ಶಿವರಾಮಯ್ಯನವರು ತಮ್ಮ ವೈಚಾರಿಕ ಆಶಯಕ್ಕೆ ಅನುಗುಣವಾದ ಅನೇಕ ಕೃತಿಗಳ ವಿಮರ್ಶೆಯ ಮೂಲಕ ತಮ್ಮ ಚಿಂತನೆಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಹಳೆಯ ಕೃತಿಗಳನ್ನು ಎತ್ತಿಕೊಂಡು ಅದರಲ್ಲಿನ ಆಶಯಗಳನ್ನು ಸಮಕಾಲೀನವಾಗಿ ಅರ್ಥೈಸುವ ಕ್ರಮ ಹೊಸ ಹೊಳಹುಗಳನ್ನು ಹುಟ್ಟುಹಾಕುವ ಚಿಂತನಾ ಪರಂಪರೆ ಈ ಕೃತಿಯಲ್ಲಿದೆ. ಪ್ರಾಚೀನ ಕೃತಿಗಳಿಂದ ಹಿಡಿದು ಇತ್ತೀಚಿನ ಕೃತಿಗಳವರೆಗೂ ಅವರ ವಿಮರ್ಶೆಯ ಹರಹು ಹರಡಿದ್ದು ಮಧ್ಯೆ ಮಧ್ಯೆ ಸಾಮಾಜಿಕ ಕಾಳಜಿಯ ವಿಷಯಗಳನ್ನು ಚರ್ಚಿಸುವುದರೊಂದಿಗೆ, ತಮ್ಮ ಅಂಡಮಾನ್ ಪ್ರವಾಸದಲ್ಲಿ ಕಂಡ ಸೃಷ್ಟಿ ಸೌಂದರ್ಯ - ಪ್ರಳಯ ಭಯಂಕರ ಸ್ಥಿತಿಗಳೆರಡನ್ನುಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...
READ MORE