ಲೇಖಕ ಹರಿಹರಪ್ರಿಯ ಅವರು ’ಲೈಫ್ ೩೬೦’ ಪತ್ರಿಕೆಯಲ್ಲಿ ಎಸ್.ಎಲ್. ಭೈರಪ್ಪ ಅವರ ಕುರಿತು ಬರೆದ ಸರಣಿ ಲೇಖನ/ಅಂಕಣಗಳನ್ನು ಈ ಪುಸ್ತಕದಲ್ಲಿ ಸಂಕಲಿಸಿದ್ದಾರೆ. ಭೈರಪ್ಪ ವರ್ಸಸ್ ಬೌದ್ಧಧರ್ಮ, ಕ್ರೈಸ್ತ ಧರ್ಮ, ಇಸ್ಲಾಮ್ ಧರ್ಮ, ಬ್ರಾಹ್ಮಣರು, ಹಿಂದುಳಿದವರು, ದಲಿತರು, ವೇದಿಕೆಗಳು, ರಾಜಕೀಯ, ಬುದ್ಧಿಜೀವಿಗಳು, ಬಲಪಂಥೀಯರು, ಎಡಪಂಥೀಯರು, ಸ್ತ್ರೀವಾದಿಗಳು ಬರಹಗಳಿವೆ. ಪ್ರತಿಯೊಂದನ್ನೂ ವರ್ಸಸ್ ಎಂದಿಟ್ಟು ನೋಡಿ ಬರೆಯಲಾಗಿದೆ. ಇವುಗಳಲ್ಲದೆ, ಸುಳ್ಳುಗಳ ಸರದಾರ ಎಸ್.ಎಲ್. ಭೈರಪ್ಪ, ’ಪರ್ವ’ ಒಂದು ಅಪೂರ್ವ ಗೋಷ್ಠಿ, ಉತ್ತರೀಯ ಲೇಖನಗಳನ್ನು ಸೇರಿಸಿದ್ದಾರೆ. ಕೆ.ವಿ. ತಿರುಮಲೇಶ್ ಅವರ ಮುನ್ನುಡಿ ಹಾಗೂ ಲಕ್ಷ್ಮಣ ಕೊಡಸೆ ಅವರ ಬೆನ್ನುಡಿ ಇದೆ.
ಭೈರಪ್ಪನವರನ್ನು ಕುರಿತು ವಿಶಿಷ್ಟ ವಿಭಿನ್ನ ಪುಸ್ತಕವಿದು..
ಆಂಧ್ರಮೂಲದ ಸಾತವಲ್ಲಿ ವೇಂಕಟವಿಶ್ವನಾಥಭಟ್ಟ ಅವರು ಹರಿಹರಪ್ರಿಯ ಎಂದೇ ಪರಿಚಿತರು. ಮೈಸೂರಿನಲ್ಲಿ ಜನಿಸಿದ (ಜ. 1952) ಅವರು ಬೆಳೆದದ್ದು ಮಂಡ್ಯದಲ್ಲಿ. ಪ್ರೌಢಶಾಲೆಯವರೆಗೆ ಓದಿ ನಂತರ ’ಕನ್ನಡ ಜಾಣ’ದಲ್ಲಿ ಉನ್ನತಮಟ್ಟದ ಯಶಸ್ಸು ಸಾಧಿಸಿದ ಅವರು ರಾಷ್ಟ್ರಕವಿ ಕುವೆಂಪು ಅವರನ್ನು ಕನ್ನಡದ ಗುರು ಎಂದು ಕೊಂಡ ಹಾಗೆ ತೆಲುಗಿನ ಮಹಾಕವಿ ಶ್ರೀಶ್ರೀ ಅವರು ಹೋರಾಟಕ್ಕೆ ಗುರು. ಕಾವ್ಯ, ಕಾದಂಬರಿ, ಕತೆ, ನಾಟಕ, ವಿಚಾರ ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ತೌಲನಿಕ ಅಧ್ಯಯನ, ಗ್ರಂಥಸಂಪಾದನೆ, ಅಂಕಣ ಬರಹ ಮುಂತಾದ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ನಾನ್ ಅಕಾಡೆಮಿಕ್ ಚಳವಳಿಗಾರ, ಸಾಂಸ್ಕೃತಿಕ ರಾಯಭಾರಿ ಎಂದು ಹೆಸರು. ...
READ MORE