ಪ್ರತಿಮಾ ಲೋಕ-ಲೇಖಕ ಎಸ್.ಆರ್. ವಿಜಯಶಂಕರ ಅವರ ಕೃತಿ. ಕನ್ನಡ ಸಾಹಿತ್ಯದಲ್ಲಿ ಪ್ರತಿಮಾ ವಿಧಾನವನ್ನು ಮುನ್ನೆಲೆಗೆ ತಂದವರು ಅಡಿಗರು. ಒಂದು ಇನ್ನೊಂದಾಗುವ ಪ್ರಕ್ರಿಯೆಯಲ್ಲಿ ಪ್ರತಿಮೆಗಳ ಕಲ್ಪನೆ ಅಡಿಗರು ಕನ್ನಡ ಸಾಹಿತ್ಯಕ್ಕೆ ನೀಡಿದ ವಿಶೇಷ ಕೊಡುಗೆ. ಅಡಿಗರ ಸಾಹಿತ್ಯ ಸೃಷ್ಟಿಸಿದ ಪ್ರತಿಮೆಗಳ ಲೋಕವೇ ಒಂದು ಅನನ್ಯ ಅನುಭವ ಪ್ರಪಂಚ. ಅಲ್ಲಿ ಅಡಿಗರ ಸಮಕಾಲೀನ ಲೋಕದ ಜೊತೆ ಕಾವ್ಯ ನಿರಂತರ. ಓದುಗರ ಪ್ರಜ್ಞಾಲೋಕದ ಅನುಭವವಾಗುವ ಈ ಪ್ರತಿಮೆಗಳು ಎಲ್ಲಾ ಕಾಲದ ಅಡಿಗರನ್ನು ಪ್ರತಿನಿಧಿಸುತ್ತವೆ. ಅಡಿಗರನ್ನು ಎಲ್ಲ ಕಾಲಕ್ಕೂ ಕೊಂಡೊಯ್ಯಬಲ್ಲ ಈ ಪ್ರತಿಮೆಗಳು ಅವರ ಮರು ಓದಿನ ಅನಿವಾರ್ಯತೆಯನ್ನು ಸೃಷ್ಟಿಸಿವೆ.
ಎಸ್. ಆರ್. ವಿಜಯಶಂಕರ್ ಒಬ್ಬ ವಿಮರ್ಶಕರು. ಬೆಂಗಳೂರಿನಲ್ಲಿ ವಾಸವಿರುವ ಅವರು, ಸಾಹಿತ್ಯ , ಸಂಸ್ಕೃತಿ, ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ. ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು, ಜನಪ್ರಿಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ. ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ. ...
READ MORE