ನೀರೆಲ್ಲವೂ ತೀರ್ಥ

Author : ಡಿ.ಎಸ್.ನಾಗಭೂಷಣ

Pages 200

₹ 150.00




Year of Publication: 2017
Published by: ವಸಂತ ಪ್ರಕಾಶನ
Address: ನಂ. 360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು- 560 011

Synopsys

ಡಿ.ಎಸ್.ನಾಗಭೂಷಣ ಅವರು ಬರೆದಿರುವ ಸಮಕಾಲೀನ ಸಾಂಸ್ಕೃತಿಕ ಟಿಪ್ಪಣಿಗಳ ಸಂಗ್ರಹ ‘ನೀರೆಲ್ಲವೂ ತೀರ್ಥ’. ಕೃತಿಗೆ ಟಿ.ಎನ್.ವಾಸುದೇವ ಮೂರ್ತಿ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, 'ಹೊಸ ಮನುಷ್ಯ' ಸಮಾಜವಾದಿ ಮಾಸಿಕಕ್ಕಾಗಿ ಬರೆದ ಬಿಡಿ. ಟಿಪ್ಪಣಿಗಳ ಈ ಸಂಗ್ರಹವು ಕರ್ನಾಟಕದ ಪ್ರಚಲಿತ ಸಾಹಿತ್ಯಕ ಸಾಂಸ್ಕೃತಿಕ ವಿದ್ಯಮಾನಗಳ ಒಂದು ವಿಮರ್ಶಾತ್ಮಕ ಅವಲೋಕನವಾಗಿದೆ, ಡಿ.ಎಸ್‌.ನಾಗಭೂಷಣರದ್ದೇ ಎನ್ನಬಹುದಾದ ಅನನ್ಯ ಸಮಾಜವಾದಿ ಒಳನೋಟಗಳ ಕಾರಣದಿಂದ, ಇವು ನಮ್ಮ ಸಾಮಾನ್ಯ ಪತ್ರಿಕಾ ಬರಹಗಳ ರೀತಿ ದೂರ ನಿಂತು ಮಾಡುವ ನಿರ್ಲಿಪ್ತ ವಿಮರ್ಶೆಯಾಗಿರದೆ. ಘಟನೆಗಳ ಮಧ್ಯೆ ನಿಂತು ನೋಡಿದ್ದರಿಂದಾಗಿ ಮೂಡಿದ ಜವಾಬ್ದಾರಿಯುತ ಮತ್ತು ಕ್ರಿಯಾಶೀಲ ಬರಹಗಳಾಗಿವೆ. ಅದು ಎಸ್ ಎನ್ ಬಾಲಗಂಗಾಧರರ ಸಂಶೋಧನೆಯ ಲೊಳಲೊಟ್ಟಿತನವಿರಬಹುದು, ರಾಜಕಾರಣಿಗಳೆದುರು ವಿದೂಷಕರಂತಾಗಿರುವ ನಮ್ಮ ಸಾಹಿತಿಗಳ ವರ್ತನೆ ಇರಬಹುದು ಅಥವಾ ತಮ್ಮೆಲ್ಲ ಸ್ವಾಯತ್ತತೆಯನ್ನು ಕಳೆದುಕೊಂಡು ಸರ್ಕಾರಿ ಸಂಸ್ಥೆಗಳಂತಾಗಿರುವ ನಮ್ಮ ಅಕಾಡೆಮಿಗಳು ನಡೆಯುತ್ತಿರುವ, ರೀತಿ-ನೀತಿಗಳಿರಬಹುದು. ಅಥವಾ ಐಕಾನ್ಗಳಾಗಿಬಿಟ್ಟಿರುವ ಹಿರಿಯ ಸಾಹಿತಿಗಳ ದ್ವಂದ್ವ ನೀತಿಯೇ ಇರಬಹುದು. ಇಲ್ಲಿನ ಬರಹಗಳು ಸಿನಿಮಾ, ರಂಗಭೂಮಿ, ಸಾಹಿತ್ಯ ವಿಮರ್ಶೆ, ಸಂಶೋಧನೆ, ವಿಜ್ಞಾನ, ಶಿಕ್ಷಣ, ಆಧ್ಯಾತ್ಮ ಮುಂತಾದ ಸಾರ್ವಜನಿಕ ಮಹತ್ವದ ಮತ್ತು ಆಸಕ್ತಿಯ ಹಲವು ವಿಷಯಗಳನ್ನು ಕುರಿತಾಗಿವೆಯಾದರೂ, ನಾಗಭೂಷಣರ ಲೋಕ ಗ್ರಹಿಕೆಯ ಕ್ರಮದಲ್ಲಿನ ಸಮಗ್ರತೆಯಿಂದಾಗಿ ಅಂತರ್ಯದಲ್ಲಿ ಇವೆಲ್ಲವೂ ಪರಸ್ಪರ ಅಂತಸಂಬಂಧಿಗಳಾಗಿ ಸಂಸ್ಕೃತಿಯನ್ನು ರೂಪಿಸುವ ಬಗೆಯನ್ನು ಅನಾವರಣ ಮಾಡುತ್ತಾ ತಮ್ಮ ಅರ್ಥಪೂರ್ಣತೆಯನ್ನು ಸಾದಿಸಿಕೊಳ್ಳುತ್ತವೆ. ಇದರಲ್ಲಿನ ಹಲವು ವಿಚಾರಗಳು ಚರ್ಚಾಸ್ಪದ ಎನಿಸಿದರೂ ಮತ್ತು ಕೆಲ ವಿಚಾರಗಳು ಕೆಲವೆಡೆ ಪುನರಾವರ್ತಿತವಾದಂತೆ ತೋರುತ್ತದಾದರೂ ಪ್ರತಿ ವಿಷಯವನ್ನೂ ಹೊಸದಾಗಿ ಪರಿಭಾವಿಸುವ ಅವರ ದೃಷ್ಟಿಕೋನ ಕುತೂಹಲ ಮೂಡಿಸುತ್ತದೆ ಎಂದಿದ್ದಾರೆ.

About the Author

ಡಿ.ಎಸ್.ನಾಗಭೂಷಣ
(01 February 1952 - 19 May 2022)

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...

READ MORE

Related Books