ಸಮರ್ಥವಾಗಿ ಬಳಸಿಕೊಂಡರೆ, ಹಳೆಗಾಲದ ಗಮಕ, ಪ್ರವಚನ, ಕಾವ್ಯದ ಓದುಗಳನ್ನು ಮರಳಿ ಪ್ರಯೋಗಿಸಿದರೆ ಒಳಿತು. ಹೀಗೆ ಮಾಡುವಾಗ ಇಂದಿನ ಕಾಲದ ಬದಲಾವಣೆ, ಆಸಕ್ತಿಗಳನ್ನು ಗಮನಿಸಬೇಕಾಗುತ್ತದೆ. ನಮ್ಮ ಹಿಂದಿನ ತಲೆಮಾರಿನ ವಿದ್ವಾಂಸರು (ನವೋದಯದ ಕಾಲದಲ್ಲಿ) ಹಳೆಗನ್ನಡ ಕೃತಿಗಳಿಗೆ ನೇರವಾಗಿ ಮುಖಾಮುಖಿ ಆಗುತ್ತಿದ್ದುದು, ಅವರೆಲ್ಲ “ಪ್ರಕಟತರ ವೃತ್ತಿಗೆ ವಾರ್ತಿಕಮೆಂತಂತುಟೆ' (ವೃತ್ತಿ ಸ್ಪಷ್ಟವಾಗಿದ್ದರೆ ಟೀಕೆ, ಟಿಪ್ಪಣಿ ಏಕೆ?- ಶಾಂತಿ ಪುರಾಣಂ) ಎಂಬ ಧೋರಣೆಯಲ್ಲಿದ್ದರು. ಇಂದು ಬಾಳೆಹಣ್ಣು ಸುಲಿದು ನೀಡಿದರೂ ತಿನ್ನಲಾರದ ಅಧ್ಯಾಪಕರ, ವಿದ್ಯಾರ್ಥಿಗಳ ಸಂತತಿಹೆಚ್ಚುತ್ತಿದೆ.
"ಪರಮ ಜಿನೇಂದ್ರ ವಾಣಿಯೆ ಸರಸ್ಪತಿ' ಎಂದು ಭಾವಿಸಿದರೂ, ಕವಿಗಳು ತಮ್ಮ ಕಾವ್ಯ ರಸಿಕರಿಗೆ ಸೇರಬೇಕು ಎ೦ದು, ಲೌಕಿಕಕ್ಕೆ ಸಲ್ಲಬೇಕೆಂದು ಬಯಸಿದ್ದರು. ಮಲ್ಲಿಗೆಮಾಲೆಯನ್ನು ಕಟ್ಟುವವರಂತೆ, ಮುಡಿವ ಭೋಗಿಗಳೂ ಬೇಕು. ಕಾವ್ಯದ ರಸಭಾವಗಳನ್ನು ಎದೆಗೊಟ್ಟು ಮನಗೊಟ್ಟು ಅಹುದಹುದೆಂದು ಕೇಳುವ ಸಹೃದಯರು, ತಪ್ಪು ಒಪ್ಪುಗಳನ್ನು ವಿಚಾರಿಸಿ ಹೇಳುವ ರಸಜ್ಞರು ಬೇಕು ಎಂದು ಕವಿಗಳೇ ಬಯಸಿದ್ದಾರೆ. ಅದಕ್ಕಾಗಿ ಕನ್ನಡಿಗರು ಕನ್ನಡ ಕಾವ್ಯಗಳನ್ನು, ಕೃತಿಗಳನ್ನು ತಮ್ಮ ಪೂರ್ವಜರ ಆಸ್ತಿ ಎಂದು ಭಾವಿಸುವಂತಾಗಬೇಕು. ಜಗತ್ತಿನ ಎಲ್ಲ ಭಾಷೆಗಳಿಗೆ ಕನ್ನಡದಂತೆ ಅಪೂರ್ವವಾದ ಶಾಸನ, ಸಾಹಿತ್ಯ, ಜಾನಪದ, ಮಹಾಕಾವ್ಯ ಪರಂಪರೆ ಲಭ್ಯವಿಲ್ಲ. ವಾಗ್ದೇವಿ ಕನ್ನಡಕ್ಕೆ ಅನೇಕ ಪ್ರತಿಭಾವಿಶೇಷಗಳನ್ನು ಕೊಟ್ಟು ಅದನ್ನು ಗೀರ್ವಾಣಕ್ಕೆ, ಆಂಗ್ಲಕ್ಕೆ ಹೊಯ್ಕೆಯ್ ಆಗಿಸಿದ್ದಾಳೆ.
ಕನ್ನಡದ ಹಿಂದಿನ ಸಾಹಿತ್ಯ ಲೋಕ ಅನಂತ ಬಾಹು, ಅಕ್ಷಿ, ಪಾದ, ನಾಲಿಗೆಗಳಿಂದ ಮತ್ತೆ ಮತ್ತೆ ಅಧ್ಯಯನ ಆಸ್ವಾದಗಳಿಗೆ ಕೂಗಿ ಕರೆಯುತ್ತಿದೆ. ಅದರ ಚೆಲುವಿಕೆ, ವಯ್ಯಾರ,ಒಗರು, ರುಚಿ, ಕಾಠಿಣ್ಯ, ಬೆರಗು, ಬೆಡಗು, ಬಿಗುಮಾನ, ಅರ್ಥ, ಭಾವ, ರಸ, ದ್ವನಿ, ಅಲಂಕಾರಗಳೆಲ್ಲ ನನಗೆ ರಹಸ್ಯದ ಗುಹೆ, ತೀರದ ನಿಧಿಗಳಂತೆ, ಚಿಗುರಿದ ಮರದಂತೆ, ಹಕ್ಕಿಗಳ ಹಾಡಿನಂತೆ ನಿತ್ಯ ಮೋಹಕವೆನಿಸಿದೆ. ನಾನು ಆಗಾಗ ಆ ವಿಸ್ತಾರದ ಕಡಲತಡಿಯಲ್ಲಿ ನಿಂತು ಕಂಡ ಕಾಣ್ಕೆಯನ್ನು ಕೆಲವು ಸಾಂದರ್ಭಿಕ ಲೇಖನಗಳಲ್ಲಿ ವ್ಯಕ್ತಪಡಿಸುತ್ತ ಬಂದಿರುವೆ. ಪ್ರಸ್ತುತ "ಪೂರ್ವಸೂರಿಗಳ ಎದುರಲ್ಲಿ' ಅ೦ತಹ ಒಂದು ಕಿರು ಪ್ರಯತ್ನದ ವಿನೀತ ಅಭಿವ್ಯಕ್ತಿಯಾಗಿದೆ. ಇಲ್ಲಿಯ ಲೇಖನಗಳೆಲ್ಲ ಸಾಮಾನ್ಯ ಜನರು, ವಿದ್ಯಾರ್ಥಿಗಳಿಗೆ,ತರುಣ ಪ್ರಾಧ್ಯಾಪಕರಿಗಾಗಿ ಸಾಹಿತ್ಯ ಪ್ರಚಾರದ ದೃಷ್ಟಿಯಿ೦ದಲೇ ಬರೆದವುಗಳು;ಸಿದ್ಧವಾದವುಗಳು.
ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’. ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...
READ MORE