`ನಾಟ್ಯ ಶಾಸ್ತ್ರದ ದೃಷ್ಟಿಯಲ್ಲಿ ಗೀತಗೋವಿಂದ’ ಲಕ್ಷ್ಮೀ ಬಸವರಾಜು ಅವರ ಕೃತಿಯಾಗಿದೆ. ನಾಟ್ಯಶಾಸ್ತ್ರವು ರಂಗಾಭಿನಯಕ್ಕೆ ಸಿದ್ಧಪಡಿಸಿರುವ ಆಧಾರ ಗ್ರಂಥ. ಯಕ್ಷಗಾನ ಪ್ರಸಂಗಗಳನ್ನು ಗಮನಿಸಿದರೆ, ಅವು ರಚನೆಯಾಗಿರುವುದು ಕಾವ್ಯ ರೂಪದಲ್ಲೆ. ಹಾಗೆಯೆ “ಗೀತಗೋವಿಂದ” ಒಂದು ಮನೋಹರವಾದ ಕಾವ್ಯ-ಸಂಗೀತ-ನಾಟಕವಾಗುವುದರಲ್ಲಿ ಅನುಮಾನವೇ ಇಲ್ಲ. ಡಾ.ಲಕ್ಷ್ಮೀ ಬಸವರಾಜು ಅದರ ಎಲ್ಲಾ ಸಾಧ್ಯತೆಗಳನ್ನು ತಮ್ಮ ಈ ಪುಸ್ತಕದಲ್ಲಿ ವಿವರಿಸಿ ನೃತ್ಯ ಲೋಕಕ್ಕೆ ಒಂದು ಅಪೂರ್ವ ಕೃತಿಯನ್ನು ಒದಗಿಸಿದ್ದಾರೆ.
ಲಕ್ಷ್ಮೀ ಬಸವರಾಜ್ ಮೂಲತಃ ಬೆಂಗಳೂರಿನವರು. ಎಂ.ಎ. (ನೃತ್ಯ) ಮತ್ತು ಪಿಹೆಚ್.ಡಿ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ ನಾಟಕ ಮತ್ತು ಸಂಗೀತ ವಿಭಾಗದಿಂದ ಪಡೆದಿದ್ದಾರೆ. ವಸಂತಲಕ್ಷ್ಮಿಯವರ ಶಿಷ್ಯಯಾಗಿ ಅನೇಕ ನೃತ್ಯ ರೂಪಕ ಮತ್ತು ನೃತ್ಯನಾಟಕಗಳಲ್ಲಿ ಭಾಗವಹಿಸಿದ್ದಾರೆ. ಶಾಲಾ ದಿನಗಳಲ್ಲೇ ನೃತ್ಯದ ಕಡೆಗೆ ಆಸಕ್ತಿಯಿದ್ದು, ಹಲವಾರು ವರ್ಷ ಪರಿಶ್ರಮವಹಿಸಿ, ಶ್ರದ್ಧೆಯಿಂದ ಕಲಿತು ನೂರಾರು ನೃತ್ಯ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ನೀಡಿದ್ದಾರೆ. ಹಾಗೆಯೇ ಸಂಗೀತ ಮತ್ತು ನಾಟಕಾಭಿನಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ. ಕೃತಿಗಳು: ನಾಟ್ಯಶಾಸ್ತ್ರದ ದೃಷ್ಟಿಯಲ್ಲಿ ಗೀತಗೋವಿಂದ ...
READ MORE