೃದಯ ವಿಹಾರಿ, ಬದುಕು, ಕಾವ್ಯಕೋಗಿಲೆ, ನಿತ್ಯಶ್ರಾವಣ, ಅಭಿಮಾನದ ಹಣತೆ, ಮಣ್ಣಿನ ದೋಣಿ, ಆಯ್ದ ಭಾವಗೀತೆಗಳು (ಕಾವ್ಯ), ನೆಲದ ಕಣ್ಣ, ಮೌನ ಮಾತಾದಾಗ, ಕನ್ನಡ ರಂಗಭೂಮಿ, ಕನ್ನಡ ಚಳುವಳಿ ಮತ್ತು ಚಿಂತನ, ಉರಿಯಪೇಟೆ (ವಿಮರ್ಶೆ), ಕನ್ನಡ ಸಾಹಿತ್ಯ ಮತ್ತು ಕರ್ನಾಟಕತ್ವ, ಅಭಿರಾಮ, ಕನ್ನಡ ಭೇರಿ, ಬಂಡಾಯ ಕಾಲು ಶತಮಾನ (ಸಂಪಾದನೆ), ಕನ್ನಡ ಕಾವ್ಯದಲ್ಲಿ ನಾಡು ನುಡಿ ಚಿಂತನೆ (ಪಿಎಚ್‌ಡಿ ಮಹಾಪ್ರಬಂಧ). ...

READ MORE

Reviews

ಕಾ. ವೆಂ. ಶ್ರೀನಿವಾಸಮೂರ್ತಿ ಅವರ ಐದು ಸಮಗ್ರ ಸಾಹಿತ್ಯ ಸಂಪುಟಗಳ ವಿಮರ್ಶೆ

ಕನ್ನಡ ಸಾಹಿತ್ಯದ ಅಧ್ಯಯನ, ಸಮಾಜಮುಖಿ ನೋಟ, ಜನಪರ ದೃಷ್ಟಿಕೋನದ ನೆಲೆಯಲ್ಲಿ ಡಾ| ಕಾ. ವೆಂ. ಶ್ರೀನಿವಾಸಮೂರ್ತಿ ಅವರ ನಲವತ್ತು ಸಾಹಿತ್ಯ ಕೃತಿಗಳು ಕಳೆದ ಮೂವತ್ತು ವರ್ಷಗಳಲ್ಲಿ ಹೊರಬಂದಿವೆ. ಅವುಗಳು ವಿಷಯವಾರು ವರ್ಗೀಕರಣಗೊಂಡ ಬಗೆಯಲ್ಲಿ ಐದು ಸಮಗ್ರ ಸಾಹಿತ್ಯ ಸಂಪುಟಗಳಾಗಿ ಇದೀಗ ಹೊರಬಂದಿರುವುದು ವಿಶೇಷ. ಎರಡೂವರೆ ಸಾವಿರ ಪುಟಗಳ ಈ ವಿಸ್ತಾರ ಸಂಪುಟಗಳನ್ನು ಬೆಂಗಳೂರಿನ ಪ್ರಿಯದರ್ಶಿನಿ ಪ್ರಕಾಶನವು ಹೊರತಂದಿದ್ದು ಓದುಗರ ಪಾಲಿಗೆ ಸಮಗ್ರ ಸಾಹಿತ್ಯದ ಸಂಪನ್ನ ನೋಟ ದೊರೆಯಲಿದೆ. ಡಾ|| ಕಾ. ವೆಂ. ಶ್ರೀನಿವಾಸಮೂರ್ತಿ ಅವರ ಐದು ಸಮಗ್ರ ಸಾಹಿತ್ಯ ಸಂಪುಟಗಳಲ್ಲಿ ಮೊದಲನೆಯದು ಕನ್ನಡ ಚಿಂತನೆ' ಎಂಬ ಹೆಸರಿದ್ದಾಗಿದ್ದು ಸಂಪುಟದ ಹೆಸರೇ ಸೂಚಿಸುವಂತೆ ಇದರಲ್ಲಿ ತೀವ್ರ ಕನ್ನಡ ಪ್ರಜ್ಞೆಯನ್ನು ಇಟ್ಟುಕೊಂಡು ಒಡಮೂಡಿದ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಕಾವ್ಯ ಕೃತಿಗಳ ವಿಮರ್ಶೆ ಇದೆ. ಐತಿಹಾಸಿಕ ಕ್ರಮದಲ್ಲಿ ಕೃತಿಗಳ ಪರಿಶೀಲನೆಯ ಮೂಲಕ ಕನ್ನಡ ಜಗತ್ತು ಕಳೆದ ಒಂದು ಸಾವಿರ ವರ್ಷಗಳಲ್ಲಿ ಬ೦ದ ಈ ಎದುರಿಸುತ್ತ ಕನ್ನಡ ಸಂಬಂಧಿ ಸವಾಲುಗಳನ್ನು ಈ ಸಂಪುಟವು ಬಹುತೇಕ ಸಮಗ್ರ ನೆಲೆಯಲ್ಲಿ ಕಟ್ಟಿಕೊಡುತ್ತದೆ ಅಲ್ಲದೇ ಇಂದಿನ ಶಿಕ್ಷಣ ಮಾಧ್ಯಮ, ಆಡಳಿತ, ಜಲ-ನೆಲ-ಗಡಿ ಪ್ರಶ್ನೆಗಳು ಇತ್ಯಾದಿ ಸವಾಲುಗಳು ಸಹ ಚರ್ಚೆಗೊಳಗಾಗಿವೆ. ಸುಮಾರು ಆರುನೂರ ಇಪ್ಪತ್ತೈದು ಪುಟಗಳಲ್ಲಿ ಕನ್ನಡಪರವಾದ ಇಲ್ಲಿಯ ಲೇಖನಗಳು ಸಂಶೋಧನೆ ಮತ್ತು ವಿಮರ್ಶೆಯ ಸ್ತರದಲ್ಲಿ ಮೂಡಿದ್ದು, ಕನ್ನಡ ಕರ್ನಾಟಕವನ್ನು ಕುರಿತು ಯೋಚಿವವರಿಗೆ ಇದು ಉಪಯುಕ್ತ ಸಂಪುಟವಾಗಿ ಕಾಣುತ್ತದೆ. ಇಲ್ಲಿಯ ಎರಡು ಮತ್ತು ಮೂರನೆಯ ಸಂಪುಟಗಳಲ್ಲಿ ಕನ್ನಡ ಸಾಹಿತ್ಯವನ್ನು ಕುರಿತ ವಿಮರ್ಶೆಯ ಬರಹಗಳಿವೆ. ಇವುಗಳು ಒಂದು ಸಾವಿರದ ಮುನ್ನೂರು ಪುಟಗಳಲ್ಲಿರುವುದು ವಿಶೇಷ. ಪಂಪನಿಂದ ಇಲ್ಲಿಯವರೆಗಿನ ಬಹುತೇಕ ಮುಖ್ಯ ಸಾಹಿತ್ಯ ಕೃತಿಗಳು ಇಲ್ಲಿ ವಿಮರ್ಶೆಗೆ ಒಳಪಟ್ಟಿವೆ. ಸಾಹಿತ್ಯ ಕೃತಿಗಳ ಚರ್ಚೆ ಅಲ್ಲದೇ ಅವುಗಳನ್ನೂ ರೂಪಿಸಿದ ವಿವಿಧ ಕಾಲಮಾನಗಳ ಸಾಂಸ್ಕೃತಿಕ ಸಂದರ್ಭ, ಅಲ್ಲಿಯ ಸವಾಲುಗಳು, ಸಿದ್ಧಾಂತಗಳು ಇತ್ಯಾದಿ ಇಲ್ಲಿಯ ಬರಹಗಳಲ್ಲಿ ಅನಾವರಣಗೊಂಡಿವೆ. ಇನ್ನು ಮೂರನೆಯ ಸಂಪುಟವು 'ವಿಚಾರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ'ಯ ಹೆಸರರಿಗೆ ತಕ್ಕಂತೆ ಭಾರತೀಯ ಜಗತ್ತು ಅಂದು-ಇಂದು ಎದುರಿಸುತ್ತ ಬಂದ ವಿವಿಧ ಸವಾಲುಗಳನ್ನ ಕುರಿತ ಚರ್ಚೆ ಇದೆ. ಇಲ್ಲಿ ಸ್ಪಷ್ಟ ಸೈದ್ಧಾಂತಿಕ ನೆಲೆ ಮತ್ತು ರಾಜಕೀಯ ದೃಷ್ಟಿಕೋನ ಇದೆ. ಅಲ್ಲದೇ ಸಾಮಾಜಿಕ ಪ್ರಜ್ಞೆಯೂ ಇದೆ. ಈ ಬರಹಗಳೊಂದಿಗೆ ಜಾನಪದ, ಭಾಷಾವಿಜ್ಞಾನ ಸಂಬಂಧಿಸಿದ ಪ್ರಬಂಧಗಳು ಸಹ ಉಂಟು. ಕೊನೆಯ ಸಂಪುಟ 'ಭಾವಗೀತೆ' ಎಂಬುದಾಗಿದ್ದು ಇದರಲ್ಲಿ ಇನ್ನೂರ ಐವತ್ತು ಭಾವಗೀತೆ, ನಾಡಗೀತೆ, ಜನಪರ ಗೀತೆ ಇವೆ. ಇವುಗಳನ್ನು ಹಾಡಿದ, ಇವುಗಳಿಗೆ ಸಂಗೀತ ನಿರ್ದೇಶನ ನೀಡಿದ ಕಲಾವಿದರ ಹೆಸರುಗಳ ಮಾಹಿತಿಯನ್ನು ಆಯಾ ಗೀತೆಯ ಪಠ್ಯದ ಅಡಿಯಲ್ಲಿ ನೀಡಲಾಗಿದೆ. ಅಲ್ಲದೇ ಇವುಗಳನ್ನು ಹೊರತಂದ ಆಡಿಯೋ ಸಂಸ್ಥೆ ಯಾವುದು? ಇವುಗಳು ಯೂಟ್ಯೂಬ್‌ನಲ್ಲಿ ಎಂಬ ಮಾಹಿತಿ ಸಹ ಇದೆ. ಹೀಗಾಗಿ ಭಾವಗೀತೆಗಳ ಇತಿಹಾಸದಲ್ಲಿ ಇವೆ ಯಾವ ವಿವರಗಳಲ್ಲಿ ಈ ಬಗೆಯ ಕೃತಿ ಇದೇ ಮೊದಲನೆಯದು ಆಗಿದೆ. ಎರಡೂವರೆ ಸಾವಿರ ಪುಟಗಳ ಡಾ|| ಕಾ. ವೆಂ. ಶ್ರೀನಿವಾಸಮೂರ್ತಿ ಅವರ ಸಮಗ್ರ ಸಾಹಿತ್ಯವು ಇಲ್ಲಿಯ ಸಂಪುಟಗಳಲ್ಲಿ ಇರುವುದು ನಿಜಕ್ಕೂ ವಿಶೇಷವೇ.

(ಕೃಪೆ ; ಪ್ರಜಾವಾಣಿ, ಬರಹ ; ರಾಜು ಮಳವಳ್ಳಿ)

--

 

ಕಾ. ವೆಂ.ಶ್ರೀ ಸಾಹಿತ್ಯ ಸಂಪುಟ ; ಕನ್ನಡಕ್ಕೆ ಬೇಕಾದ ಅಮೂಲ್ಯ ಆಕರ ಗ್ರಂಥಗಳು(ವಿಮರ್ಶೆ)

ಡಾ. ಕಾ. ವೆಂ.ಶ್ರೀನಿವಾಸಮೂರ್ತಿ ಕನ್ನಡ ಅಸ್ಮಿತೆಯ ಭಾಗ, ಈ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳಲು ಸದಾ ತುಡಿವ ಜೀವ, ಮೂಲತಃ ಪ್ರಾಧ್ಯಾಪಕರಾಗಿ, ಕವಿಯಾಗಿ, ಚಿಂತಕರಾಗಿ, ವಿಮರ್ಶಕರಾಗಿ ಹಾಗೆಯೇ ಸಹೃದಯತೆಯ ಒಡಲ ಸಾಕಾರ ರೂಪವಾಗಿ ಎಲ್ಲರ ಪ್ರೀತಿ, ಅಭಿಮಾನಗಳಿಸಿದಂತಹವರು, ಕನ್ನಡದ ಬಹುಮುಖಿ ನೆಲೆಯಲ್ಲಿ ಬಹುಮುಖ ವ್ಯಕ್ತಿತ್ತದೊಡನೆ, ಬಹುಮುಖಿ ಆಯಾಮದಲ್ಲಿ ಕಾರ್ಯ ನಿರ್ವಹಿಸಿದವರು. ಇದೀಗ ಕನ್ನಡಕ್ಕೆ ತನ್ನದೇ ಆಸ್ತಿಯನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಅದೇ ಈ ಕಾವೆಂ.ಶ್ರೀ. ಸಾಹಿತ್ಯ ಸಂಪುಟಗಳು, ಇವುಗಳನ್ನು ಪ್ರಾಮಾಣಿಕವಾಗಿ ಹೇಳುವುದಾದರೆ “ಕನ್ನಡಕ್ಕೆ ಬೇಕಾದ ನೈಜ ಮತ್ತು ಸಾಹಿತ್ಯ ಪರಂಪ ಪ್ರಾಧ್ಯಾಪಕರ ಅಮೂಲ್ಯ ಆಕರ ಗ್ರಂಥಗಳು” ಎಂದೇ ಬಣ್ಣಿಸಬಹುದಾಗಿದೆ.

ಪ್ರಾಧ್ಯಾಪಕರಾಗಿ ಕನ್ನಡತನ, ಕನ್ನಡ ಬೋಧನೆಯನ್ನು ಗಟ್ಟಿಗೊಳಿಸುತ್ತಿರುವ ಕಾ.ವೆಂ. ತಮ್ಮ ಅಧ್ಯಾಪನ, ಅಧ್ಯಯನ ವೃತ್ತಿ ಮತ್ತು ಪ್ರವೃತ್ತಿಗಳೊಡನೆ ಸಮತೋಲನ ಮತ್ತು ಸಮನ್ವಯ ಸಾಧಿಸುತ್ತಾ ಬಹುಮುಖ ನೆಲೆಯಲ್ಲಿ ಚಿಂತಿಸುತ್ತಾ ಈ ಐದು ಸಂಪುಟಗಳ ಮೂಲಕ ಕನ್ನಡಿಗರಿಗೆ, ಕನ್ನಡಕ್ಕೆ ಉತ್ತಮ ವರದಾನ ಕಲ್ಪಿಸಿದ್ದಾರೆ.

ಐದು ಸಂಪುಟಗಳಲ್ಲಿ ವಿಸ್ತರಿಸಿಕೊಂಡಿರುವ ಇವರ ಸಮಗ್ರ ಬರಹ, ಚಿಂತನೆ, ಕವಿತೆ, ವಿಮರ್ಶೆ ಹೀಗೆ ವಿವಿಧ ಆಯಾಮಗಳ ಒಟ್ಟು ಸಾರ ಸಂಗ್ರಹ ರೂಪ ಇದಾಗಿದೆ. ಮೊದಲನೇ ಸಂಪುಟದ ಕನ್ನಡ ಚಿಂತನೆಗೆ ಮೀಸಲಾದರೆ ಎರಡು ಮತ್ತು ಮೂರನೇ ಸಂಘಟಗಳು ಸಾಹಿತ್ಯ ವಿಮರ್ಶೆಗೆ ತೆರೆದುಕೊಂಡಿವೆ. ಇನ್ನು ನಾಲ್ಕು ಮತ್ತು ಐದನೇ ಸಂಪುಟಗಳಲ್ಲಿ ಸಂಕೀರ್ಣ ಪ್ರಕಾರದಲ್ಲಿ ವಿಚಾರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ಹಾಗೂ ಇವರ ಇದುವರೆಗಿನ ಒಟ್ಟು ಕವಿತೆ, ಹಾಡು, ಭಾವಗೀತೆ, ಹೋರಾಟದ ಹಾಡುಗಳು, ಜನಪರ ಗೀತೆಗಳೆಲ್ಲ ಒಟ್ಟಾಗಿ ಭಾವಗೀತೆ'ಯೆಂಬ ಸಂಪುಟದಲ್ಲಿ ಮೈದಾಳಿವೆ.

ಈ ಸಾಹಿತ್ಯ ಸಂಪುಟಗಳು  ಕನ್ನಡ ಸಾಹಿತ್ಯ ಪರಂಪರೆಯ  ಭಾಗಗಲೇ ಆಗಿ ಶ್ಲೇಷಣಾತ್ಮಕ ಬರು ಈ ಸಾಹಿತ್ಯ ಸಂಪುಟಗಳು ಕನ್ನಡ ಸಾಹಿತ್ಯ ಪರಂಪರೆಯ ಭಾಗಗಳೇ ಆಗಿ ಹೊಸ ಆಲೋಚನೆ, ಹೊಸ ಚಿಂತನೆಗಳೊಟ್ಟಿಗೆ ಕನ್ನಡ ಸಾಹಿತ್ಯ ಪರಂಪರೆಯ ಒಟ್ಟು ಚಿತ್ರಣವನ್ನು ಕಟ್ಟಿಕೊಟ್ಟಿವೆ. "ಕವಿರಾಜಮಾರ್ಗ ಮತ್ತು ನಾಡು-ನುಡಿ ಎನ್ನುವ ದೃಷ್ಟಿಕೋನ ವಿಜ್ಞಾಸೆಯಿಂದ ಹಿಡಿದು ನವ ವಸಾಹತು ಸಂದರ್ಭ, ಕನ್ನಡ ಕಾವ್ಯ ಮತ್ತು ನಾಡು-ನುಡಿ ಚಿಂತನೆಯನ್ನು ಕನ್ನಡ ಸಾಹಿತ್ಯ ಪರಿಪತ್ತು, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಇದು ಕ್ಲೀಷೆಯಾಗಬಾರದು ಎನ್ನುವ ವಿಮರ್ಶಾತಕ ಹೊಸ ಚಿಂತನೆಯವರೆಗೆ ಈ ಸಂಪೈಟದಲ್ಲಿ ಕಟ್ಟಿಕೊಟ್ಟಿದ್ದಾರೆ. ಕನ್ನಡದ ಪ್ರಮುಖ ಆ ಆಕರ ಕೃತಿಗಳ 504 ವಿಚಾರ ಸಾಹಿತ್ಯ ಮ ಬಹುಮುಖ ವ್ಯಕ್ತಿತ್ವ ಮತ್ತು ಹಿಲದ್ರಗಳು ಎಲ್ಲರಿಗೂ ಸಿಡಿಸಲು ಸಾಧ್ಯವಿಲ್ಲ ಆದರೆ ಈ ಪ್ರತಿಭೆ ಮತ್ತು ವ್ಯಕ್ತಿತ್ವ ಡಾ. ಕಾವೇರವರಿಗೆ ಸಿದ್ದಿದೆ. ಕನ್ನಡ ಪ್ರಾಧ್ಯಾಪಕರಾಗಿಯೇ ತಮ್ಮ ವಿಮರ್ಶಾ ಒಳಗಣ್ಣಿನಿಂದ ಈ ಕನ್ನಡ ಸಾಹಿತ್ಯ ಪರಂಪರೆಯನ್ನು ಗ್ರಹಿಸಿರುವ ಕಾ.ವೆಂ. ಇಂತಹ ಕನ್ನಡಕ್ಕೆ ಬೇಕಾದ ಗ್ರಹಿಕೆಯ ಹೊಸ ದೃಷ್ಟಿ ಕೋನವನ್ನು ಮಾದರಿಯಾಗಿ ಕಟ್ಟಿಕೊಟ್ಟಿದ್ದಾರೆ. ಕಮು ಈ ವಿಮರ್ಶಾ ಸಂಪುಟದಲ್ಲಿ ಮಾರ್ಗ ಮತ್ತು ದೇಸಿಗಳ ಚರ್ಚೆ, ಸಾಹಿತ್ಯ ಮತ್ತು ಅನ್ಯ ಸಂಬಂಧ, ವಚನ ಚಳವಳಿಯ ವಿಮರ್ಶೆ, ಚಿಂತನ-ಮಂಥನ, ದಾಸ ಪರಂಪರೆ, ಸೂಫಿ ಚಿಂತನೆ, ಕನಡದ ಆಧುನಿಕ ಬರಹಗಾರರ ಬಗೆಗಿನ ಮತ್ತು ಇವರ ಸಾಹಿತ್ಯಕ ಮ ಕೊಡುಗೆಗಳ ಬಗೆಗೆ ವಿಮರ್ಶಾತಕ ಅರ್ಥಪೂರ್ಣ ಚಿಂತನೆಯ ವಿಶ್ಲೇಷಣಾತ್ಮಕ ಬರಹಗಳೊಂದಿಗೆ ಹೊಸ ತಲೆಮಾರಿನ ಎನ್ನುವ ದೃಷ್ಟಿಕೋನದಿಂದ ಕುವೆಂಪು, ಬೇಂದ್ರೆ, ಕಾರಂತ, ಗೋಕಾಕ್, ಚಿತ್ತಾಲ, ಕಂಬಾರ, ಲಂಕೇಶ್‌ ಮುಂತಾದ ಕನ್ನಡದ ಪ್ರಮುಖ ಲೇಖಕರ ಜೊತೆಗೆ ಹೊಸ ತಲೆಮಾರಿನ ಬರಹಗಾರರಾದ ಡಾ. ಕೋವೆಂ. ರಾಮಕೃಷ್ಣಗೌಡ, ವೆಂಕಟಾಪು ಸತ್ಯ, ಸಿಸಿರಾ, ವಸಂತಕುಮಾರ್‌, ಹಲ್ಲೆಗರೆ ಶಂಕರ್, ಸಿ.ಟಿ, ಹಮೂರ್ತಿ, ಗುಂಡಿಗೆರೆ ವಿಶ್ವನಾಥ್ ಮುಂತಾದ ಲೇಖಕರ ಕೃತಿಗಳ ಕುರಿತಾದ ವಿಮರ್ಶೆಯೂ ಇಲ್ಲಿದೆ.

ವಿಚಾರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ಮಾಡುವ ನಾಲ್ಕನೇ ಸಂಪುಟವು ಕಾ.ವೆಂ.ಶ್ರೀ, ಸಾಹಿತ್ಯ ಸಂಪುಟಗಳಲ್ಲಿನ ಸಂಕೀರ್ಣ ಸಂಪುಟ, ಜಾಗತೀಕರಣ ಸಂದರ್ಭಗಳು, ಆತಂಕ ಮತ್ತು ಕೊಳ್ಳುಬಾಕ ಸಂಸ್ಕೃತಿಯ ಅಪಾಯಗಳು, ಕಮ್ಯುನಿಸ್ಟ್ ಚಳವಳಿ ಮತ್ತು ದಲಿತ ಚಳವಳಿಗಳ ಆಳ ಚಿತ್ರಣ, ಬದಲಾಗುತ್ತಿರುವ ಕಾಲ ಜಗತ್ತಿನಲ್ಲಿ ಶಿಕ್ಷಣದ ಬಗೆಗಿನ ಕಾ.ವೆಂ.ರವರು ವಹಿಸಿರುವ ಆಸೆ ಮತ್ತು ಕಾಳಜಿ ಅಷ್ಟೇ ಪ್ರಮುಖವಾದದ್ದು. ನಾಲ್ಕು ಭಾಗಗಳಲ್ಲಿ ಹರಡಿಕೊಂಡಿರುವ ಈ ಸಂಪುಟವು ಗಾಂಧಿ, ಅಂಬೇಡ್ಕರ್‌, ಲಾಲ್ ಬಹದ್ದೂರ್ ಶಾಸ್ತಿ ಮುಂತಾದ ಮಹಾನ್ ನಾಯಕರ ಬಗೆಗಿನ ಚಿತ್ರಣ ಹಾಗೂ ಅವರ ಚಿಂತನೆಗಳ ಹೂರಣ, ಒಳನೋಟ ಹಾಗೂ ವಿಮರ್ಶೆಯನ್ನು ಒಳಗೊಂಡಿವೆ. ಇವರ ಜೊತೆಗೆ ಕನ್ನಡದ ವಿದ್ವಾಂಸರು, ಚಿಂತಕರು, ಬರಹಗಾರರಾದ ಡಾ. ಎಸ್. ವಿದ್ಯಾರಂಕರ್, ಬಿ.ವಿ. ಕಾರಂತ, ನಲ್ಲೂರು ಪ್ರಸಾದ್, ಟಿ.ಪಿ. ರಮೇಣ, ಡಾ. ವೆಂಕಟಸ್ವಾಮಿ ಮುಂತಾದವರ ಬಗೆಗಿನ ಪರಿಚಯಾತ್ಮಕ ಹಾಗೂ ವಿಶ್ಲೇಷಣಾತಕ ಲೇಖನಗಳು ಇವೆ.

ಇವುಗಳಲ್ಲದೆ ಕನ್ನಡದ ಮೂಲ ಪರಂಪರೆಯ ಕಾವ್ಯಗಳಾದ ಮಲೆಮಾದಪ್ಪನ ಕಾವ್ಯ, ಜನಪದ ಮಹಾಭಾರತ, ಗಾದೆಗಳು, ಹಂತಿ ಹಾಡುಗಳು, ಬೀಸುವ ಪದಗಳಲ್ಲದೆ ಕನ್ನಡ ರಂಗಭೂಮಿ ಪರಂಪರ ಕುರಿತಾದ ವಿಭಿನ್ನ ಹಾಗೂ ಅನನ್ನ ಒಳನೋಟವನ್ನು ಈ ಸಂಪುಟದಲ್ಲಿ ಕಾಣಬಹುದು.

ಕೊನೆಯ ಸಂಪುಟದ ಕಾ.ವೆಂ.ರವರ ಕವಿತ್ತಾ ಶಕ್ತಿ ಹಾಗೂ ಪ್ರತಿಭೆಗೆ ಸಾಕ್ಷಿಯಾಗಿ ಅಪ್ಪ ಕವಿತೆ, ಭಾವಗೀತೆ, ನಾಡಗೀತೆ, ಹೋರಾಟದ ಗೀತೆಗಳು, ಜನಪದ ಗೀತೆಗಳು ಹೀಗೆ ನಾನು ಕಾವ್ಯ ಪ್ರಕಾರಗಳಲ್ಲಿ ಮೈದಳೆದಿದ್ದು, ಬಹುಗೀತೆಗಳು ಧ್ವನಿ ಸಾಂದ್ರಿಕೆಗಳಾಗಿ ಹೊರಬಂದು ಈಗಾಗಲೇ ಕನ್ನಡ ನಾಡಿನ ಜನರ ಮನೆ-ಮನ ಮುಟ್ಟಿದಂತಹವುಗಳು. ಇವು ಯೂಟ್ಯೂಬ್ ವಿಳಾಸದ ಸಮೇತ ವಿವರಗಳನ್ನು ಒಳಗೊಂಡಿವೆ. ಹಿತ್ಯ ಒಟ್ಟಾರೆಯಾಗಿ ಕಾ.ವೆಂ. ಒಬ್ಬರು ಕನ್ನಡ ಅಸ್ಮಿತೆಯ ಆಸ್ತಿ, ಹಾಗೆಯೇ ಅವರ ಈ ಐದು ಸಂಪುಟಗಳು ಕನ್ನಡ ಸಾಹಿತ್ಯ ಮತ್ತು ಸಾರಸ್ವತ ಪರಂಪರೆಯ ಆಸ್ತಿಗಳಾಗಿವೆ. ಕನ್ನಡ ಸಾಹಿತ್ಯಾಸಕ್ತರ, ಓದುಗರ, ಹೊಸ ತಲೆಮಾರಿನ ಬರಹಗಾರರ, ಕಾಲೇಜು ವಿದ್ಯಾರ್ಥಿಗಳ ಓದಿಗೆ, ತಿಳುವಳಿಕೆಗೆ, ವಿಚಾರಗಳಿಗೆ ಬೇಕಾದ ನೈಜ ಹಾಗೂ ಅಮೂಲ್ಯ ಆಕರ ಗ್ರಂಥಗಳಾಗಿವೆ

(ಬರಹ ; ಗುಂಡಿಗೆರೆ ವಿಶ್ವನಾಥ್, ಕೃಪೆ ; ವಾರ್ತಾಭಾರತಿ)

---

ಕನ್ನಡ ಸಾಹಿತ್ಯ ವಿಮರ್ಶೆಯ ಕ್ಷೇತ್ರ ತುಂಬ ಶ್ರೀಮಂತವಾಗಿದೆ. ಪರಂಪರೆಯ ಗ್ರಹಿಕೆ, ವಸ್ತುನಿಷ್ಠತೆ, ತಾತ್ವಿಕ- ಸೂಕ್ಷ್ಮ ಪ್ರಜ್ಞೆ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸತ್ಯದ ಅರಿವು ಇಂಥವುಗಳ ಸಂವೇದನೆಯೊಂದಿಗೆ, ಸಾಂದರ್ಭಿಕ ಸವಾಲುಗಳೊಂದಿಗೆ ಮಹತ್ತನ್ನು ಸಾಧಿಸಿದೆ ಎಂಬ ಹೆಮ್ಮೆ ನಮ್ಮದಾಗಿದೆ. ಈ ಕ್ಷೇತ್ರ ಹೀಗೆ ಎದ್ದು ನಿಂತಿದೆ ಎಂದರೆ ಅದರ ಹಿಂದೆ ಡಾ. ಕಾ ವೆಂ ಶ್ರೀನಿವಾಸಮೂರ್ತಿ ಅವರಂತಹ ವಿಮರ್ಶಕರಿದ್ದಾರೆ ಎನ್ನುವುದಾಗಿದೆ.

ಡಾ. ಕಾ ವೆಂ ಶ್ರೀನಿವಾಸಮೂರ್ತಿಯವರು ಕನ್ನಡದ ಮಹತ್ವದ ವಿಮರ್ಶಕರಲ್ಲಿ ಒಬ್ಬರಾಗಿದ್ದಾರೆ. ಇವರು ತಮ್ಮ ವಿಮರ್ಶಾ ವಿಧಾನದಿಂದಲೇ ಓದುಗರಿಗೆ ಆಪ್ತರಾಗಿ ಬಿಡುತ್ತಾರೆ. ಇವರ ವಿಮರ್ಶನ ಕೃತಿಗಳು ಸಮಗ್ರವಾಗಿ ಸಂಪುಟಗಳಲ್ಲಿ ಹೊರ ಬಂದುದು ಅವರ ವಿಮರ್ಶೆಯನ್ನು ಅರ್ಥೈಯಿಸಿಕೊಳ್ಳಲು ಹಾಗೂ ಕನ್ನಡ ವಿಮರ್ಶೆಯ ಭಿನ್ನ ಆಯಾಮಗಳ ಶಕ್ತಿ ಸ್ವರೂಪವನ್ನು ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಇವರ ಭಿನ್ನ ಪರಿಕಲ್ಪನಾತ್ಮಕ ಹಾಗೂ ತಾತ್ವಿಕ ವಿಮರ್ಶೆಯ ಮಾರ್ಗಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

ಕನ್ನಡದ ಮಹತ್ವದ ವಿಮರ್ಶಕರು ಈಗಾಗಲೇ ಇವರ ವಿಮರ್ಶೆ ಕುರಿತು ಮಾತನಾಡುತ್ತ ಇವರನ್ನು ಸಾಂಸ್ಕೃತಿಕ, ಬಹು ಶಿಸ್ತಿನ ವಿಮರ್ಶಕರೆಂದೂ ಹಾಗೂ ಭಿನ್ನ ಪರಿಕಲ್ಪನಾತ್ಮಕ ವಿಮರ್ಶೆಗಳ ಹೆಸರಲ್ಲೂ ಗುರುತಿಸಿರುವುದಿದೆ. ಒಬ್ಬ ವಿಮರ್ಶಕನಿಗೆ ಇಂಥ ಧೋರಣೆಗಳೊಂದಿಗೆ ಶೋಧನ ಪ್ರವೃತ್ತಿಯೂ ಒಂದು ಭಾಗವಾದಾಗ, ರೈಲು ಹಳಿಯ ಅಥವಾ ಸಿದ್ದ ಮಾರ್ಗವನಷ್ಟೇ ತುಳಿಯದೆ ತನ್ನದೇ ದಾರಿಯನ್ನು ವಿಮರ್ಶಕ ರೂಪಿಸಿಕೊಳ್ಳುತ್ತಾನೆ ಅಂತಹ ಹೆಜ್ಜೆಗಳು ಇಲ್ಲಿವೆ. ಇದಕ್ಕೆ ಕಾರಣ ಇವರ ಶ್ರೀಸಾಮಾನ್ಯತ ಪ್ರಜ್ಞೆಯ ದನಿಯನ್ನು ಅರಸಿ ಹೊರಟದ್ದೇ ಆಗಿದ್ದು, ಬೀಸು ಹೇಳಿಕೆಗಿಂತ ಗಂಭೀರ ವ್ಯಾಖ್ಯಾನರೂಪಿ ಪ್ರತಿಪಾದನೆ ಭಿನ್ನಭಿಪ್ರಾಯಕ್ಕೆ ಮರುಮಥನಕ್ಕೆ ಭೂಮಿಕೆಯನ್ನು ಒದಗಿಸುತ್ತದೆ ವಿಮರ್ಶೆ ಮಾಡಬೇಕಾದ ಕಾರ್ಯವೇ ಇದಾಗಿದೆ ಎನ್ನುವುದು ನನ್ನ ನಂಬಿಕೆ. ಇದಕ್ಕೆ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಈ ಮೂರು ನೆಲೆಯ ಸಾಹಿತ್ಯ ಪ್ರಕಾರಗಳನ್ನು ಬಳಸಿಕೊಂಡದ್ದು ಪ್ರಬುದ್ಧತೆ ದಕ್ಕುವಂತಾಗಿದೆ.

(ಕೃಪೆ : ವಾರ್ತಾಭಾರತಿ, ಬರಹ : ಅರವಿಂದ ಮಾಲಗತ್ತಿ)

Related Books