ರಕ್ತಿ - ರೂಪಣೆ

Author : ಸಿ.ಎನ್. ರಾಮಚಂದ್ರನ್

Pages 220

₹ 80.00




Year of Publication: 2007
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಒಳನೋಟ ಮತ್ತು ಸೂಕ್ತ ಅವಲೋಕನಗಳಿಂದ ಡಾ.ಸಿ.ಎನ್.ರಾಮಚಂದ್ರನ್‌ ಅವರ ತೌಲನಿಕ ಅಧ್ಯಯನ, ಪ್ರಾಚೀನ ಮತ್ತು ಆಧುನಿಕ ವಿಮರ್ಶೆ, ಭಾರತೀಯ ಸಾಹಿತ್ಯದ ಅವಲೋಕನ, ಮೌಖಿಕ ಕಾವ್ಯಗಳ ವಿವೇಚನೆ - ಹೀಗೆ ವಿಶಿಷ್ಟ ಮಾದರಿಗಳನ್ನು ಕನ್ನಡ ವಿಮರ್ಶೆಗೆ ಕೊಟ್ಟಿರುವ ಅವರ 'ರಕ್ತ- ರೂಪಣೆ' ಮಹತ್ವದ ವಿಮರ್ಶಾ ಸಂಕಲನ.

ಈ ಕೃತಿಯಲ್ಲಿ 'ಇಂಗ್ಲಿಷ್ ಲೇಖಕರು' ಭಾಗದಲ್ಲಿ ಭಾರತ ಮತ್ತು ಕರ್ನಾಟಕದ ಲೇಖಕರು ಹಾಗೂ ಕೃತಿಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ. 'ಕನ್ನಡ ಲೇಖಕರು' ಭಾಗದಲ್ಲಿ ತೀನಂಶ್ರೀ, ಪುತಿನ, ಕಾರ್ನಾಡ್ ಅವರ ಸಾಹಿತ್ಯದ ವಿಶಿಷ್ಟವಾದ ಒಳನೋಟಗಳ ವಿವೇಚನೆ ದೊರೆಯುತ್ತದೆ. ಮೌಖಿಕ ರಾಮಾಯಣ, ಮಹಾಭಾರತ ಕುರಿತ ಅಪೂರ್ವ ಮಾಹಿತಿ ಹಾಗೂ ಅಧ್ಯಯನದ ವಿಶಿಷ್ಟ ಒಳನೋಟಗಳು ಇಲ್ಲಿ ದೊರೆಯುತ್ತವೆ.

About the Author

ಸಿ.ಎನ್. ರಾಮಚಂದ್ರನ್

ರಾಮಚಂದ್ರನ್ ಅವರು ಜನಿಸಿದ್ದು (ಜ ೧೯೩೬) ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಅಮೆರಿಕೆಯ ಮಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಅಧ್ಯಾಪಕರಾಗಿ ಕಾರ್‍ಯ ನಿರ್ವಹಿಸಿದ್ದಾರೆ. ೧೯೯೬ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಧ್ಯಾಪಕರಾಗಿ ನಿವೃತ್ತಿ. ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ರಕ್ತ-ರೂಪಣೆ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು ವಿಮರ್ಶಾ ಕೃತಿಗಳು. ಶೋಧ ಕಾದಂಬರಿ, ಕಸಾಂದ್ರ ಕಥಾ ಸಂಕಲನ. ಇನಾಂದಾರ್ ಪ್ರಶಸ್ತಿ, ...

READ MORE

Related Books