‘ಪಾಶ್ಚಿಮಾತ್ಯ ಸಾಹಿತ್ಯ ವಿಮರ್ಶೆಯ ಪಕ್ಷಿನೋಟ’ ಕೃತಿಯು ಜಿ. ಶಂಕರಯ್ಯ ಅವರ ಸಂಗ್ರಹಾನುವಾಗಿದೆ. ಈ ಕೃತಿಯು 86ನೆಯ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿರುತ್ತದೆ. ಬೇರೆ ಬೇರೆ ತರಗತಿಗಳಲ್ಲಿ ಭಾರತೀಯ ಕಾವ್ಯ ಮೀಮಾಂಸೆಯನ್ನು ಕಲಿಯುತ್ತಾರೆ. ಅದಕ್ಕೆ ತೌಲನಿಕವಾಗಿ ಪಾಶ್ಚಾತ್ಯ ಕಾವ್ಯಮೀಮಾಂಸೆಯನ್ನು ಕಲಿಯುವುದು ಅಗತ್ಯ. ಆ ನಿಟ್ಟಿನಲ್ಲಿ ಜಿ. ಶಂಕರಯ್ಯ ಅವರ ‘ಪಾಶ್ಚಿಮಾತ್ಯ ಸಾಹಿತ್ಯ ವಿಮರ್ಶೆಯ ಪಕ್ಷಿನೋಟ’ ಅಗತ್ಯವಾಗಿದೆ.