’ಕುವೆಂಪು ಕಾವ್ಯಯಾನ’ದಲ್ಲಿ ಬಿ.ಆರ್.ಸತ್ಯನಾರಾಯಣ ಅವರು ಕುವೆಂಪುರವರ ಕವಿತೆಗಳನ್ನೇ ಬಳಸಿಕೊಂಡು ಒಂದು ಕಾವ್ಯ ಪ್ರಯಾಣ(ಯಾನ) ಕೈಗೊಂಡಿದ್ದಾರೆ. ಕವಿತೆಗಳನ್ನು ಕುರಿತ ಬಿಡಿ ಬರಹಗಳು ಓದಿ ಮುಗಿಸಿದಾಗ ಕುವೆಂಪು ಅವರ ಕಾವ್ಯಪ್ರಪಂಚ ಪ್ರವೇಶಿಸಿ, ಸೌಂದರ್ಯಾನುಭವ ಪಡೆದು ಹೊರಬಂದ ಅನುಭವ ಉಂಟಾಗುತ್ತದೆ. ಈ ಪುಸ್ತಕದ ಓದು ಕುವೆಂಪುರವರ ಕವಿತೆಗಳನ್ನು ಪರಿಚಯಿಸುವುದರ ಜೊತೆಗೆ ಕವಿಯ ಜೀವನ ಮತ್ತು ಮನೋಧರ್ಮವನ್ನೂ ಪರಿಚಯಿಸುತ್ತದೆ. ಸತ್ಯನಾರಾಯಣರ ಅವರ ಬರವಣಿಗೆಯು ಏಕಕಾಲಕ್ಕೆ ಸಾಮಾನ್ಯರು ಹಾಗೂ ಪ್ರೌಢರನ್ನೂ ತಣಿಸುತ್ತದೆ. ಮಹಾಕವಿ ಕುವೆಂಪು ಅವರು ದಾರ್ಶನಿಕರಾಗಿ ಸಾಂಸ್ಕೃತಿಕ ನಾಯಕರಾಗಿ ವರ್ತಮಾನಕ್ಕೆ ಹೇಗೆ ಮುಖ್ಯ ಎಂಬುದನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ.
ವೃತ್ತಿಯಿಂದ ಗ್ರಂಥಪಾಲಕರಾಗಿರುವ ಡಾ. ಬಿ.ಆರ್. ಸತ್ಯನಾರಾಯಣ ಅವರು ಪ್ರವೃತ್ತಿಯಿಂದ ಸಂಶೋಧಕ- ಲೇಖಕರೂ ಹೌದು. ಕೃಷಿಯಲ್ಲಿ ಆಸಕ್ತರಾಗಿರುವ ಸತ್ಯನಾರಾಯಣ ಅವರು ಹಳ್ಳಿ-ನಗರಗಳ ನಡುವೆ ಓಡಾಡಿದ ಅನುಭವದ ಹಿನ್ನೆಲೆಯಲ್ಲಿ ’ವೈತರಣೀ ದಡದಲ್ಲಿ (ಕವನ ಸಂಕಲನ) ಮತ್ತು ಮುಡಿ (ಕಥಾ ಸಂಕಲನ) ಪ್ರಕಟಿಸಿದ್ದಾರೆ. ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ, ಕಲ್ಯಾಣದ ಚಾಲುಕ್ಯರು, ಸರಸ್ವತಿ- ವಿಸ್ಮಯ ಸಂಸ್ಕೃತಿ ಸಂಶೋಧನಾ ಕೃತಿ ರಚಿಸಿದ್ದಾರೆ. ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ ಅವರ ಕೃತಿಗಳ ಸಾರ ಸೂಚಿ ಹೊಂದಿರುವ ’ಹಂಪನಾ ವಾಙ್ಮಯ’ ಪ್ರಕಟಿಸಿರುವ ಅವರು ಪೇಜತ್ತಾಯ ಅವರ ’ರೈತನಾಗುವ ಹಾದಿಯಲ್ಲಿ’ ಮತ್ತು ’ಕಾಗದದ ದೋಣಿ’ ಕೃತಿಗಳನ್ನು ಸಂಪಾದಕರಾಗಿ ಹೊರ ...
READ MORE