ಓದಿನ ಮನೆ

Author : ಉದಯ್ ಕುಮಾರ್ ಹಬ್ಬು

Pages 236

₹ 250.00




Year of Publication: 2023
Published by: ಗಾಯತ್ರಿ ಎಂಟರ್ ಪ್ರೈಸಸ್
Address: ನಂ. 483, ಪೋರ್ಟ್ ಮೊಹಲ್ಲಾ, ಮೈಸೂರು

Synopsys

‘ಓದಿನ ಮನೆ’ ಉದಯಕುಮಾರ್ ಹಬ್ಬು ಅವರ ವಿಮರ್ಶಕ ಸಂಕಲನ ಕೃತಿಯಾಗಿದೆ. ಇದಕ್ಕೆ ನಾ.ಮೊಗಸಾಲೆ ಕಾಂತಾವರ ಅವರ ಬೆನ್ನುಡಿ ಬರಹವಿದೆ; ವಿಮರ್ಶೆ ಮತ್ತು ತತ್ವಚಿಂತನೆಗಳಲ್ಲಿ ವಿಶೇಷ ಶ್ರದ್ದೆ ಮತ್ತು ಪರಿಶ್ರಮವುಳ್ಳ ಅವರು ಬುದ್ದ ಮತ್ತು ಬಸವಣ್ಣನ ಕುರಿತು ತಾತ್ವಿಕ ಕೃತಿಗಳನ್ನು ಹೊರತಂದಿದ್ದಾರೆ. 'ಭಾರತೀಯ ತತ್ವದರ್ಶನ' ಎನ್ನುವುದು ಇವರ ಚಿಂತನೆಯು ಹರಳುಗಟ್ಟಿದ ಇನ್ನೊಂದು ರಚನೆ. ವಿಸ್ತ್ರತ ಓದು ಮತ್ತು ಅದನ್ನು ಮೀರುವಂತೆ ಬರೆಯುತ್ತಲೇ ಇರುವ ಅವರ "ಬಹುರೂಪಿ" ಬರಹಗಳು ವಿಮರ್ಶಾ ಪುಸ್ತಕಗಳಾಗಿ ಹೊರ ಬರುತ್ತಿವೆ. ಇದರಲ್ಲಿ ಕನ್ನಡ, ಮಲೆಯಾಳಂ, ಇಂಗ್ಲಿಷ್, ರಷ್ಯನ್ ಭಾಷೆಗಳಲ್ಲಿನ ಕತೆ, ಕಾದಂಬರಿ, ಕಾವ್ಯಗಳು ಒಟ್ಟೂ ನೂರಕ್ಕೆ ಮಿಕ್ಕಿ ಕೃತಿಗಳು ಅವಲೋಕನ ಮತ್ತು ವಿಮರ್ಶೆಗೊಳಪಟ್ಟಿವೆ. ಓದು ಕೇವಲ ಓದಿಗಾಗಿ ಮಾತ್ರವಲ್ಲ, ಅಧ್ಯಯನಕ್ಕೂ ಇರಬೇಕೆನ್ನುವಂತೆ ಬದುಕುತ್ತಿರುವ ಅವರು ತಾವು ಓದಿದ್ದನ್ನು ಇನ್ನೊಬ್ಬರೂ ಓದಬೇಕೆಂಬ ಖುಷಿಯಲ್ಲಿ ಈ ಕೃತಿಯನ್ನು ಹೊರ ತರುತ್ತಿದ್ದಾರೆ. ಭಾರತೀಯ ಸಂಸ್ಕೃತಿಯ ಮುಖ್ಯ ಸಂವೇದನೆಯಾದ 'ಬಹುಭಾಷಾ ಸರಸ್ವತಿ'ಯ ಆರಾಧಕರಾಗಿರುವ ಹಬ್ಬು ಅವರು ಪ್ರತಿ ಭಾಷೆಯೂ ಇನ್ನೊಂದು ಭಾಷೆಯಿಂದ ಪಡೆಯಬೇಕು ಮತ್ತು ಕೊಡಬೇಕು ಮತ್ತು ಅದಕ್ಕೆ ತನ್ನದನ್ನೂ ಕೊಡಬೇಕು ಎನ್ನುವುದಕ್ಕೆ ತನ್ನ ಮನಸ್ಸನ್ನು ರೂಪಕವಾಗಿಟ್ಟುಕೊಂಡ ಚಿಂತಕರು. ಈ ನೆಲೆಯಲ್ಲಿ ಇದೊಂದು ಅಪರೂಪದ ಮತ್ತು ಮಹತ್ವದ ಕೃತಿ ಎಂದಿದ್ದಾರೆ.

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Related Books