ಡಾ. ಆರ್. ರೇಣುಕಾ ಹಾಗೂ ಡಾ. ಎಸ್. ಭಾಗ್ಯಲಕ್ಷ್ಮಿ ಅವರೊಂದಿಗೆ ಡಾ. ಕಾ.ವೆಂ. ಶ್ರೀನಿವಾಸ ಮೂರ್ತಿ ಅವರು ಬರೆದ ಕೃತಿ-ಕೋಮು ಸಾಮರಸ್ಯ: ಶತಮಾನಗಳ ಕಾವ್ಯ ಸಾಕ್ಷಿ. ಶತಮಾನಗಳ ಕಾವ್ಯಗಳನ್ನು ಇಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.
ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಅವರು ಬೆಂಗಳೂರು ಉತ್ತರಕಾವಲು ಭೈರಸಂದ್ರದವರು. ಉಪನ್ಯಾಸಕರಾಗಿದ್ದಾರೆ. ಚಂದ್ರತಾರೆ ಊರಿನಲ್ಲಿ, ಹೃದಯ ವಿಹಾರಿ, ಬದುಕು, ಕಾವ್ಯಕೋಗಿಲೆ, ನಿತ್ಯಶ್ರಾವಣ, ಅಭಿಮಾನದ ಹಣತೆ, ಮಣ್ಣಿನ ದೋಣಿ, ಆಯ್ದ ಭಾವಗೀತೆಗಳು (ಕಾವ್ಯ), ನೆಲದ ಕಣ್ಣ, ಮೌನ ಮಾತಾದಾಗ, ಕನ್ನಡ ರಂಗಭೂಮಿ, ಕನ್ನಡ ಚಳುವಳಿ ಮತ್ತು ಚಿಂತನ, ಉರಿಯಪೇಟೆ (ವಿಮರ್ಶೆ), ಕನ್ನಡ ಸಾಹಿತ್ಯ ಮತ್ತು ಕರ್ನಾಟಕತ್ವ, ಅಭಿರಾಮ, ಕನ್ನಡ ಭೇರಿ, ಬಂಡಾಯ ಕಾಲು ಶತಮಾನ (ಸಂಪಾದನೆ), ಕನ್ನಡ ಕಾವ್ಯದಲ್ಲಿ ನಾಡು ನುಡಿ ಚಿಂತನೆ (ಪಿಎಚ್ಡಿ ಮಹಾಪ್ರಬಂಧ). ...
READ MORE(ಹೊಸತು, ಅಕ್ಟೋಬರ್ 2014, ಪುಸ್ತಕದ ಪರಿಚಯ)
ಕ್ರೌರ್ಯದ ಪರಮಾವಧಿಯೇ ರಕ್ತಪಾತ, ಅದಂತೂ ಯಾರಿಗೂ ಇಷ್ಟವಿರುವುದಿಲ್ಲ. ಮಾನವ ಜನಾಂಗ ಒಂದೇ ಆದರೂ ಅಲ್ಲಿಯೂ ಮೇಲು-ಕೀಳು-ವರ್ಗ-ಧರ್ಮ-ಜಾತಿ ಭೇದಗಳನ್ನು ಸೃಷ್ಟಿಸಿಕೊಂಡು ದ್ವೇಷದಿಂದ ಬಡಿದಾಡುವುದು ಪುರಾಣಕಾಲದಿಂದಲೂ ಇದ್ದಿತು. ಈಗಂತೂ ಅದು ಮೇರೆ ಮೀರಿ ಮೆರೆದಾಡುತ್ತಿದೆ. ರಾಜ-ಮಹಾರಾಜರುಗಳು ತಮ್ಮ ಸಾಮ್ರಾಜ್ಯ ವಿಸ್ತರಿಸುವ ನೆಪದಲ್ಲಿ ಭೂಮಿಯ ಮೇಲೆ ರಕ್ತದ ಹೊಳೆಗಳನ್ನೇ ಹರಿಸಿದ್ದಾರೆ. ಇವೆಲ್ಲವೂ ಮೌಖಿಕ ಹಾಡುಗಳಾಗಿ, ಕಥನಗಳಾಗಿ ಮುಂದೆ ಸಾಹಿತ್ಯ-ಕಾವ್ಯಗಳಲ್ಲಿ ದಾಖಲಾಗಿ ಇಂದಿಗೂ ನಮ್ಮ ಕಣ್ಣಮುಂದಿವೆ. ಯಾಕೆ ಈ ವಿದ್ವೇಷ ? ಹಿಂದಿನವರು ಶಾಂತಿ-ಸೌಹಾರ್ದ - ಸಾಮರಸ್ಯದ ಬಗ್ಗೆ ಚಿಂತಿಸಿಲ್ಲವೆ ? ಇಂತಹ ಅಮಾನವೀಯ ಕೃತ್ಯಗಳನ್ನು ಖಂಡಿಸಿಲ್ಲವೆ ? ಖಂಡಿತವಾಗಿಯೂ ಮಾನವ ಕುಲವೆಲ್ಲ ಒಂದೇ ಎಂದು ಪಂಪನಂತಹ ಆದಿಕವಿಯೇ ಘೋಷಿಸಿದ್ದಾನೆ. ಅಂದಿನ ವರ್ಗ ತಾರತಮ್ಯವೇ ಇನ್ನಷ್ಟು ಬಣ್ಣ ಬಳಿದುಕೊಂಡು ಕೋಮು ವಿದ್ವೇಷದ ಘೋರ ರೂಪ ತಾಳಿ ಇಂದು ನಮ್ಮ ಮುಂದೆ ನಿಂತಿದೆ. ಶತಮಾನಗಳಿಂದಲೂ ದಾಖಲಾದ ಕಾವ್ಯಗಳನ್ನು ಅವಲೋಕಿಸಿದರೆ ಸಹೃದಯ ಕವಿಗಳು ಜನತೆಯಲ್ಲಿ ಸಾಮರಸ್ಯವನ್ನು ಮೂಡಿಸಲು ತಮ್ಮ ಲೇಖನಿಯನ್ನು ಬಳಸಿದ್ದು ವೇದ್ಯವಾಗುತ್ತದೆ. ಅಂತಹ ಕಾವ್ಯಗಳನ್ನು ತಾಳ್ಮೆಯಿಂದ ಸಂಗ್ರಹಿಸಿಕೊಟ್ಟಿದ್ದಾರೆ. ಡಾ| ಕಾ. ವೆಂ. ಶ್ರೀನಿವಾಸ ಮೂರ್ತಿ ಹಾಗೂ ಸಹಲೇಖಕರು. ಕೋಮು ಸಾಮರಸ್ಯವನ್ನು ಪಸರಿಸಲು ಇಲ್ಲಿನ ಕವಿತೆಗಳು ನೆರವಾಗಬಹುದೇನೋ!