ವಿಮರ್ಶೆಯ ಪೂರ್ವ ಪಶ್ಚಿಮ, ಸೌಂದರ್ಯ ಸಮೀಕ್ಷೆ, ಕಾವ್ಯಾರ್ಥ ಚಿಂತನ, ಮಹಾಕಾವ್ಯ ಸ್ವರೂಪ, ಅನುರಣನ, ಕನ್ನಡ ಕವಿಗಳ ಕಾವ್ಯಕಲ್ಪನೆ ಹೀಗೆ ಹತ್ತು ಹಲವು ವಿಮರ್ಶಾ ಕೃತಿಗಳನ್ನು ರಚಿಸಿರುವ ಕವಿ ಶಿವರುದ್ರಪ್ಪನವರು ಸಾಹಿತಿ ಕೆ.ವಿ. ನಾರಾಯಣ ಅವರೊಂದಿಗೆ ಜಂಟಿಯಾಗಿ ರಚಿಸಿರುವ ಕೃತಿ-ಕಾವ್ಯಾರ್ಥ್ಯ ಪದಕೋಶ. ವಿಷಯದ ಆಯ್ಕೆ, ನಿರೂಪಣಾ ಶೈಲಿ, ಪೂರಕ ಮಾಹಿತಿ ಸಂಗ್ರಹದ ವೈಖರಿ ಎಲ್ಲವೂ ಕೃತಿಯ ಆಕರ್ಷಣೆ ಹಾಗೂ ಮಹತ್ವಕ್ಕೆ ತನ್ನದೇ ಆದ ಸಮರ್ಥನೆ ಹೊಂದಿರುವ ಕೃತಿ ಇದು.
ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ...
READ MORE