‘ಮೌನ ದನಿ’ ಲೇಖಕ ಅಜಕ್ಕಳ ಗಿರೀಶ ಭಟ್ ಅವರ ವಿಮರ್ಶಾ ಲೇಖನಗಳ ಸಂಕಲನ. ಇಲ್ಲಿ ಎರಡು ಬಗೆಯ ಲೇಖನಗಳಿವೆ. ಕೆಲವು ಲೇಖಕರು ತಾವಾಗೆ ಬರೆದಂಥವು, ಇನ್ನೂ ಕೆಲವು ಪತ್ರಿಕೆಗಳಿಗಾಗಿ ಬೇರೆಯವರು ಕೇಳಿ ಬರೆಸಿದಂತವು. ಇಲ್ಲಿನ ಹೆಚ್ಚಿನ ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಹಾಗೂ ಸಂಕಲನಗಳಲ್ಲಿ ಪ್ರಕಟವಾಗಿವೆ. ಈ ಕೃತಿಯಲ್ಲಿ ಸಾಕ್ಷಿಪ್ರಜ್ಞೆಗಳ ಮಾತು- ಮೌನಗಳು, ಭಾರತದ ಸೆಕ್ಯುಲರಿಸಮ್ಮಿನ ಸಮಸ್ಯೆ, ಉನ್ನತ ಶಿಕ್ಷಣದಲ್ಲಿ ಭಾಷಾಬೋಧನೆ, ವರ್ಗ, ಜಾಗಿ, ಕನ್ನಡ ಮತ್ತು ಜಾಗತೀಕರಣ, ಭಾರತೀಯರು ಮತ್ತು ಇಂಗ್ಲಿಷ್ ಉಚ್ಚಾರಣೆ, ಕರಾವಳಿ ಕನ್ನಡ ಅಧ್ಯಯನ ಏಕೆ ಮತ್ತು ಹೇಗೆ, ಕನ್ನಡ - ನಮ್ಮತನದ ಸಂಕೇತವಾಗಬೇಕು, ಹವ್ಯಕ ಭಾಷೆಯ ವೈಶಿಷ್ಟ್ಯ, ಇತಿಹಾಸ ಕುರಿತ ಆಧುನಿಕ ಪ್ರಜ್ಞೆ ಸೇರಿದಂತೆ 15 ಲೇಖನಗಳಿವೆ.
ಅಜಕ್ಕಳ ಗಿರೀಶ್ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು. ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದರು. ಸದ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅಂಚೆ ತೆರಪಿನ ಶಿಕ್ಷಣದ ಮೂಲಕ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ಡಾ. ಡಿ.ಆರ್. ನಾಗರಾಜ್ ಕುರಿತು ಒಂದು ಅಧ್ಯಯನದ ಬಗ್ಗೆ ಮಹಾಪ್ರಬಂಧವನ್ನು ರಚಿಸಿ ಡಾ. ಶಿವರಾಮಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ಲೇಖನಗಳನ್ನು ಬರೆಯತೊಡಗಿದ ಅವರ ಐವತ್ತಕ್ಕೂ ಹೆಚ್ಚು ಲೇಖನಗಳು ...
READ MORE