ಕಂಬಾರರ ಕಾವ್ಯ ಮತ್ತು ನಾಟಕವು ಕೀರ್ತಿನಾಥ ಕುರ್ತಕೋಟಿ ಅವರ ವಿಮರ್ಶಾ ಲೇಖನಗಳ ಕೃತಿಯಾಗಿದೆ. ಡಾ. ಚಂದ್ರಶೇಖರ ಕಂಬಾರರ ಕಾವ್ಯ, ನಾಟಕಗಳ ಕುರಿತಾಗಿ ಬರೆದಿರುವ ಈ ಕೃತಿ ಇದೀಗ, ಕುರ್ತಕೋಟಿಯವರು ತೀರಿ ಹೋಗಿ ಎರಡು ದಶಕಗಳಾದ ಬಳಿಕ ಪ್ರಕಟವಾಗುತ್ತಿದೆ. ಕಳೆದ ಇಪ್ಪತ್ತು ವರುಷಗಳಲ್ಲಿ ಕಾದಂಬರಿಗಳೂ ಸೇರಿದಂತೆ ಕಂಬಾರರ ಹಲವು ಪ್ರಮುಖ ಕೃತಿಗಳು ಪ್ರಕಟವಾಗಿವೆ. ಆದರೂ ಕುರ್ತಕೋಟಿಯವರ ವಿಮರ್ಶಾ ಒಳನೋಟಗಳು ಕಂಬಾರರ ಒಟ್ಟು ಸಾಹಿತ್ಯವನ್ನು ಅರಿಯಲು ಮಹತ್ವವಾದ ಮಾತುಗಳನ್ನು ಹೇಳುತ್ತವೆ ಎಂಬುದು ಈ ಕೃತಿಯ ಗರಿಮೆಯಾಗಿದೆ.
ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರ ಕೀರ್ತಿನಾಥ ಕುರ್ತಕೋಟಿ ಅವರು 12-10-1928ರಂದು ಗದಗಿನಲ್ಲಿ ಜನಿಸಿದರು. ತಂದೆ ಡಿ.ಕೆ.ಕುರ್ತಕೋಟಿ, ತಾಯಿ-ಪದ್ಮಾವತಿಬಾಯಿ. ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, ಗುಜರಾತಿಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ ಧಾರವಾಡಕ್ಕೆ ಮರಳಿದರು. ಜಿ.ಬಿ.ಜೋಶಿಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯ ಸಲಹಾಕಾರರಾಗಿದ್ದರು. ಜೊತೆಗೆ ಪ್ರಜಾವಾಣಿಯಲ್ಲಿ ವಾರವಾರವೂ ಪ್ರಕಟವಾಗುತ್ತಿದ್ದ "ಉರಿಯ ನಾಲಗೆ" ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು. 1959ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತ ವರ್ಷದ ಹೊತ್ತಿಗೆ “ನಡೆದು ...
READ MORE