‘ಕನ್ನಡ ಕಾದಂಬರಿ ಲೋಕದಲ್ಲಿ ಹೀಗೆ ಹಲವು’ ಅಮೆರಿಕದಲ್ಲಿ ನೆಲೆಸಿರುವ ಹಲವು ಕನ್ನಡ ಬರಹಗಾರರು ಕನ್ನಡ ಕಾದಂಬರಿಗಳ ಬಗ್ಗೆ ಬರೆದಿರುವ ವಿಮರ್ಶೆಗಳ ಸಂಕಲನ.
ತವರು ಮನೆಯಿಂದ ದೂರ ಹೋದ ಮಕ್ಕಳು ಮನೆಯನ್ನು ತಾಯಿಯನ್ನು ನೆನೆವ ಬಗೆ ಹಲವಾರು. ಈ ಕೃತಿಯಲ್ಲಿ ಕಾಣುವುದೂ ಇದುವೇ. ಅಮೆರಿಕದಲ್ಲಿಯ ಕನ್ನಡ ಸಾಹಿತ್ಯ ರಂಗ ಅಲ್ಲಿ ನೆಲೆಸಿರುವ ಇಪ್ಪತ್ತಕ್ಕೂ ಮಿಕ್ಕಿದ ಹಿರಿಕಿರಿಯ, ಪಬರಹಗಾರರು, ಹವ್ಯಾಸಿಗರು ಮತ್ತು ಹರಿತ ಓದುಗರ ಮೂಲಕ ಕನ್ನಡದ ಕೆಲ ಮುಖ್ಯ ಕಾದಂಬರಿಗಳ ಕುರಿತು ಇಲ್ಲಿ ಅವಲೋಕನ ನಡೆಸಲಾಗಿದೆ.
ಒಮ್ಮೆಗೇ, ಒಟ್ಟಿಗೇ ತೆರೆದುಕೊಂಡ ಈ ರೀತಿಯ ಕಾದಂಬರಿ ಅವಲೋಕನವೂ ಚರ್ಚೆಯೂ ಕನ್ನಡ ಸಾಹಿತ್ಯದ ಮಟ್ಟಿಗೆ ಪ್ರಾಯಶಃ ಪ್ರಪ್ರಥಮ ಎನಿಸುತ್ತಿದೆ. ತಮಗೆ ಕನ್ನಡದ ಮೂಲಕ ಒಡಲು ಸೇರಿದ ಸಾಹಿತ್ಯಾನುಭವವನ್ನು ತಮಗೂ ಇತರರಿಗೂ ಅನುಭವಿಸುವಂತೆ ಮಾಡುವ ಸ್ತುತ್ಯ ಪ್ರಯತ್ನವಿದು. ದೂರದೇಶದ ವಾಸವೆಂಬುದು ಬಿಟ್ಟು ಬಂದ ನೆಲವನ್ನು ವ್ಯಕ್ತಿಗಳನ್ನು ಭಾಷೆಯನ್ನು ಎಷ್ಟು ಗಾಢವಾಗಿ ನೆನೆಯುವಂತೆ ಮಾಡುತ್ತದೆ. ಒಂದು ರೀತಿಯಲ್ಲಿ ಇದು ಗೋಲದ ಇನ್ನೊಂದು ಬದಿಯಲ್ಲಿ ನಡೆಯುತ್ತಿರುವ ಕನ್ನಡದ ಉಸಿರಾಟ, ಕನ್ನಡದ ಪ್ರಾಣಾಯಾಮವೆಂದರೂ ಸರಿಯೆ. 'ಕನ್ನಡತನು'ವನ್ನು ಮನವನ್ನು ಕಾಪಾಡಿಕೊಳ್ಳುವ, ದೂರವಿದ್ದೂ ಸನಿಹವಿರುವ, ಸಹ-ವಾಸಿಸುವ ಒಂದು ಕ್ರಮವೂ ಇದಾಗಿರಬಹುದು. ಒಟ್ಟಿನಲ್ಲಿ, ಈ ಮುಖಾಂತರ ಕನ್ನಡ ಸಾಹಿತ್ಯದ ವಿಮರ್ಶಾ ಕ್ಷೇತ್ರಕ್ಕೆ ಹೆಚ್ಚಿನ ವ್ಯಾಪ್ತಿ ದೊರೆತಂತಾಗಿದೆ.'ಸಹೃದಯ ವಿಮರ್ಶೆ' ಎಂಬುದಕ್ಕೆ ಈ ಹೊತ್ತಗೆ ಒಂದು ಉತ್ತಮ ಮಾದರಿ ಎನ್ನಬಹುದು.
ಮೈ.ಶ್ರೀ. ನಟರಾಜ-ಹುಟ್ಟೂರು ಹಾಸನ, ಅರವತ್ತರ ದಶಕದ ಕೊನೆಯಲ್ಲಿ ಅಮೆರಿಕೆಗೆ ತೆರಳಿ, ಅಮೆರಿಕದ ಅಣುಶಕ್ತಿ ನಿಯಂತ್ರಣ ಆಯೋಗದಲ್ಲಿ ರಾಕ್ ಮೆಕ್ಯಾನಿಕ್ಸ್ ವಿಭಾಗಾಧಿಕಾರಿ ಮತ್ತಿತರ ಜವಾಬ್ದಾರಿಗಳೊಂದಿಗೆ ಸೇವೆ ಸಲ್ಲಿಸಿ ನಿವೃತ್ತರಾಗಿ ಮೇರೀಲ್ಯಾಂಡಿನಲ್ಲಿ ಪತ್ನಿ ಗೀತಾರೊಂದಿಗೆ ವಾಸವಿದ್ದಾರೆ. ನಾನೂ ಅಮೆರಿಕನ್ ಆಗಿಬಿಟ್ಟೆ, ಮಧುಚಂದ್ರ, ಸಿರಿಕೇಂದ್ರ (ಕವನ ಸಂಕಲನ), ಮೀನಿನ ಹೆಜ್ಜೆ, ಮತ್ತು ನೇಣು, ಪರದೇಶಿಗಳ ಪಾರ್ಟಿ ಮತ್ತು ಇತರ ಮೂರು ನಾಟಕಗಳು. ಮತ್ತು ಐ ಆ್ಯಮ್ ಬ್ರಾಹ್ಮಣ್ (ನಾಟಕಗಳು), ಜಾಲತರಂಗ, ಮತ್ತು ಜಾಲತರಂಗಿಣಿ (ಅಂಕಣ ಬರಹಗಳು) , ಮಾಯಾವಿ ಸರೋವರ (ಅನುವಾದಿತ ನಾಟಕ) The void and the womb (ಬಯಲು-ಬಸಿರು) ...
READ MORE