ಪ್ರತಿಭಾನ-ಲೇಖಕಿ ಎಲ್.ವಿ. ಶಾಂತಕುಮಾರಿ ಅವರ ಕೃತಿ. ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರ ಎಲ್ಲ ಕೃತಿಗಳಲ್ಲಿರುವ ವೈಚಾರಿಕತೆಯ ಏಕಸೂತ್ರತೆ ಕುರಿತು ಬರೆದ ಬರಹಗಳನ್ನು ಸಂಕಲಿಸಲಾಗಿದೆ. ಪುರಾಣ-ಇತಿಹಾಸದ ಸಂಗತಿಗಳಾದರೂ ಹೊಸ ದೃಷ್ಟಿಕೋನದಿಂದ ಕಾದಂಬರಿಗಳನ್ನು ಬರೆಯುವ ಭೈರಪ್ಪನವರು, ತಮ್ಮ ಬರಹಗಳಿಗೆ ತಮ್ಮದೇ ಆದ ವಿವರಣೆ, ಸಮರ್ಥನೆಗಳನ್ನು ನೀಡುವುದು ಅವರ ವೈಶಿಷ್ಟ್ಯ. ಇಂತಹ ವಿಷಯಗಳೆಡೆಗೆ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.
ಕೃತಿಯ ಪರಿವಿಡಿಯಲ್ಲಿ ಐವತ್ತರ ಅಶ್ವತ್ಥ-ವಂಶವೃಕ್ಷ, ಇಂದಿನ ಕನಸು :ಮುಂದಿನ ವಾಸ್ತವ -’ಯಾನ’, ಮಂದ್ರ: ಭಾಷಾ ಪ್ರಯೋಗ:ಪದ, ರಾಗರಸ ಲಾಸ್ಯ,’ಪರ್ವ’: ಒಂದು ಅಧ್ಯಯನ, ಭೈರಪ್ಪನವರ ಕಾದಂಬರಿಗಳು: ‘ಪ್ರತಿಮೆಗಳು ಮತ್ತು ನಿಸರ್ಗದ ಮೂಲಚೇತನದ ಅಭಿವ್ಯಕ್ತಿ’, ಭಾರತದಲ್ಲಿ ಮತಾಂತರ ಪ್ರಕ್ರಿಯೆ: ಭೈರಪ್ಪನವರ ಕಾದಂಬರಿಯಲ್ಲಿ ಸಾಂಸ್ಕರತಿಕ ಸಂಕಥನ, ಭೈರಪ್ಪನವರ ಕಾದಂಬರಿಗಳು; ಇತಿಹಾಸ ಮತ್ತು ಐತಿಹಾಸಿಕ ಪ್ರಜ್ಞೆ, ‘ಭೈರಪ್ಪನವರ ಕಾದಂಬರಿಗಳಲ್ಲಿ ತಂದೆಯ ಪಾತ್ರ’, ವಿಶ್ವ: ಸಾಹಿತ್ಯ; ಭೈರಪ್ಪನ ಕೃತಿಗಳು, ಉತ್ತರಕಾಂಡ: ಮುದುಡಿದ ಪ್ರೀತಿಕಾಂಡ ಎಂಬ ಶೀರ್ಷಿಕೆಗಳ ಬರಹಗಳಿವೆ.
‘ಪ್ರತಿಭಾನ’ ಕೃತಿಯ ವಿಮರ್ಶೆ
ಮೊ. ಎಲ್.ಪಿ. ಶಾಂತಕುಮಾರಿಯವರು ಡಾ.ಎಸ್.ಎಲ್. ಭೈರಪನವರ ಸಾಹಿತ್ಯ ಕೃತಿಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದವರು. ಅವರಷ್ಟು ಕ್ಷ-ಕಿರಣ ನೋಟದಿಂದ ಭೈರಪ್ಪನವರ ಸಾಹಿತ್ಯವನ್ನು ಕುರಿತು ವಿಮರ್ಶಿಸಿದವರು ವಿರಳ, ಅಷ್ಟೇ ಅಲ್ಲ, ಭೈರಪ್ಪನವರ ಕೆಲವು ಪ್ರಮುಖ ಕಾದಂಬರಿಗಳನ್ನು (ಉದಾ: ಗೃಹಭಂಗ) ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಈ ಇಂಗ್ಲಿಷ್ ಆವೃತ್ತಿಗಳೂ ಮೂಲ ಕನ್ನಡದಷ್ಟೇ ಮನ್ನಣೆಯನ್ನು ಗಳಿಸಿವೆ.
ಪ್ರಸ್ತುತ ಕೃತಿ ಅವರ ವಿಮರ್ಶಾ ಬರಹಗಳ ಪೈಕಿ ವಿಶಿಷ್ಟವಾದುದು. ಭೈರಪ್ಪನವರ ಸಾಹಿತ್ಯಾಭಿಮಾನಿಗಳಿಗೂ ಸಾಹಿತ್ಯಾಧ್ಯಯನ ಪ್ರಿಯರಿಗೂ ಬಹಳ ಉಪಯುಕ್ತವಾಗುವಂತಹುದು. ಭೈರಪ್ಪನವರ ಒಂದೊಂದೇ ಕೃತಿಯನ್ನು ಎತ್ತಿಕೊಂಡು ಅದರೊಳಗಿನ ವಿಚಾರಧಾರೆಯನ್ನು ಪ್ರತ್ಯೇಕವಾಗಿ ವಿಶ್ಲೇಷಿಸುವ ಬದಲಿಗೆ ಅವರ ಎಲ್ಲ ಕೃತಿಗಳಲ್ಲಿ ಕಂಡುಬರುವ ವಿಚಾರಧಾರೆ ಎಂತಹುದು, ಅವುಗಳ ನಡುವೆ ಒಂದು ವೈಚಾರಿಕ ಏಕಸೂತತೆಯನ್ನು ಗುರುತಿಸಬಹುದೇ, ಈ ಅಂಶಗಳತ್ತ ಪ್ರಸ್ತುತ ವಿಮರ್ಶಾಕೃತಿ ಗಮನಹರಿಸಿದೆ. ಅಂದರೆ ಇದು ಭೈರಪ್ಪನವರ ಸಮಗ್ರ ಸಾಹಿತ್ಯದ ಒಳ ಸಮಗ್ರ ಪರಿವೀಕ್ಷಣೆ. ಎಲ್ಲ ಮಹೋನ್ನತ ಕೃತಿಗಳನ್ನು ಒಟ್ಟಿಗೇ ಇಟ್ಟುಕೊಂಡು ಕಾದಂಬರಿಕಾರರ ಅಂತರಂಗವನ್ನು ದರ್ಶಿಸುವ ಒಂದು ಅದ್ಭುತ ಪ್ರಯತ್ನ.
ಸುಮಾರು 500 ಮಟಗಳ ಈ ಮಹಾಗ್ರಂಥ ಓದುಗರಿಗೆ ಎಲ್ಲೂ ಬೇಸರ ತರಿಸುವುದಿಲ್ಲ. ಹೇಗೆ ಭೈರಪನವರ ಕಾದಂಬರಿಗಳು ಓದಿಸಿಕೊಂಡು ಹೋಗುತ್ತವೆಯೋ ಅದೇರೀತಿ ಈ ವಿಮರ್ಶಾಧ್ಯಯನ ಗ್ರಂಥವೂ ಓದಿಸಿಕೊಂಡು ಹೋಗುತ್ತದೆ. ಅನೇಕ ಒಳನೋಟಗಳನ್ನು ಇದರಲ್ಲಿ ಗುರುತಿಸಬಹುದು. ಇದು ಎಲ್ಲ ವಿಮರ್ಶಾ ಬರಹಗಾರರಿಗೆ ದಿಕ್ಸೂಚಿಯಾಗುವಂತಹ ಒಂದು ಅತ್ಯುತ್ತಮ ಮಸ್ತಕ, ಕಥಾವಸ್ತು, ಪಾತ್ರಗಳ ಅಂತರಂಗ -ಎಲ್ಲವನ್ನೂ ಎಲ್. ವಿ ಶಾಂತಕುಮಾರಿಯವರು ಸೊಗಸಾಗಿ ವಿಶ್ಲೇಷಿಸಿದ್ದಾರೆ.
(ಕೃಪೆ : ಪತ್ರಿಕೆ)
---
©2024 Book Brahma Private Limited.