ಡಾ. ಸುರೇಶ ನಾರಾಯಣ ನಾಯ್ಕ ಅವರ ‘ನಿಜದ ಶೋಧ’ ಕೃತಿಯಲ್ಲಿ ವಿಮರ್ಶಾ ಲೇಖನಗಳ ಒಂದು ಚೆಲುವಾದ ಮಾಲೆಯೇ ಇದೆ. ಇಲ್ಲಿಯ ವಿಭಿನ್ನ ನೆಲೆಗಳ ವಿವಿಧ ಆಶಯಗಳ ಮತ್ತಿ ನಾನಾ ಬಗೆಗಳ ಕೃತಿ ಸಮೀಕ್ಷೆಗಳು ತಮ್ಮ ಉದ್ದೇಶವನ್ನು ಸಫಲಗೊಳ್ಳುತ್ತಾ ಹೋಗುವುದು ಮುಖ್ಯವೆನಿಸುತ್ತವೆ. ಕನ್ನಡದ ಮೊದಲ ಕವಿ ಪಂಪನನ್ನಿಲ್ಲಿ ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಎಂದೇ ಗುರುತಿಸುವ ಡಾ. ಸುರೇಶ ನಾಯ್ಕರು, ಕ್ಷೀಷೆಯೆನಿಸುವ ಇಂತಹ ಹೇಳಿಕೆಗಳನ್ನೂ ಸಮರ್ಥಿಸುತ್ತಾ ತಾರ್ಕಿಕ ನೆಲೆಗಟ್ಟಿನಲ್ಲಿ ಗಟ್ಟಿಗೊಳಿಸುತ್ತ ಸಾಗುತ್ತಾರೆ. ಅದೇ ರೀತಿ, ರಾಮಧಾನ್ಯ ಚರಿತ್ರೆಯ ವಿಭಿನ್ನ ಮಗ್ಗಲುಗಳು ಪರಿಚಯಿಸುವ ಕ್ರಮದಲ್ಲಿ ಕನಕ ಮತ್ತು ಪಶುಪಾಲನಾ ಪರಂಪರೆಯಲ್ಲಿ ಕನಕನನ್ನುಸಮೀಕರಿಸುವ ರೀತಿಯಲ್ಲಿಯೂ ಹೊಸತನ ಕಂಡುಬರುತ್ತದೆ. ಮುದ್ದಣ್ಣನ ರಾಮಾಶ್ವಮೇಧದ ಶಬ್ದಶಿಲ್ಪದಲ್ಲಿ ಮುದ್ದಣ ಮನೋರಮೆಯರ ಸರಸ-ಸಲ್ಲಾಪ ಸೀತೆಯ ಒಡಲಿನ ನೋವನ್ನು ವಿಶ್ಲೇಷಿಸುವ ವಿಧಾನವು ಅಪ್ಯಾಯಮಾನವಾಗಿದೆ.
ಕವಿ ವಿಮರ್ಶಕ ಸಂಶೋಧಕ ಸುರೇಶ ನಾರಾಯಣ ನಾಯ್ಕ ಅವರದ್ದು ದಣಿವರಿಯದ ಬರಹ. ಅಪ್ಪಟ ಗ್ರಾಮೀಣ ಪ್ರತಿಭೆ.ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮೂಲತಃ ಉತ್ತರ ಕನ್ನಡದ ಹೊನ್ನಾವರದಲ್ಲಿ 1968 ಜುಲೈ 26ರಂದು ಜನಿಸಿದರು. ಅವರ ಇತ್ತಿಚಿನ ಕವನ ಸಂಕಲನ ‘ಪುರುಷಾರ್ಥ’ 2020ರಲ್ಲಿ ಪ್ರಕಟಣೆ ಕಂಡಿದೆ. ಸಂಶೋಧನ ದೀಪ, ಪುರುಷಾರ್ಥ, ಹೊಳೆಸಾಲು, ವಿಜಯ ಶೋಧ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE