‘ನೆರಳಿಲ್ಲದ ಕಾಯ’ ಲೇಖಕ ರವಿಕುಮಾರ್ ನೀಹ ಅವರ ವಿಮರ್ಶಾ ಲೇಖನಗಳ ಸಂಕಲನ. ಈ ಕೃತಿಗೆ ಹಿರಿಯ ಲೇಖಕ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು ಬೆನ್ನುಡಿಯನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ರವಿಕುಮಾರ್ ನೀಹ ಅವರ ಕೃತಿ ಸಾಹಿತ್ಯ ಮತ್ತು ಸಮಕಾಲೀನ ಸಂದರ್ಭದ ಕೆಲವು ಸಂಗತಿಗಳ ಕುರಿತ ವಿಮರ್ಶಾಲೇಖನಗಳನ್ನು ಒಳಗೊಂಡಿದೆ. ಲೇಖಕಮೇ ಇಲ್ಲಿ ಸಾಹಿತ್ಯ ವಿಮರ್ಶೆ ಮತ್ತು ವಿಚಾರ ಎಂದು ಎರಡುಭಾಗ ಮಾಡಿಕೊಂಡಿದ್ದಾರೆ. ಬಾಹ್ಯದಲ್ಲಿ ಈ ಎರಡೂ ಭಾಗಗಳೂ ವಸ್ತುದ್ರವ್ಯಕ್ಕೆ ಸಂಬಂಧಿಸಿದ ಭಿನ್ನತೆಯನ್ನು ಪ್ರಮಾಣುವಾಗಿಸಿಕೊಂಡು ಮಾಡಿದ ವಿಭಜನೆಗಳಾಗಿ ಕಾಣುತ್ತವೆ. ಆದರೆ ಒಳಹೊಕ್ಕು ನೋಡಿದಾಗ ಇಲ್ಲಿನ ಚಿಂತನೆ ಸಮಾಜಮುಖಿಯಾದ ಸಂಸ್ಕೃತಿ ಶೋಧವಾಗಿರುವುದು ಒಡೆದು ಕಾಣುವ ಅಂಶ. ರವಿಕುಮಾರ್ ಮೂಲತಃ ಸಾಹಿತ್ಯದ ಗಂಭೀರ ವಿದ್ಯಾರ್ಥಿ. ಸಾಹಿತ್ಯವನ್ನು ಕೇವಲ ಮನರಂಜನೆ, ಕಲೆಯ ಅಸ್ವಾದನೆ ಇತ್ಯಾದಿ ಸರಳೀಕೃತ ಲಘು ದೃಷ್ಟಿಯಲ್ಲಿ ಗಣಿಸದೆ, ಸಮಜೋ-ಸಾಂಸ್ಕೃತಿಕ ಅಧ್ಯಯನವಾಗಿ ಪರಿಭಾವಿಸುವ ವಿಧ ಇವರ ಓದಿನ ಕ್ರಮ. ಸಹಜವಾಗಿ ಇವರ ಓದು ಪರಂಪರಂರೆಯ ಅರಿವಿನಲ್ಲಿ ವರ್ತಮಾನದ ವಿಸಂಗತಿಗನ್ನು ಮುಖಾಮುಖಿಯಾಗಿಸಿದ ಬದುಕಿನ ಶೋಧವಾಗಿ ಅನುಸಂಧಾನಕ್ಕೆ ಒಳಗಾಗುತ್ತದೆ. ಸಮಾಜದ ಸಂರಚನೆನ್ನು ಕೇಂದ್ರದಲ್ಲಿರಿಸಿಕೊಂಡು ಸಾಹಿತ್ಯದ ಸಂವೇದನೆಯನ್ನು ಅಳೆದು ತೂಗುವ ವಿಶ್ಲೇಷಣೆಗೆ ಒಳಪಡಿಸುವ ಪರಿಕ್ರಮ ಇವರ ವಿಮರ್ಶೆಯ ವಿಧಾನವಾಗಿದೆ. ಹಾಗೆಯೇ ಸಮಕಾಲೀನ ವಿದ್ಯಮಾನಗಳನ್ನು ಅಕೆಡೆಮಿಕ್ ಶಿಸ್ತಿನಲ್ಲಿ ವಿಶ್ಲೇಷಿಸುವ ಮತ್ತು ವಿಸಂಗತಿಗಳ ಆಗುಹೋಗುಗಳ ಬಗ್ಗೆ ನಿರೀಕ್ಷೆ ತೋರುವ ನಿಲುವಿನಲ್ಲಿ ಇಲ್ಲಿನ ವಿಚಾರ ವಿಮರ್ಶೆ ಸಾಗಿದೆ ಎನ್ನುತ್ತಾರೆ. ಹೀಗಾಗಿ ಇಲ್ಲಿ ಪ್ರಧಾನವಾಗಿ ಸಾಹಿತ್ಯ-ವಿಚಾರ ಎಂಬುದು ಸಮಾಜೋ-ಸಂಸ್ಕೃತಿ ಮುಖಿಯಾಗಿರುವುದು ವಿಶೇಷ.
ಕನ್ನಡದ ಬಹುವಿಸ್ತಾರದ ವಿಮರ್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನಸೆಳೆದಿರುವ ಡಾ. ರವಿಕುಮಾರ್ ನೀಹ ಅವರು ಹಳ್ಳಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೋಕಿನ ನೀಲಗೊಂಡನಹಳ್ಳಿಯಲ್ಲಿ ಜನನ. ತಂದೆ- ಎನ್.ಸಿ. ಹನುಮಂತಯ್ಯ, ತಾಯಿ ದೊಡ್ಡಕ್ಕ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ರವಿಕುಮಾರ್ ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ.ಪದವಿಗಳಿಸಿದ್ದಾರೆ. ಆನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ’ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ಬರಹದ ಪಯಣದಲ್ಲಿ ವಿಮರ್ಶೆಯ ಮಾರ್ಗ ಹಿಡಿದಿರುವ ರವಿಕುಮಾರ್ ನೀಹ ಸಂಶೋಧನೆ, ಖಂಡಕಾವ್ಯಗಳೆಡೆಗೂ ಗುರುತಿಸಿಕೊಂಡವರು. ...
READ MORE