ಕುವೆಂಪು ಕಥನ ಕೌತುಕ

Author : ನರಹಳ್ಳಿ ಬಾಲಸುಬ್ರಹ್ಮಣ್ಯ

Pages 184

₹ 150.00




Year of Publication: 2016
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಈ ಪುಸ್ತಕವು ಕುವೆಂಪು ಅವರ ಕುರಿತ ಸಮಗ್ರ ಅಧ್ಯಯನ ಮಾಲಿಕೆಯ ಮೂರನೇ ಕೃತಿ. ನಾಟಕವನ್ನು ಹೊರತು ಪಡಿಸಿ ಕುವೆಂಪು ಅವರ ಗದ್ಯ ಶೈಲಿಯ ಬರೆವಣಿಗೆಯ ಕುರಿತು ಬರೆಯಲಾಗಿರುವಂತಹ ವಿಶ್ಲೇಷಣಾತ್ಮಕ ಪುಸ್ತಕ. ಕುವೆಂಪು ಅವರ ಸೃಜಾನಾತ್ಮಕ ಬರೆವಣಿಗೆಗಳ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಆರು ಅಧ್ಯಾಯಗಳಿಂದ ಸಂಪೂರ್ಣಗೊಳ್ಳುವ ಈ ಪುಸ್ತಕ, ಗದ್ಯ ಸಾಹಿತ್ಯದಲ್ಲಿ ಕುವೆಂಪು ಅವರ ಕೊಡುಗೆಯ ಕುರಿತು ಸಮಗ್ರವಾದ ಪರಿಕಲ್ಪನೆಯನ್ನು ಓದುಗರಿಗೆ ನೀಡುತ್ತದೆ. ಕುವೆಂಪು ಅವರ ಬರೆವಣಿಗೆಯಲ್ಲಿ ಪ್ರತೀ ಬಾರಿಯೂ ಕಾಣಸಿಗುವ ಮಲೆನಾಡು, ಅಲ್ಲಿನ ಜನತೆ, ನಂಬಿಕೆ, ಆಚರಣೆಗಳು ಇಂತಹ ಎಲ್ಲಾ ಅಂಶಗಳ ಕುರಿತು ಈ ಪುಸ್ತಕದಲ್ಲಿನ ಪದಗಳು ಮಾತನಾಡುತ್ತವೆ. ಗದ್ಯದ ಕುರಿತು ಮಾಡುವ ವಿಮರ್ಶೆಯಲ್ಲಿ, ಯಾಕೆ ಕುವೆಂಪು ಅವರ ಕಥೆಗಳನ್ನು ಕನ್ನಡ ಸಾಹಿತ್ಯ ರಂಗ ಪ್ರಸ್ತಾಪಿಸದೆ ಇದೆ ಎಂಬ ಪ್ರಶ್ನೆಯನ್ನು ಈ ಪುಸ್ತಕ ಹುಟ್ಟು ಹಾಕುತ್ತದೆ. ಕುವೆಂಪು ಅವರು ಬರೆದಂತಹ ಕಥೆಗಳ ಸಮಗ್ರ ಅಧ್ಯಯನವನ್ನು ಲೇಖಕರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಓಟ್ಟಿನಲ್ಲಿ ಕುವೆಂಪು ಅವರ ಒಟ್ಟೂ ಬರೆವಣಿಗೆಯ, ಜೀವನ ದೃಷ್ಟಿಯ ದರ್ಶನವನ್ನು ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಪುಸ್ತಕ ನೀಡುತ್ತದೆ.

ಬೆನ್ನುಡಿಯಲ್ಲಿ ಪುಸ್ತಕದ ಬಗ್ಗೆ ಮಾಹಿತಿ ಹೀಗಿದೆ-

ಕುವೆಂಪು ನಿಸ್ಸಂದೇಹವಾಗಿ ನಮ್ಮ ಕಾಲದ ಶ್ರೇಷ್ಠ ಕಥನ ಪ್ರತಿಭೆ. ಆಧುನಿಕ ಸಂದರ್ಭದಲ್ಲಿ 'ಮಹಾಕಾವ್ಯ' ರಚಿಸಿ ಹೊಸ ಹಾದಿ ತೋರಿದಂತೆ 'ಆಧುನಿಕ ಮಹಾಕಾವ್ಯ'ವೆನ್ನಿಸಿದ ಕಾದಂಬರಿ ಪ್ರಕಾರದಲ್ಲೂ ಅವರದು ಅನನ್ಯ ಸಾಧನೆ. ಸಮಕಾಲೀನ ವಸ್ತುಜಗತ್ತನ್ನು ಆರಿಸಿಕೊಂಡು ಆ ಮೂಲಕ ಹೊಸ 'ಚರಿತ್ರೆ'ಯನ್ನು ರೂಪಿಸುವ ಕುವೆಂಪು ಅವರ ಕಥಾಸಾಹಿತ್ಯ ಕೇವಲ ಕಥನ ವಿಲಾಸ ಮಾತ್ರವಲ್ಲ, ಚರಿತ್ರೆಯ ಪುನಾರಚನೆ. ಸ್ಥಳೀಯ ಚೈತನ್ಯವನ್ನು, ಅಸ್ಮೃತಿ ರೂಪದಲ್ಲಿರುವ ಈ ನೆಲದ ಅಂತಃಸತ್ವವನ್ನು, ಅಂತರ್ಗತವಾಗಿರುವ ಜನಸಮುದಾಯದ ಸೃಜನಶೀಲ ಪ್ರತಿಭೆಯನ್ನು ತಮ್ಮ ಕಥಾಸಾಹಿತ್ಯದಲ್ಲಿ ಅನಾವರಣಗೊಳಿಸುವ ಮೂಲಕ ಕುವೆಂಪು ನವವಸಾಹತುಶಾಹಿಗೆ ಸೃಜನಶೀಲ ನೆಲೆಯಲ್ಲಿ ಮುಖಾಮುಖಿಯಾಗುತ್ತಾರೆ. ಹೀಗಾಗಿಯೇ ಕುವೆಂಪು ನಮ್ಮ ಕಾಲದ 
ಅತ್ಯಂತ ಮಹತ್ವದ ಲೇಖಕ.

About the Author

ನರಹಳ್ಳಿ ಬಾಲಸುಬ್ರಹ್ಮಣ್ಯ
(05 September 1953)

ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಮಂಡ್ಯ ಜಿಲ್ಲೆಯ ನರಹಳ್ಳಿಯಲ್ಲಿ1953 ಸೆಪ್ಟೆಂಬರ್ 5ರಂದು ಜನಿಸಿದರು. 1973ರಲ್ಲಿ ಬಿ.ಎ. (ಆನರ್), 1975ರಲ್ಲಿ ಎಂ.ಎ. ಪದವಿಗಳನ್ನು ಪ್ರಥಮ ಬ್ಯಾಂಕ್, ಚಿನ್ನದ ಪದಕಗಳೊಂದಿಗೆ ಪಡೆದ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜ್ಯಪ್ರಶಸ್ತಿ ಮನ್ನಣೆ ಗಳಿಸಿದ್ದರು. ಭಾರತ ಸರ್ಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದವರು. 1992ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ.  ಪಡೆದಿರುವ ನರಹಳ್ಳಿಯವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. 'ಅನುಸಂಧಾನ', 'ನವ್ಯತೆ', 'ಇಹದ ಪರಿಮಳದ ಹಾದಿ', 'ಸಾಹಿತ್ಯ ಸಂಸ್ಕೃತಿ', “ಕುವೆಂಪು ನಾಟಕಗಳ ಅಧ್ಯಯನ', ...

READ MORE

Related Books