ಮರುಮಾತು

Author : ಅಮರೇಂದ್ರ ಹೊಲ್ಲಂಬಳ್ಳಿ

Pages 120

₹ 100.00




Year of Publication: 2014
Published by: ಮೇಘ ಪಬ್ಲೀಕೇಷನ್ಸ್
Address: ನಂ. 119, 4ನೇ ಕ್ರಾಸ್ ರೋಡ್, ರಾಜಗೋಪಾಲ ನಗರ, ಬೆಂಗಳೂರು. 560058

Synopsys

ಅಮರೇಂದ್ರ ಹೊಲ್ಲಂಬಳ್ಳಿಯವರು ’ಮರುಮಾತು’ ಸಂಕಲನದ ಮೂಲಕ ವಿಮರ್ಶೆಯ ಕ್ಷೇತ್ರವನ್ನೂ ಪ್ರವೇಶಿಸುತ್ತಿದ್ದಾರೆ. ಕತೆಗಾರರಾಗಿ ಉತ್ತಮ ಕತೆಗಳನ್ನು ಬರೆದಿರುವ ಅಮರೇಂದ್ರರು ವಿಮರ್ಶಕರಾಗಿಯೂ ಮಹತ್ವದ ಒಳನೋಟಗಳಿರುವ ಲೇಖನಗಳನ್ನು ನೀಡಿದ್ದಾರೆ. ವಿಮರ್ಶೆಯೂ ಒಂದು ರೀತಿಯಿಂದ ವಿಶಿಷ್ಟ ಸಂಕಥನ. ವಿಮರ್ಶೆಯ ಮೂಲಕವೇ ನಾವು ಸಾಮಾಜಿಕ ಸಂಬಂಧಗಳನ್ನು ಸ್ಥಾಪಿಸಲು ಸಾಧ್ಯ. ಅದು ನಮ್ಮ ಜವಾಬ್ದಾರಿಯೂ ಹೌದು. ವಿಮರ್ಶೆಯೇ ಬೇಡ ಎನ್ನುವ ವಾದದ ನಡುವೆಯೇ ವಿಮರ್ಶೆ ಕೂಡ ಅಗತ್ಯವೆಂದು ಅಮರೇಂದ್ರ ಕೃತಿಯಲ್ಲಿ ತೋರಿಸಿಕೊಟ್ಟಿದ್ದಾರೆ.

About the Author

ಅಮರೇಂದ್ರ ಹೊಲ್ಲಂಬಳ್ಳಿ

1968 ಕೋಲಾರ ಜಿಲ್ಲೆಯ ಹೊಲ್ಲಂಬಳ್ಳಿಯಲ್ಲಿ ಜನಿಸಿದ ಅಮರೇಂದ್ರ ಹೊಲ್ಲಂಬಳ್ಳಿ, 1994ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮರುಮಾತು (ವಿಮರ್ಶಾ ಲೇಖನಗಳ ಸಂಕಲನ) ಸೇರಿದಂತೆ ಹಲವು ಕೃತಿಗಳನನ್ನು ಪ್ರಕಟಿಸಿದ್ದಾರೆ. ‘ಕಾಯ’ ಇವರ ಕಾದಂಬರಿ.  ...

READ MORE

Related Books