ವಿಮರ್ಶಕ ಸಿ.ಎಸ್. ಭೀಮರಾಯ (ಸಿಎಸ್ಬಿ) ಅವರ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಕೃತಿ-ಪ್ರತಿಭಾನ. ಡಾ. ಬಸವರಾಜ ಸಬರದ ಅವರು ಕೃತಿಗೆ ಬೆನ್ನುಡಿ ಬರೆದು ‘ಪ್ರಸ್ತುತ ಸಂಕಲನವು ಸಮಕಾಲೀನ ಮಹತ್ವದ ಸಾಹಿತ್ಯ-ಸಾಹಿತ್ಯೇತರ ಕೃತಿಗಳ ಬಗೆಗೆ ಸಮರ್ಥ ಒಳನೋಟಗಳನ್ನು ನೀಡುತ್ತದೆ. 18 ವಿಮರ್ಶಾತ್ಮಕ ಲೇಖನಗಳನ್ನು ಈ ಸಂಕಲನ ಒಳಗೊಂಡಿದೆ. ವಿಮರ್ಶೆ ವೇಳೆ ಸಾಹಿತ್ಯಕ ಕೃತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ಭಾಷೆಯ ಸೊಗಸು, ಖಚಿತ ಅಭಿಪ್ರಾಯ ಹಾಗೂ ವಿಭಿನ್ನ ನೋಟಗಳು ಇಲ್ಲಿಯ ವಿಶೇಷ. ಇಂಗ್ಲಿಷ್ ಕನ್ನಡ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಿದ, ವ್ಯಕ್ತಿಯ ಮತ್ತು ಸಮಾಜದ ವಿಕಸನದಲ್ಲಿ ಗಾಢವಾದ ಆಸಕ್ತಿ ಇರುವ ಮನಸ್ಸು ಇಲ್ಲಿ ಮಾಡಿದೆ. ಮತ್ತೆ ಮತ್ತೆ ಆಕರ್ಷಿಸುವ, ಪ್ರಬುದ್ಧ ಚಿಂತನೆಗೆ ಸೆಳೆಯುವ ಕೃತಿ ಇದು’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಸಿ.ಎಸ್.ಭೀಮರಾಯ ಅವರು ಹೊಸ ತಲೆಮಾರಿನ ಕವಿ ಮತ್ತು ವಿಮರ್ಶಕ. 1981ರಲ್ಲಿ ಜನನ, ಕಲಬುರ್ಗಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಭಾಷೆ ಉಪನ್ಯಾಸಕರು. ಈವರೆಗೆ ಕನ್ನಡದಲ್ಲಿ ಐದು ಮತ್ತು ಆಂಗ್ಲ ಭಾಷೆಯಲ್ಲಿ ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಅರವತ್ತಕ್ಕೂ ಹೆಚ್ಚು ವಿಮರ್ಶಾ ಲೇಖನಗಳು ಮತ್ತು ಇಪ್ಪತ್ತಕ್ಕೂ ಹೆಚ್ಚು ಕವಿತೆಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಾವ್ಯ, ಪ್ರಬಂಧ ಮತ್ತು ವಿಮರ್ಶೆಗಳಲ್ಲಿನ ಸಂವೇದನೆಗಳು, ಧ್ಯೇಯ-ಧೋರಣೆಗಳು ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳ ಬಗೆಗಿನ ತೀವ್ರ ಕಾಳಜಿ, ಅನ್ಯಾಯದ ವಿರುದ್ಧ ಸಿಡಿದೇಳುವ ಆಕ್ರೋಶ, ಸಿಟ್ಟು, ವ್ಯಂಗ್ಯ, ಬಂಡಾಯ-ಅವರ ಬರವಣಿಗೆಯಲ್ಲಿ ಗಮನ ಸೆಳೆಯುತ್ತವೆ. ಕೃತಿಗಳು: ...
READ MORE