ರಾಷ್ಟ್ರಕವಿ ಕುವೆಂಪು ಸಾಹಿತ್ಯವು ಕರ್ನಾಟಕಕ್ಕೆ ಸೀಮಿತವಲ್ಲ; ವಿಶ್ವಕ್ಕೆ ಅನ್ವಯವಾಗುವಂತಹದು. ಅವರ ಯಾವುದೇ ಕೃತಿ ತೆಗೆದುಕೊಂಡರೂ ಅದು ವಿಶ್ವ ವೈಶಾಲ್ಯತೆಯನ್ನು ಪ್ರತಿಪಾದಿಸುತ್ತದೆ. ವಿಶ್ವ ಮಾನವನಾಗಲು ಹಂಬಲಿಸುತ್ತದೆ. ವೈಚಾರಿಕ ಕ್ರಾಂತಿಗೆ ಆಹ್ವಾನ ನೀಡುತ್ತದೆ. ಇಂತಹ ಕವಿಯ ಪರಂಪರೆ ಅದೂ ಸಾಹಿತ್ಯ-ಸಂಸ್ಕೃತಿ-ಸಂಸ್ಕಾರ,ವೈಚಾರಿಕತೆ-ಭಾವುಕತೆ-ಸಾಮಾಜಿಕತೆ ಈ ಎಲ್ಲ ವಲಯಗಳಲ್ಲೂ ಅವರ ದಿವ್ಯದೃಷ್ಟಿಯನ್ನು ಕಾಣಲು ಸಮರ್ಥವಾಗಿ ಲೇಖಕರು ತಮ್ಮ ಅಧ್ಯಯನಪೂರ್ಣ ಸಾಮರ್ಥ್ಯವನ್ನು ಇಲ್ಲಿ ಒರೆಗೆ ಹಚ್ಚಿದ್ದಾರೆ.
ಪರಂಪರೆ ಮತ್ತು ಕುವೆಂಪು, ಕುವೆಂಪು ಕೃತಿ ಪ್ರವೇಶ, ಶ್ರೀ ರಾಮಾಯಣ ದರ್ಶನದ ಮಂಥರೆ, ಇಪ್ಪತ್ತನೇಯ ಶತಮಾನದಲ್ಲಿ ಶ್ರೀ ರಾಮಾಯಣ ದರ್ಶನಂ, ಶ್ರೀ ಕುವೆಂಪು ಕೃತಿಗಳ ತಾತ್ವಿಕ ಹಿನ್ನೆಲೆ, ಕವಿ ಕಂಡ ಕಾಣ್ಕೆ, ಶ್ರೀ ರಾಮಾಯಣ ದರ್ಶನದಲ್ಲಿ ಸಮಕಾಲೀನ ಪ್ರಜ್ಞೆ, ಆಧುನಿಕ ಮಹಾಕಾವ್ಯ ಹಾಗೂ ಸೀತಾ-ಮಂಡೋದರಿಯರು ಹೀಗೆ ವಿವಿಧ ಅಧ್ಯಯಗಳಡಿ ಕುವೆಂಪು ಎಂಬ ಮಹಾಕವಿಯ ವೈಚಾರಿಕ-ಭಾವನಾತ್ನಕ ಜಗತ್ತಿನ ವಿವಿಧ ಆಯಾಮಗಳನ್ನು ಒಟ್ಟುಗೂಡಿಸಲು ಲೇಖಕರು ಪ್ರಯತ್ನಿಸಿದ್ದಾರೆ.
ಸುಜನಾ ಎಂಬ ಕಾವ್ಯನಾಮದಿಂದ ಬರೆಯುವ ಎಸ್. ನಾರಾಯಣ ಶೆಟ್ಟಿ ಅವರು ಜನಿಸಿದ್ದು 1930ರಲ್ಲಿ. ಕೃಷ್ಣರಾಜ ನಗರ ತಾಲ್ಲೂಕು ಹೊಳಲು ಗ್ರಾಮದವರು. ಮೈಸೂರು ವಿಶ್ವವಿದ್ಯಾಲಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಕಥೆ, ಪ್ರಬಂಧ, ವಿಮರ್ಶೆ, ಸಂಪಾದನೆ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 1989ರಲ್ಲಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಚಿಲಿಪಿಲಿ, ಇಬ್ಬನಿ, ಆರತಿ, ಮಂಗಳಾರತಿ, ಸಹೃದಯಸ್ಪಂದನ, ನಾಣ್ಯಯಾತ್ರೆ ಅವರ ಪ್ರಮುಖ ಕೃತಿಗಳು. ‘ಹೃದಯ ಸಂವಾದ’, ‘ಪರಂಪರೆ’, ‘ಪರಂಪರೆ ಮತ್ತು ಕುವೆಂಪು’ ಅವರ ಪ್ರಮುಖ ವಿಮರ್ಶಾ ಕೃತಿಗಳು. ಹೃದಯ ಸಂವಾದ, ಪರಂಪರೆ, ಏಜಾಕ್ ಅವರ ಪ್ರಕಟಿತ ಕೃತಿಗಳು. ‘ಯುಗಸಂಧ್ಯಾ' ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ...
READ MORE