ಕುವೆಂಪು ಸಾಹಿತ್ಯ ಲೋಕ-೩

Author : ಹ.ಕ. ರಾಜೇಗೌಡ

Pages 412

₹ 300.00




Year of Publication: 2016
Published by: ಸಿ.ವಿ.ಜಿ. ಪಬ್ಲಿಕೇಷನ್ಸ್

Synopsys

ಕನ್ನಡ ಸಾಹಿತ್ಯ ಸಾರಸತ್ವ ಲೋಕಕ್ಕೆ ಕುವೆಂಪು ಅವರ ಕೊಡುಗೆಗಳ ಕುರಿತು ಈ ಕೃತಿಯಲ್ಲಿ ಲೇಖಕರು ವಿವಿಧ ಬರಹಗಾರರು ಬರೆದ ವಿಶ್ಲೇಷಣಾ ಪರಾಮರ್ಶ ಲೇಖನಗಳನ್ನು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಕೆ.ಎಸ್. ಭಗವಾನ್‌ ಅವರು ಕುವೆಂಪು ಕಂಡ ದಲಿತ ಜೀವನ ಕುರಿತು ಬರೆದಿದ್ದರೆ, ಹಾ.ತಿ. ಕೃಷ್ಣೇಗೌಡ ಅವರು ನೆನಪಿನ ದೋಣಿಯಲ್ಲಿ- ಸಾಂಸ್ಕೃತಿಕ ದಾಖಲೆ ಬಗ್ಗೆ ಬರೆದಿದ್ದಾರೆ. ವಾಲ್ಮೀಕಿ ಮತ್ತು ಕುವೆಂಪು ರಾವಣ; ಶ್ರೀಕಂಠ ಕೂಡಿಗೆ, ಶ್ರೀರಾಮಾಯಣ ದರ್ಶನಂ ಮತ್ತು ಸಮಕಾಲೀನತೆ: ಸುಧಾಕರ, ಕುವೆಂಪು ಅವರ ಗುರುವರ್ಗ-ಅವರ ಪ್ರಭಾವ, ಕುವೆಂಪು ಅವರ ಸಸ್ಯಕಾಶಿ; ಆರ್‍ವಿಯಸ್ ಸುಂದರಂ, ನೆನಪಿನ ದೋಣಿಯಲ್ಲಿನ ಕನ್ನಡ ಕವನಗಳು; ಕೆ.ಎನ್. ಶಿವಪ್ಪ ಮುಂತಾದವರ ಲೇಖನಗಳು ಈ ಕೃತಿಯಲ್ಲಿವೆ. 

About the Author

ಹ.ಕ. ರಾಜೇಗೌಡ

ಹ.ಕ. ರಾಜೇಗೌಡರು ಮೂಲತಃ ಮಂಡ್ಯ ನಾಗಮಂಗಲ ತಾಲ್ಲೂಕು ಹನುಮನಹಳ್ಳಿಯವರು. ಕೃಷಿಕ ಕುಟುಂಬದಲ್ಲಿ ಜನಿಸಿದ ರಾಜೇಗೌಡರು ನಾಡಿನ ಪ್ರಮುಖ ಸಂಶೋಧಕರಲ್ಲಿ ಒಬ್ಬರು. ಕನ್ನಡ (ಎಂ.ಎ) ಸ್ನಾತಕೋತ್ತರ ಪದವೀಧರರಾದ ಅವರು ಬೆಂಗಳೂರು, ಕನಕಪುರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ವಿಭಾಗಕ್ಕೆ ಸೇರಿದರು. ರಾಷ್ಟ್ರಕವಿ ಕುವೆಂಪು, ದೇಜಗೌ, ಹಾ.ಮಾ.ನಾಯಕ ಅವರ ಪ್ರಭಾವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ತಮ್ಮ ಸಂಶೋಧನಾ ಕೃತಿಗಳ ಮೂಲಕ ಸಾಹಿತ್ಯಕ ವಲಯದಲ್ಲಿ ಗಣನೀಯ ಕೆಲಸ ಮಾಡಿದ್ದಾರೆ. ವಿಮರ್ಶಾ ಕೃತಿ ’ವಿವೇಚನೆ’ ಕಥಾಸಂಕಲನಗಳಾದ ’ಜಗ್ಗಿನ ಜನಪದ ಕಥೆಗಳು’,’ಮಳೆ ಹುಯ್ಯುತ್ತಿದೆ’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books