ಖ್ಯಾತ ಲೇಖಕ ಜಿ.ಎನ್. ದೇವಿ ಅವರು ಬರೆದ ಕೃತಿಯನ್ನು ಲೇಖಕ ಎಂ.ಜಿ. ಹೆಗಡೆ ಅವರು ‘ಮಹಾಭಾರತ: ಭೂಮಕಾವ್ಯ ಮತ್ತು ಭಾರತ ರಾಷ್ಟ್ರ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಲೇಖಕರು ಹೇಳುವಂತೆ ‘ಮಾಧ್ಯಮ ಭಾರತದಲ್ಲಿ ಸಾಮ್ರಾಜ್ಯಗಳೂ ರಾಜವಂಶಗಳೂ ಉದಯಿಸಿ ಅಸ್ತಮಿಸಿವೆ ; ಧಾರ್ಮಿಕ ಪಂಥಗಳು ಹುಟ್ಟಿ ಕಾಲಪ್ರವಾಹದಲ್ಲಿ ಕಣ್ಮರೆಯಾಗಿವೆ ; ತತ್ತ್ವಶಾಸ್ತ್ರೀಯ ಪ್ರಸ್ಥಾನಗಳು ಹೊಸ ಪ್ರಸ್ಥಾನಗಳಿಂದ ಸ್ಥಾನಪಲ್ಲಟಗೊಂಡಿವೆ ; ಕಲಾಪ್ರಕಾರಗಳು ಹೊರಹೊಮ್ಮಿ ಹಿಂದೆ ಸರಿದಿವೆ . ಆದರೆ ಮಹಾಭಾರತ ಮಾತ್ರ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ . ಬೆರಗು ಹುಟ್ಟಿಸುವಷ್ಟು ದೀರ್ಘವೂ ಆಳವೂ ಆದ ಅದರ ವ್ಯಾಖ್ಯಾನ ಪರಂಪರೆಯೂ ಮುಂದುವರಿದೇ ಇದೆ . ಮಹಾಭಾರತದ ಕಾಲಾತೀತ ಮಾಂತ್ರಿಕತೆಯ ರಹಸ್ಯವಾದರೂ ಏನು ? ನಮ್ಮ ಸುಪ್ತಪ್ರಜ್ಞೆಯ ಯಾವ ತಂತುವನ್ನದು ಮೀಟುತ್ತದೆ ? ನಿಬಿಢವಾದ ಆ ಕಥಾರಣ್ಯದಲ್ಲಿ ಸಾಗುವ ಬಗೆ ಹೇಗೆ ? ಭಾರತದ ಪ್ರಮುಖ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತಕರಲ್ಲೊಬ್ಬರಾದ ಗಣೇಶ ದೇವಿಯವರ ಈ ಕೃತಿ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತ ಯಾಕೆ ಮಹಾಭಾರತವು ವಿವಾದಾತೀತವಾಗಿ ಭಾರತದ ರಾಷ್ಟ್ರೀಯ ಮಹಾಕಾವ್ಯವಾಗಿ ಉಳಿದಿದೆ ಎಂಬುದರ ಕಡೆ ಗಮನವನ್ನು ಸೆಳೆಯುತ್ತದೆ . ಇಂತಹ ಮಹಾಭಾರತ – ಭೂಮಕಾವ್ಯ ಮತ್ತು ಭಾರತ ರಾಷ್ಟ್ರ ಕೃತಿ ಇದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಡಾ. ಎಂ.ಜಿ ಹೆಗಡೆ ಕುಮಟಾದ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಬರಹಗಳು ಇವರ ಆಸಕ್ತಿ ಕ್ಷೇತ್ರವಾಗಿದೆ. ಅಧ್ಯಾಪನ, ಅಧ್ಯಯನ ಜೊತೆಗೆ ಸಂಶೋಧನೆ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡದ ಮುಖ್ಯ ವಿಮರ್ಶಕರಲ್ಲಿ ಒಬ್ಬರಾದ ಡಾ.ಎಂ.ಜಿ.ಹೆಗಡೆಯವರು ಜಿ.ಎಸ್. ಆಮೂರ ಅವರ ಅಭಿನಂದನ ಗ್ರಂಥ ’ವಿಮರ್ಶಾ ವಿವೇಕ’ದ ಸಂಪಾದಕರು. ಹಿರಿಯ ಸಾಹಿತಿ ಬಿ.ಎಚ್. ಶ್ರೀಧರ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಸಂಪಾದಿಸಿದ್ದಾರೆ. ಕೃತಿಗಳು: ಸಾಲು ದೀಪಗಳು, ತಲಸ್ಪರ್ಶಿ, ಎಂ. ಹಿರಿಯಣ್ಣ, ಅಂತ್ಯವಿಲ್ಲದ ಹಾದಿ, ಡಿ.ಡಿ ಕೊಸಾಂಬಿ ಅವರ ಆಯ್ದ ಬರಹಗಳು, ಮಹಾಭಾರತ, ಅಮೃತ ಬಿಂದು, ಸಹಯಾನ, ಬೆಳಕಿನ ...
READ MORE