'ಕಾಲು ದಾರಿ’ ಲಕ್ಷ್ಮೀಪತಿ ಕೋಲಾರ ಅವರ ವಿಮರ್ಶಾ ಲೇಖನಗಳಾಗಿವೆ. ಇಲ್ಲಿನ ಲೇಖನಗಳಲ್ಲಿ ಸಾಮಾಜಿಕ-ರಾಜಕೀಯ ಚಿಂತನೆಗಳನೂ ಮಾಡಲಾಗಿದ್ದು ಒಟ್ಟಿನಲ್ಲಿ ತುಂಬ ಮಹತ್ವದ ವಿಚಾರ-ವಿಮರ್ಶೆಯನ್ನು ಒಳಗೊಂಡಿದೆ.
ಕೋಲಾರ ಮೂಲದ ಲಕ್ಷ್ಮೀಪತಿ ಕೋಲಾರ ಅವರು ಹವ್ಯಾಸಿ ಪತ್ರಕರ್ತರು, ಕವಿ, ವಿಮರ್ಶಕ, ನಾಟಕಕಾರ, ಜಾನಪದ ಸಂಶೋಧಕರು. ದಕ್ಷಿಣ ದಂಡಾಜೀವಿಕ, ಅಲ್ಲಮನ ಬಯಲಾಟ (ನಾಟಕ) ಇತ್ಯಾದಿ ಕೃತಿಗಳನ್ನು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಶಸ್ತಿ-ಗೌರವಗಳು: ಗಿರೀಶ್ ಕಾಸರವಳ್ಳಿ, ನಾಗಾಭರಣ ನಿರ್ದೇಶಿಸಿದ ರಾಜ್ಯ,ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳಿಗೆ ಅವರು ಸಂಭಾಷಣೆ ಬರೆದಿದ್ದಾರೆ. ಅವರ ’ಬೇರು’ ಮತ್ತು ’ಮುಖಾಮುಖಿ’ ಚಲನಚಿತ್ರಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಎರಡು ಬಾರಿ ಬಹುಮಾನ ಬಂದಿದೆ. ವೀಚಿ ಸಾಹಿತ್ಯ ಪ್ರಶಸ್ತಿ, ಜೋಳದರಾಶಿ ದೊಡ್ಡಣ ಗೌಡ ಪ್ರಶಸ್ತಿ, ಸಂಸ ರಂಗಪುರಸ್ಕಾರ ಪ್ರಶಸ್ತಿಗಳೂ ಸಂದಿವೆ. ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ...
READ MOREಹೊಸತು-2002- ಜನವರಿ
ಅತ್ಯಂತ ಮೇಲ್ಮಟ್ಟದ ಯೋಚನಾ ಲಹರಿಗಳಿಂದ ಹಾಗೂ ಸ್ವಂತಿಕೆಯಿಂದ ಕೃತಿ ವಿಮರ್ಶೆಗೆ ತೊಡಗುವ ಲಕ್ಷ್ಮೀಪತಿ ಕೋಲಾರ ಓದುಗನನ್ನೂ ಅದೇ ದಾರಿಯಲ್ಲಿ ಕೊಂಡೊಯ್ದು ಚಿಂತನೆಗೆ ಹಚ್ಚುತ್ತಾ ಮುಂದಿನ ಓದಿನ ಹುಡುಕಾಟಕ್ಕೆ ಅಣಿಗೊಳಿಸುತ್ತಾರೆ. ಕೃತಿಕಾರನ ಓದಿಗಿಂತ ವಿಮರ್ಶಕನ ವಿಚಾರಗಳು ಓದುಗನಿಗೆ ದಾರಿದೀಪ. ಇಲ್ಲಿನ ಲೇಖನಗಳಲ್ಲಿ ಸಾಮಾಜಿಕ-ರಾಜಕೀಯ ಚಿಂತನೆಗಳನ್ನೂ ಮಾಡಲಾಗಿದ್ದು ಒಟ್ಟಿನಲ್ಲಿ ತುಂಬ ಮಹತ್ವದ ವಿಚಾರ-ವಿಮರ್ಶೆ ಓದುವ ಸದವಕಾಶ.